ಕಣ್ಣು ಕುಕ್ಕುವ ಐಫೋನ್ 7 ಚಮತ್ಕಾರೀ ನೋಟ

Written By:

ಆಪಲ್‌ನ ಚಮತ್ಕಾರೀ ಐಫೋನ್ 6 ನ ಬೆರಗನ್ನು ನೋಡುತ್ತಾ ಮೈಮರೆಯುವ ಸಂದರ್ಭದಲ್ಲೇ ಐಫೋನ್ 7 ಅನ್ನು ಲಾಂಚ್ ಮಾಡುವ ತೀರ್ಮಾನಕ್ಕೆ ಆಪಲ್ ಸಜ್ಜಾಗುತ್ತಿದೆ. ನೆಕ್ಸ್ಟ್ ಜನರೇಶನ್ ಐಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಆಪಲ್ ಉತ್ಪನ್ನ ಐಫೋನ್ 7 ಹೇಗಿರುತ್ತದೆ ಎಂಬುದು ಅಭಿಮಾನಗಳಲ್ಲಿ ತೀವ್ರ ಕುತೂಹಲವನ್ನು ಕೆರಳಿಸುತ್ತಿದೆ.

ಓದಿರಿ: ಐಫೋನ್ 7: ಆಪಲ್‌ಗೆ ಶುಕ್ರದೆಸೆ ಸ್ಯಾಮ್‌ಸಂಗ್‌ಗೆ ಶನಿದೆಸೆ

ಈ ವರ್ಷದ ಕೊನೆಯಲ್ಲಿ ಲಾಂಚ್ ಆಗಲಿರುವ ಐಫೋನ್ 7 ಅತ್ಯದ್ಭುತ ವಿನ್ಯಾಸದಿಂದ ಕಣ್ಣುಕುಕ್ಕುವಂತಿದ್ದು ಮಾರುಕಟ್ಟೆಯಲ್ಲಿ ಅರಸನಾಗಿ ಬಾಳುವ ಎಲ್ಲಾ ಲಕ್ಷಣವನ್ನು ಹೊಂದಿದೆ. ಮಾರುಕಟ್ಟೆ ಪ್ರತಿಸ್ಪರ್ಧಿಗಳೆಂದೆನಿಸಿರುವ ಶ್ಯೋಮಿ ಮತ್ತು ಸ್ಯಾಮ್‌ಸಂಗ್‌ಗೆ ಬಲವಾದ ಹೊಡೆತವನ್ನು ಆಪಲ್ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ 7

ಐಫೋನ್ 7

ಗ್ಯಾಲಕ್ಸಿ ನೋಟ್ 5 ಗೆ ಎದುರಾಗಿ ಐಫೋನ್ 7 ನ ಲಾಂಚ್ ಅನ್ನು ಆಪಲ್ ಸಪ್ಟೆಂಬರ್‌ನಲ್ಲಿ ನಡೆಯಲಿರುವ ಐಎಫ್‌ಎ ಬರ್ಲಿನ್ ಟೆಕ್ ಶೋದಲ್ಲಿ ನಡೆಸಬಹುದು ಎಂಬುದು ಮೂಲಗಳ ಸಾರವಾಗಿದೆ.

ಆಪಲ್

ಐಫೋನ್ 7

ಆಪಲ್ ಈ ಕುರಿತು ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲದಿದ್ದರೂ ಊಹಪೋಹಗಳಿಂದ ಹರಿದು ಬರುತ್ತಿರುವ ಸುಂದರ ವಿನ್ಯಾಸಗಳು ಐಫೋನ್ 7 ನ ಸೌಂದರ್ಯಕ್ಕೆ ನಮ್ಮನ್ನು ಮಾರುಹೋಗುವಂತೆ ಮಾಡುವುದು ಖಂಡಿತ.

ವಿನ್ಯಾಸ

ಐಫೋನ್ 7

ಇನ್ನು ವಿನ್ಯಾಸಕಾರರಾದ ಮಾರ್ಟಿನ್ ಹಜೇಕ್ ಐಫೋನ್ 7 ಕಾನ್ಸೆಪ್ಟ್ ಇಮೇಜ್ ಅನ್ನು ಹೊರಹಾಕಿದ್ದು ಐಫೋನ್ 6 ಗೆ ಹೋಲುವಂತಿದೆ. ಅದಾಗ್ಯೂ ವಿನ್ಯಾಸಕಾರರು ಕೆಲವೊಂದು ಮುಖ್ಯ ಬದಲಾವಣೆಗಳನ್ನು ಮಾಡಿದ್ದಾರೆ ಎಂಬುದು ಸುಳ್ಳಲ್ಲ.

ಬೆಜೆಲ್ ಲೆಸ್ ಡಿಸ್‌ಪ್ಲೇ

ಐಫೋನ್ 7

ಇನ್ನು ಐಫೋನ್ 7 ಬೆಜೆಲ್ ಲೆಸ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಸುಂದರ ಅಂಚುಗಳನ್ನು ಪಡೆದುಕೊಂಡಿದೆ. ಟಚ್ ಐಡಿ ಹೋಮ್ ಬಟನ್ ಅನ್ನು ಪರದೆಗೆ ಅಳವಡಿಸಿದ್ದು, ಇದು ಉತ್ತಮ ವಿಚಾರವಾಗಿದೆ.

ಆಪಲ್ ಲೋಗೋ

ಐಫೋನ್ 7

ಇನ್ನು ಫೋನ್‌ನ ಹಿಂಭಾಗದಲ್ಲಿ ಆಪಲ್ ಲೋಗೋವನ್ನು ಕಾಣಬಹುದಾಗಿದ್ದು ವಿನ್ಯಾಸದ ಮಹತ್ವ ಇಲ್ಲಿ ಮುಖ್ಯವಾಗಿದೆ. ಇನ್ನು ಕ್ಯಾಮೆರಾ ಹೊಂದಿಕೆ ಕೂಡ ಬದಲಾಗಿದ್ದು ಎರಡು ಲೆನ್ಸ್‌ಗಳನ್ನು ಕಾಣಬಹುದಾಗಿದೆ.

ಮಾರ್ಟಿನ್ ಹಜೇಕ್‌

ಐಫೋನ್ 7

ಮಾರ್ಟಿನ್ ಹಜೇಕ್‌ರ ಐಫೋನ್ 7 ಕಾನ್ಸೆಪ್ಟ್ ನೈಜತೆಗೆ ತೀರಾ ಹತ್ತಿರವಾಗಿದ್ದು, ನಾವೆಲ್ಲರೂ ಇದನ್ನು ಅಂಗೀಕರಿಸಲೇಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Apple iPhone 6 was recently launched to near critical acclaim, but no sooner we started hearing the first whispers about the next-generation iPhone - likely to be called the iPhone 7.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot