ನಿಮ್ಮ ಬಳಿ ಈ ಕಾರ್ಡ್‌ ಇದ್ರೆ ಐಫೋನ್ ಮೇಲೆ ರೂ.10000 ಕ್ಯಾಷ್ ಬ್ಯಾಕ್..!

|

ಹೊಸ ವರ್ಷದ ಸಂಭ್ರಮವನ್ನು ಇಷ್ಟು ಹೆಚ್ಚು ಮಾಡುವ ಸಲುವಾಗಿ HDFC ಬ್ಯಾಂಕ್ ತನ್ನ ಕಾರ್ಡು ಬಳಕೆದಾರರಿಗೆ ಹೊಸದೊಂದು ಆಫರ್ ಅನ್ನು ಘೋಷಣೆ ಮಾಡಿದ್ದು, ಐಪೋನ್ ಸೇರಿದಂತೆ ಆಪಲ್ ಉತ್ಪನ್ನಗಳನ್ನು ಖರೀದಿ ಮಾಡಿದರೆ ರೂ.1000ದ ವರೆಗೂ ಕ್ಯಾಷ್ ಬ್ಯಾಕ್ ನೀಡಲು ಮುಂದಾಗಿದೆ. ಐಫೋನ್ ಖರೀದಿ ಮಾಡಲು ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ ಎನ್ನಲಾಗಿದೆ.

ನಿಮ್ಮ ಬಳಿ ಈ ಕಾರ್ಡ್‌ ಇದ್ರೆ ಐಫೋನ್ ಮೇಲೆ ರೂ.10000 ಕ್ಯಾಷ್ ಬ್ಯಾಕ್..!

ಓದಿರಿ: ವೈರಲ್ ವಿಡಿಯೋದಲ್ಲಿ ರಜಿನಿ ಹೇಳಿದ್ದೇನು? ತಲೈವಾ ವೆಬ್‌ಸೈಟ್-ಆಪ್..!

ಐಫೋನ್, ಮ್ಯಾಕ್ ಬುಕ್ ಮತ್ತು ಆಪಲ್ ವಾಚ್ ಗಳ ಮೇಲೆ HDFC ಬ್ಯಾಂಕ್ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲು ಮುಂದಾಗಿದೆ. ಈ ಆಪರ್ ಜನವರಿ ಒಂದರಿಂದ ಮಾರ್ಚ್ 11ರ ವರೆಗೂ ಲಭ್ಯವಿರಲಿದೆ ಎನ್ನಲಾಗಿದೆ. ಇದು HDFC ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಬಳಕೆದಾರರಿಬ್ಬರಿಗೂ ಈ ಸೌಲಭ್ಯ ಲಭ್ಯವಿರಲಿದೆ.

ವಿವಿಧ ಆಫರ್:

ವಿವಿಧ ಆಫರ್:

HDFC ಬ್ಯಾಂಕ್ ತನ್ನ ಕಾರ್ಡ್ ಬಳಕೆದಾರರಿಗೆ ಕ್ಯಾಷ್ ಬ್ಯಾಕ್ ಮಾತ್ರವಲ್ಲದೇ ನೋ ಕಾಸ್ಟ್ ಇಎಂಐ ಸೇರಿ ವಿವಿಧ ಆಫರ್ ಗಳನ್ನು ನೀಡಿದೆ. ಕೆಲವು ಮಾಡಲ್‌ ಗಳ ಮೇಲೆ ಇಎಂಐ ಪ್ಲಾನ್ ಗಳನ್ನು ನೀಡಲು ಮುಂದಾಗಿದೆ ಎನ್ನಲಾಗಿದೆ.

ಐಫೋನ್ ಮೇಲೆ:

ಐಫೋನ್ ಮೇಲೆ:

HDFC ಐಫೋನ್ X ಖರೀದಿ ಮಾಡುವವರಿಗೆ ರೂ.10000 ಕ್ಯಾಷ್ ಬ್ಯಾಕ್ ನೀಡಲಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಹೊಸದಾಗಿ ಲಾಂಚ್ ಆಗಿರುವ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಸ್ಮಾರ್ಟ್‌ಫೋನ್‌ ಮೇಲೆ ರೂ.7000 ಕ್ಯಾಷ್ ಬ್ಯಾಕ್ ನೀಡಲು ಮುಂದಾಗಿದೆ. ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಮೇಲೆ ರೂ. 3000 ಕ್ಯಾಷ್ ಬ್ಯಾಕ್ ನೀಡಲಿದೆ.

ಇನ್ನು ಇದೇ:

ಇನ್ನು ಇದೇ:

ಐಫೋನ್ 6S ಮತ್ತು ಐಫೋನ್ 6S ಪ್ಲಸ್ ಮೇಲೆ ರೂ.2000 ಕ್ಯಾಷ್ ಬ್ಯಾಕ್ ನೀಡಲಿದೆ. ಇದಲ್ಲದೇ ಐಫೋನ್ 6, ಐಫೋನ್ 5S ಮತ್ತು ಐಫೋನ್ SE ಮೇಲೆ HDFC ರೂ.1000 ಕ್ಯಾಷ್ ಬ್ಯಾಕ್ ನೀಡಲಿದೆ ಎನ್ನಲಾಗಿದೆ.

ಮ್ಯಾಕ್ ಬುಕ್:

ಮ್ಯಾಕ್ ಬುಕ್:

ಇದೇ ಮಾದರಿಯಲ್ಲಿ ಆಪಲ್ ಬಿಡುಗಡೆ ಮಾಡಿರುವ ಮ್ಯಾಕ್‌ ಬುಕ್ ಬೆಲೆಯೂ ಕ್ಯಾಷ್ ಬ್ಯಾಕ್ ಘೋಷಣೆಯಾಗಿದ್ದು, ರೂ.50,000ಕ್ಕಿಂತ ಕಡಿಮೆ ಬೆಲೆಯ ಮ್ಯಾಕ್ ಬುಕ್ ಮೇಲೆ ರೂ.5000 ಕ್ಯಾಷ್ ಬ್ಯಾಕ್ ಹಾಗೂ ರೂ. 1 ಲಕ್ಷಕ್ಕಿಂತ ಕಡಿಮೆ ಬೆಲೆಯ ಮ್ಯಾಕ್ ಬುಕ್ ಮೇಲೆ ರೂ.10000 ಕ್ಯಾಷ್ ಬ್ಯಾಕ್ ನೀಡಲಿದೆ HDFC ಬ್ಯಾಂಕ್.

ಐಪ್ಯಾಡ್ ಮತ್ತು ವಾಚ್:

ಐಪ್ಯಾಡ್ ಮತ್ತು ವಾಚ್:

ಇದಲ್ಲೇ ಆಪಲ್ ಬಿಡುಗಡೆ ಮಾಡಿರುವ ಐಪ್ಯಾಡ್ ಮತ್ತು ಆಪಲ್ ವಾಚ್‌ಗಳ ಮೇಲೆ HDFC ಬ್ಯಾಂಕ್ ರೂ. 5000 ಕ್ಯಾಷ್ ಬ್ಯಾಕ್ ನೀಡಲಿದೆ ಎನ್ನಲಾಗಿದೆ. ಆಪಲ್ ಉತ್ಪನ್ನಗಳನ್ನು ಖರೀದಿ ಮಾಡಲು ಇದಕ್ಕಿಂತ ಉತ್ತಮ ಸಂದರ್ಭ ಮತ್ತೊಂದಿಲ್ಲ ಎನ್ನಲಾಗಿದೆ.

Best Mobiles in India

English summary
iPhone, iPad, MacBook, Apple Watch Get Cashback Offers Up to Rs. 10,000 From HDFC. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X