ಐಫೋನ್ ಪ್ರಿಯರಿಗೆ ಕಹಿ ಸುದ್ದಿ: ಈ ಪಟ್ಟಿಯನ್ನು ಒಮ್ಮೆ ನೋಡಿ..!
ಕೇಂದ್ರ ಸರ್ಕಾರವು ಕಸ್ಟಮ್ ಡ್ಯೂಟಿಯನ್ನು ಏರಿಕೆ ಮಾಡಿರುವ ಕಾರಣ ಭಾರತದಲ್ಲಿ ಮಾರಾಟವಾಗುವ ಆಪಲ್ ಫೋನ್‌ಗಳ ಬೆಲೆಯೂ ಏರಿಕೆಯಾಗಲಿದ್ದು, ಆಪಲ್ ತನ್ನ ಫೋನ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
ಓದಿರಿ: 1 ದಿನ ಬ್ಯಾಟರಿ ಬಾಳಿಕೆಯ ಶಿಯೋಮಿ ಲ್ಯಾಪ್‌ಟಾಪ್‌ಗೆ ಇಂಟರ್ನೆಟ್ ಕನೆಕ್ಷನ್ ಬೇಡ.! ಬೆಲೆ.?
ಡಿಸೆಂಬರ್ 18 ರಿಂದಲೇ ಆಪಲ್ ಉತ್ಪನ್ನಗಳ ಬೆಲೆಯೂ 3.5% ಏರಿಕೆಯಾಗಲಿದೆ ಎನ್ನಲಾಗಿದೆ. ಪ್ರತಿ ಆಪಲ್ ಫೋನ್ ಬೆಲೆಯಲ್ಲಿಯೂ ಏರಿಕೆಯನ್ನು ಕಾಣಬಹುದಾಗಿದೆ. ಆದರೆ ಭಾರತದಲ್ಲಿ ಜೋಡಣೆಯಾಗುವ ಐಫೋನ್ SE ಬೆಲೆಯಲ್ಲಿ ಯಾವುದೇ ವ್ಯತ್ಯಾಸವು ಆಗುವುದಿಲ್ಲ ಎನ್ನಲಾಗಿದೆ. ಕಾರಣ ಈ ಫೋನ್ ಭಾರತದಲ್ಲಿಯೇ ನಿರ್ಮಾಣವಾಗುತ್ತಿದೆ.

ಹೊಸ ಐಪೋನ್ ಬೆಲೆಗಳು ಈ ಕೆಳಕಂತೆ ಇದೆ:
ಐಫೋನ್ 6 32 GB: ರೂ 30780
ಐಫೋನ್ 6 S 32 GB: ರೂ 41,550
ಐಫೋನ್ 6 SS 128 GB: ರೂ 50,660
ಐಫೋನ್ 6 S ಪ್ಲಸ್ 32 GB: ರೂ 50,740
ಐಫೋನ್ 6 S ಪ್ಲಸ್ 128 GB: ರೂ 59,860
ಐಫೋನ್ 7 32 GB: ರೂ 50,810
ಐಫೋನ್ 7 128 GB: ರೂ 59,910
ಐಫೋನ್ 7 ಪ್ಲಸ್ 32 GB: ರೂ 61,060
ಐಫೋನ್ 7 ಪ್ಲಸ್ 128 GB: ರೂ 70,180
ಐಫೋನ್ 8 64 GB: ರೂ 66,120
ಐಫೋನ್ 8 256 GB: ರೂ 79,420
ಐಫೋನ್ 8 ಪ್ಲಸ್ 64 GB: ರೂ 75,450
ಐಫೋನ್ 8 ಪ್ಲಸ್ 256 GB: ರೂ 88,750
ಐಫೋನ್ X 64 GB: ರೂ 92,430
ಐಫೋನ್ X 256 GB: ರೂ 1,05,720

ಈ ಬೆಲೆಗಳಲ್ಲಿ ವ್ಯತ್ಯಾಸವು ಆಗಬಹುದಾಗಿದೆ. ಆಪಲ್ ತನ್ನ MRPಯಲ್ಲಿ ಬದಲಾವಣೆಯನ್ನು ಮಾಡಿದ್ದು, ಆದರೆ ಮಾರಾಟಗಾರರು ಕಡಿಮೆ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಇದೆ. ತಮ್ಮ ಲಾಭ ಪ್ರಮಾಣದಲ್ಲಿ ಕಡಿಮೆ ಮಾಡಿಕೊಂಡು ಮಾರಾಟ ಮಾಡುವುದನ್ನು ಕಾಣಬಹುದಾಗಿದೆ.


Click it and Unblock the Notifications