ಹೆಚ್ಚಿನ ಬದಲಾವಣೆಗಳೊಂದಿಗೆ ಮುಂದಿನ ಐಫೋನ್ ಲಾಂಚ್ ಶೀಘ್ರದಲ್ಲೇ
2015 ರ ಮಧ್ಯಭಾಗದಲ್ಲಿ ಮುಂದಿನ ಐಫೋನ್ ಹ್ಯಾಂಡ್‌ಸೆಟ್ ಲಾಂಚ್ ಆಗುವ ನಿರೀಕ್ಷೆಯಲ್ಲಿದೆ. ವದಂತಿಗಳ ಪ್ರಕಾರ ಆಪಲ್‌ನ ಮುಂಬರಲಿರುವ ಐಫೋನ್ ಮಾಡೆಲ್‌ಗಳು ಸ್ಲಿಮ್ ಮತ್ತು ಹಗುರವಾಗಲಿವೆ. 8 ಮೆಗಾಪಿಕ್ಸೆಲ್ ಕ್ಯಾಮೆರಾದ ಬದಲಿಗೆ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನಾವು ಇದರಲ್ಲಿ ಕಾಣಬಹುದು. ಆಪಲ್ ಎ10 ಚಿಪ್‌ಗಳನ್ನು ಐಫೋನ್‌ನ ಮಾಡೆಲ್‌ಗಳಲ್ಲಿ ಮುಂದಿನ ವರ್ಷದಿಂದ ಬಳಸಲಾಗುತ್ತದೆ.

ಬ್ಯಾಕ್‌ಲೈಟ್ ಯೂನಿಟ್‌ಗಳಿಗೆ 0.4 ಟಿ ಎಲ್‌ಇಡಿ ಚಿಪ್‌ಗಳನ್ನು ಆಪಲ್ ಐಫೋನ್‌ಗೆ ಅಳವಡಿಸಲಿದ್ದು ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ನಲ್ಲಿ ಬಳಸಲಾದ ಚಿಪ್‌ಗಳಿಗಿಂತಲೂ ಇದು ಸಣ್ಣದಾಗಿದೆ. ಈ ಎಲ್‌ಇಡಿ ಚಿಪ್‌ಗಳನ್ನು ಜಪಾನ್ ಆಧಾರಿತ ನಿಚಿಯಾ ಮತ್ತು ಟೊಯೋಡಾ ಗೋಸ್‌ನಿಂದ ಬಳಸುತ್ತಿದೆ.
ಓದಿರಿ: ಫ್ಲಿಪ್‌ಕಾರ್ಟ್ ಹಾಟ್ ಸೇಲ್: ಫೋನ್‌ಗಳ ಮೇಲೆ ದರಕಡಿತ
ಇನ್ನು ಹೊಸ ಐಫೋನ್ ಮಾಡೆಲ್‌ಗಳು 4.7 ಇಂಚು ಮತ್ತು 5.5 ಇಂಚಿನ ಸ್ಕ್ರೀನ್‌ಗಳನ್ನು ಪಡೆದುಕೊಳ್ಳಲಿದ್ದು 24 ಮಿಲಿಯನ್ ಯೂನಿಟ್‌ಗಳನ್ನು ಪ್ರಾಥಮಿಕವಾಗಿ ಕಂಪೆನಿ ಶಿಪ್ಪಿಂಗ್ ಮಾಡಲಿದೆ.
ಇನ್ನು ಈ ಐಫೋನ್‌ನಲ್ಲಿ ಪ್ರಧಾನವಾಗಿರುವ ಅಂಶವೆಂದರೆ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ರಿಯರ್ ಆಗಿ ಬಳಸುತ್ತಿದೆ ಎಂಬುದಾಗಿದೆ. ಇತರ ಐಫೋನ್ ಇದೇ ಕ್ಯಾಮೆರಾ ಸೆನ್ಸಾರ್ ಅನ್ನು ಬಳಸುತ್ತಿದೆಯೇ ಎಂಬ ಮಾಹಿತಿ ದೊರಕಿಲ್ಲ.


Click it and Unblock the Notifications




