ಐಫೋನ್ 7: ಆಪಲ್‌ಗೆ ಶುಕ್ರದೆಸೆ ಸ್ಯಾಮ್‌ಸಂಗ್‌ಗೆ ಶನಿದೆಸೆ
ಆಪಲ್‌ನ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಮಾರುಕಟ್ಟೆಯಲ್ಲಿ ಓಡುವ ಕುದುರೆಯಾಗಿದೆ. ಐಫೋನ್‌ನ ದೊಡ್ಡ ಪರದೆಯ ಫೋನ್‌ಗಳು ಇವುಗಳಾಗಿದ್ದು ಆಪಲ್ ಈ ಎರಡೂ ಫೋನ್‌ಗಳ ಮೂಲಕ ಯಶಸ್ಸಿನ ಶಿಖರವನ್ನು ಶೀಘ್ರದಲ್ಲಿಯೇ ತಲುಪುವ ಪ್ರಯತ್ನವನ್ನು ಮುಂದುವರಿಸುತ್ತಿದೆ.
ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ಇನ್ನೂ ಹೆಚ್ಚು ಮುಖ್ಯವಾಗಿ ಐಫೋನ್ 6 ಕಂಪೆನಿಯ ಅತ್ಯುತ್ತಮ ಮಾರಾಟವಾಗಿರುವ ಡಿವೈಸ್ ಆಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರೆ, ಗ್ಯಾಲಕ್ಸಿ ಎಸ್6 ಸ್ಯಾಮ್‌ಸಂಗ್‌ನ ಕಿರೀಟವಾಗಿದೆ.
ಓದಿರಿ: ವಜ್ರಕ್ಕಿಂತಲೂ ಕಠಿಣವಾದುದು ಆಪಲ್ ವಾಚ್‌ನಲ್ಲಿ ಏನಿದೆ?
ಇನ್ನು ಒಂದು ಹೆಜ್ಜೆಯನ್ನು ಮುಂದಿಡುತ್ತಿರುವ ಈ ಕ್ಯುಪರ್ಟಿನೊ ದೈತ್ಯ ಆಪಲ್ ಐಫೋನ್ 7 ಅನ್ನು ಬಿಡುಗಡೆ ಮಾಡುವ ಸನ್ನಾಹದಲ್ಲಿದೆ. ಇನ್ನು ಈ ಫೋನ್ ಯಾವಾಗ ಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಎರಡು ಮಾಡೆಲ್‌ಗಳು ಎರಡು ಗಾತ್ರಗಳು
ಈ ವರ್ಷದಲ್ಲಿ ಆಪಲ್ ಎರಡು ಐಫೋನ್‌ಗಳನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದೆ. 4.7 ಇಂಚಿನ ಸುಪೀರಿಯರ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಈ ಡಿವೈಸ್‌ಗಳು ಒಳಗೊಳ್ಳಲಿವೆ. ಸ್ಪರ್ಧೆಗೆ ಸರಿಯಾಗಿ ಪ್ರತ್ಯುತ್ತರವನ್ನು ನೀಡಲು ಆಪಲ್ ಹೆಚ್ಚು ರೆಸಲ್ಯೂಶನ್ ಡಿವೈಸ್‌ನೊಂದಿಗೆ ಮಾರುಕಟ್ಟೆಗೆ ಇಳಿಯಲಿದೆ.

ಕರ್ವ್ ಸ್ಕ್ರೀನ್
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್‌ನಂತೆಯೇ ಆಪಲ್ ಐಫೋನ್ ಕರ್ವ್ ಡಿಸ್‌ಪ್ಲೇಯನ್ನು ಹೊಂದಲಿದೆ. ಮುಂದಿನ ಜನರೇಶನ್ ಹ್ಯಾಂಡ್‌ಸೆಟ್ ಅನ್ನು ತಲುಪಬಲ್ಲ ಎಲ್ಲಾ ಸಾಮರ್ಥ್ಯಗಳನ್ನು ಈ ಡಿವೈಸ್ ಒಳಗೊಳ್ಳಲಿದೆ.

ಡಿಎಸ್‌ಎಲ್‌ಆರ್ ಗುಣಮಟ್ಟ
ಐಫೋನ್ 7 ಕ್ಯಾಮೆರಾ ಡಿಎಸ್‌ಎಲ್ಆರ್ ಗುಣಮಟ್ಟವನ್ನು ಹೊಂದಲಿದೆ ಎಂಬ ವದಂತಿಯೂ ಇದೆ. ಈಗಾಗಲೇ ಕಂಪೆನಿ ಸಣ್ಣ ಕ್ಯಾಮೆರಾ ಆವೃತ್ತಿಗಳನ್ನು ತಯಾರುಮಾಡುವಲ್ಲಿ ಸಿದ್ಧಹಸ್ತರೆನಿಸಿರುವ ಲೀನಕ್ಸ್ ಕಂಪೆನಿಯನ್ನು ವಶಕ್ಕೆ ತೆಗೆದುಕೊಂಡಿದ್ದು, 20 ಮಿಲಿಯನ್ ಕೊಟ್ಟು ಇದನ್ನು ಖರೀದಿಸಿದೆ ಎಂಬ ವದಂತಿ ಕೂಡ ಇದೆ.

ಐಫೋನ್ 7 ಗಾಗಿ ಸ್ಯಾಮ್‌ಸಂಗ್ ತಯಾರಿಸಲಿದೆ ಚಿಪ್‌ಸೆಟ್
ಮೂಲಗಳ ಪ್ರಕಾರ ಸ್ಯಾಮ್‌ಸಂಗ್ ಆಪಲ್ a9 ಚಿಪ್‌ಸೆಟ್‌ಗಳನ್ನು ಸ್ಯಾಮ್‌ಸಂಗ್ ತಯಾರಿಸಲಿದ್ದು ಇದು ಇನ್ನೂ ಖಚಿತವಾಗಿಲ್ಲ. 2 ಜಿಬಿಯೊಂದಿಗೆ ಆಪಲ್ ಹೆಚ್ಚು ಸುಧಾರಿತ ಚಿಪ್‌ಸೆಟ್ ಅನ್ನು ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ಗಾಗಿ ಬಳಸುತ್ತದೆ.

ಆಪಲ್ ವಾಚ್ ಡಿಜಿಟಲ್ ಕ್ರೌನ್
ಆಪಲ್ ವಾಚ್‌ನ ವಿನ್ಯಾಸಕ್ಕೆ ಮನಸೋತಿರುವ ಐಫೋನ್ 7 ವಿನ್ಯಾಸಕಾರ ಅದರಂತೆಯೇ ಫೋನ್ ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಆಪಲ್ ತನ್ನ ವಾಚ್‌ನಲ್ಲಿರುವ ಡಿಜಿಟಲ್ ಕ್ರೌನ್ ಅಂಶವನ್ನು ಐಫೋನ್‌ಗೆ ಸೇರಿಸಲಿದೆ.

ಇನ್ನಷ್ಟು ಫೀಚರ್‌ಗಳು
ಐಫೋನ್ 7 ಆವೃತ್ತಿಗಳು ಐಓಎಸ್ 9 ಅನ್ನು ಚಾಲನೆ ಮಾಡಲಿದ್ದು, ಇದು ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಯುಎಸ್‌ಬಿ ಕನೆಕ್ಟಿವಿಟಿಯನ್ನು ಐಫೋನ್ 7 ನಲ್ಲಿ ಕಾಣಬಹುದಾಗಿದ್ದು ಕಂಪೆನಿ ಹೆಚ್ಚು ನಿರೀಕ್ಷೆಯನ್ನು ಐಫೋನ್‌ನಲ್ಲಿ ಇರಿಸಿದೆ.

ಬೆಲೆ ಮತ್ತು ಬಿಡುಗಡೆ ದಿನಾಂಕ
ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಅನ್ನು ಈ ವರ್ಷದಲ್ಲಿ ಕಂಪೆನಿ ಬಿಡುಗಡೆ ಮಾಡುವ ಅಂದಾಜಿನಲ್ಲಿದೆ. ಆಪಲ್‌ನ ಸಪ್ಟೆಂಬರ್ ಈವೆಂಟ್‌ನಲ್ಲಿ ಡಿವೈಸ್ ಪ್ರತ್ಯಕ್ಷವಾಗಲಿದ್ದು ಐಫೋನ್ 7 ನ 32 ಜಿಬಿ ಬೆಲೆ ರೂ 56,000 ಅಂತೆಯೇ 64 ಜಿಬಿ ಮಾಡೆಲ್ ರೂ 61,000 ಅಂತೆಯೇ 128 ಜಿಬಿ ಫೋನ್ 66,000 ಕ್ಕೆ ಲಭ್ಯವಾಗಲಿದೆ. ಐಫೋನ್ 7 ಪ್ಲಸ್‌ನ 32 ಜಿಬಿ 65,000, 64 ಜಿಬಿ ರೂ 70,000 ಮತ್ತು 128 ಜಿಬಿ ಆವೃತ್ತಿ ರೂ 75,000 ಕ್ಕೆ ಲಭ್ಯವಾಗಲಿದೆ.


Click it and Unblock the Notifications








