ಕೇವಲ 25,000ರೂ.ಗೆ ಸಿಗಲಿದೆ 'ಐಫೋನ್‌ 7'!..ಖರೀದಿ ಮುನ್ನ ಯೋಚಿಸಿ!

|

ವಿಶ್ವ ಜನಪ್ರಿಯ ಆಪಲ್ ಸಂಸ್ಥೆಯು ಇತ್ತೀಚಿಗೆ 'ಐಫೋನ್ 11' ಸರಣಿಯನ್ನು ಬಿಡುಗಡೆ ಮಾಡಿದ್ದು, ಈ ಸರಣಿಯು ಹಲವು ಅಚ್ಚರಿಯ ಫೀಚರ್‌ಗಳಿಂದ ಆಪಲ್‌ ಪ್ರಿಯರನ್ನು ಸೆಳೆದಿದೆ. ಐಫೋನ್ ಸರಣಿ ಲಾಂಚ್ ಬೆನ್ನಲೇ ಸಂಸ್ಥೆಯು ತನ್ನ ಈ ಹಿಂದಿನ ಜನಪ್ರಿಯ ಐಫೋನ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದ್ದು, ಗ್ರಾಹಕರಿಗೆ ಖುಷಿ ಎನಿಸಿದೆ. ಹಾಗೆಯೇ ಹಬ್ಬದ ಪ್ರಯುಕ್ತ ಇ-ಕಾಮರ್ಸ್‌ ತಾಣಗಳು ಡಿಸ್ಕೌಂಟ್‌ ನೀಡುತ್ತಿದ್ದು, ಐಫೋನ್‌ಗಳು ಕೈಗೆಟುಕುವ ಪ್ರೈಸ್‌ನಲ್ಲಿ ಸಿಗುತ್ತಿವೆ.

ಐಫೋನ್ 7 ಫೋನ್

ಹೌದು, ಆಪಲ್‌ ಸಂಸ್ಥೆಯ ಕೆಲವು ಐಫೋನ್‌ ಮಾದರಿಗಳು ದರ ಕಡಿತ ಕಂಡಿದ್ದು, ಅದರಲ್ಲಿ 'ಐಫೋನ್ 7 ಫೋನ್' ಭಾರೀ ಡಿಸ್ಕೌಂಟ್‌ ಪಡೆದಿದೆ. ದೇಶಿಯ ಮಾರುಕಟ್ಟೆಯಲ್ಲಿ 'ಐಫೋನ್ 7' ಇದೀಗ 25,000ರೂ.ಗಳಿಗೆ ಲಭ್ಯವಿದ್ದು, ಗ್ರಾಹಕರನ್ನು ಸೆಳೆದಿದೆ. ಆದರೆ ಐಫೋನ್ 7 ಫೋನ್‌ ಅನ್ನು ಖರೀದಿಸಲು ಯೋಗ್ಯವೇ?..ಖರೀದಿಸಲು ಯಾವ ಅಂಶಗಳು ಸಫೋರ್ಟ್‌ ನೀಡಬಲ್ಲವು?..ಐಫೋನ್‌ 7 ಫೀಚರ್ಸ್‌ಗಳೆನು?..ಈ ಎಲ್ಲ ಪ್ರಶ್ನೆಗಳ ಬಗ್ಗೆ ಒಮ್ಮೆ ಯೋಚಿಸಿ ಖರೀದಿಗೆ ಮುಂದಾಗಿ.

ಫ್ಲಿಪ್‌ಕಾರ್ಟ್ ಆಫರ್

ಫ್ಲಿಪ್‌ಕಾರ್ಟ್ ಆಫರ್

ಇತ್ತೀಚಿಗೆ ಆಪಲ್ ಸಂಸ್ಥೆಯು ತನ್ನ ಐಫೋನ್‌ ಪ್ರೈಸ್‌ಗಳಲ್ಲಿ ರಿಯಾಯಿತಿ ಘೋಷಿಸಿದೆ. ಹಾಗೆಯೇ ದೀಪಾವಳಿ ಹಬ್ಬದ ಪ್ರಯುಕ್ತ ಫ್ಲಿಪ್‌ಕಾರ್ಟ್‌ ಸಹ 'ಬಿಗ್ ದೀಪಾವಳಿ ಸೇಲ್‌' ಆಯೋಜಿಸಿದ್ದು, ಮೇಳದಲ್ಲಿ 'ಐಫೋನ್ 7' ಫೋನ್ 26,999ರೂ.ಗಳಲ್ಲಿ ಸಿಗಲಿದೆ. ಇದರೊಂದಿಗೆ ಎಸ್‌ಬಿಐ ಕಾರ್ಡ್‌ ಗ್ರಾಹಕರಿಗೆ ಇನ್‌ಸ್ಟಂಟ್ ಡಿಸ್ಕೌಂಟ್‌ ಸಿಗಲಿದ್ದು, 25,000ರೂ.ಗಳಿಗೆ ಲಭ್ಯವಾಗಲಿದೆ.

ಐಫೋನ್‌ 7-ಕೀ ಫೀಚರ್ಸ್‌

ಐಫೋನ್‌ 7-ಕೀ ಫೀಚರ್ಸ್‌

ಐಫೋನ್‌ 7 ಫೋನ್ ಆಕರ್ಷಕ ಡಿಸೈನ್‌ ಜೊತೆಗೆ ಪುಟ್ಟ ಡಿಸ್‌ಪ್ಲೇಯನ್ನು ಪಡೆದಿದ್ದು, 750x1334 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 4.70 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಆಪಲ್ A10 ಫ್ಯೂಶನ್ ವೇಗದ ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಐಓಎಸ್‌ 10 ಓಎಸ್‌ನ ಬೆಂಬಲ ಪಡೆದುಕೊಂಡಿದೆ. ಇದರೊಂದಿಗೆ 2GB RAM ಮತ್ತು 32GB ಆಂತರಿಕ ಸ್ಟೋರೇಜ್ ಸೌಲಭ್ಯವನ್ನು ಒಳಗೊಂಡಿದ್ದು, ಹಿಂಬದಿಯಲ್ಲಿ 12ಎಂಪಿ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿಗಾಗಿ 7ಎಂಪಿ ಕ್ಯಾಮೆರಾ ಇದೆ.

ಪ್ಲಸ್‌ ಪಾಯಿಂಟ್ಸ್‌

ಪ್ಲಸ್‌ ಪಾಯಿಂಟ್ಸ್‌

ಐಫೋನ್‌ 7 ಫೋನ್ 2016ರಲ್ಲಿ ಬಿಡುಗಡೆ ಆಗಿದ್ದು, ಚಿಕ್ಕ ಕಂಪ್ಯಾಕ್ಟ್‌ ಆಕಾರ ಪಡೆದಿದೆ. ಸದ್ಯ ಫ್ಲಿಪ್‌ಕಾರ್ಟ್‌ನ ಆಫರ್‌ನಲ್ಲಿ ಕೇವಲ 25,000ರೂ.ಗಳಿಗೆ ಸಿಗುತ್ತಿದೆ. ಈ ಐಫೋನ್ 'ಆಪಲ್ A10' ಫ್ಯೂಶನ್ ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 'ಐಓಎಸ್‌ 10' ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಇತ್ತೀಚಿನ ಐಓಎಸ್‌ 13 ಓಎಸ್‌ ಅಪ್‌ಡೇಟ್ ಬೆಂಬಲದ ಸೌಲಭ್ಯ ಸಾಧ್ಯತೆ ಇದೆ.

ಮೈನಸ್‌ ಪಾಯಿಂಟ್ಸ್‌

ಮೈನಸ್‌ ಪಾಯಿಂಟ್ಸ್‌

ಐಫೋನ್‌ 7 ಫೋನ್ ಬೆಲೆ ಇಳಿಕೆ ಕಂಡಿದೆ ನಿಜ ಆದರೆ ಮೂರು ವರ್ಷದ ಹಳೆಯ ಐಫೋನ್ ಎನಿಸಿಕೊಳ್ಳಲಿದೆ. ಅಷ್ಟಕ್ಕೂ ಈ ಐಫೋನ್ ಕೇವಲ 4.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಈಗೆಲ್ಲಾ ಬೆಜಲ್‌ಲೆಸ್‌ ಡಿಸ್‌ಪ್ಲೇ ಫೀಚರ್ ಆಕರ್ಷಕ ಎನಿಸುತ್ತಿದೆ. ಆಪಲ್ A10 ಫ್ಯೂಶನ್ ನಲ್ಲಿ ಕೆಲಸ ಮಾಡಲಿದೆ. ಆದರೆ ಐಫೋನ್ 11 ಸರಣಿಯು A13 ಬಯೋನಿಕ್‌ ಪ್ರೊಸೆಸರ್‌ ಹೊಂದಿದೆ. ಸಿಂಗಲ್‌ ಕ್ಯಾಮೆರಾ ಸೆಟ್‌ಅಪ್‌ ಇದೆ. ಆದರೆ ಪ್ರಸ್ತುತ ತ್ರಿಪಲ್‌ ಮತ್ತು ಕ್ವಾಡ್‌ ಕ್ಯಾಮೆರಾ ಬಳಕೆಯಲ್ಲಿವೆ.

ಕೊನೆಯ ಮಾತು

ಕೊನೆಯ ಮಾತು

ಐಫೋನ್‌ 7 ಫೋನ್‌ ಉತ್ತಮವಾಗಿಯೇ ಇದೆ ಆದರೆ ಇತ್ತೀಚಿನ ಐಫೋನ್ 11 ಸರಣಿಯ ಫೀಚರ್‌ಗಳಿಗೆ ಹೋಲಿಸಿದರೇ ಐಫೋನ್ 7 ಖರೀದಿಸುವುದು ಯೋಗ್ಯವಲ್ಲ ಎಂದು ಅನಿಸುತ್ತದೆ. ಆದರೆ, ಕೈಲೊಂದು ಐಫೋನ್‌ ಇರಲಿ ಎನ್ನುವ ಮನೋಭಾವ ಇದ್ದರೇ, ಖರೀದಿಸಲು ಅಡ್ಡಿಯಿಲ್ಲ. ಫ್ಲಿಪ್‌ಕಾರ್ಟ್‌ನಲ್ಲಿ ಡಿಸ್ಕೌಂಟ್ ಉತ್ತಮ ರಿಯಾಯಿತಿ ಸಿಗಲಿದೆ.

Best Mobiles in India

English summary
On Flipkart, the iPhone 7 can be purchased for as low as Rs 25,000 using SBI Bank offers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X