Subscribe to Gizbot

1 ದಿನ ಬ್ಯಾಟರಿ ಬಾಳಿಕೆಯ ಶಿಯೋಮಿ ಲ್ಯಾಪ್‌ಟಾಪ್‌ಗೆ ಇಂಟರ್ನೆಟ್ ಕನೆಕ್ಷನ್‌ ಬೇಡ.! ಬೆಲೆ.?

Written By:

ಲ್ಯಾಪ್‌ ಟಾಪ್ ಮಾರುಕಟ್ಟೆಯಲ್ಲಿ ಈಗಾಗಲೇ ಹೊಸ ಅಲೆಯನ್ನು ಹುಟ್ಟಿಹಾಕಿರುವ ಮೈಕ್ರೋಸಾಫ್ಟ್‌ 'ಆಲ್ವೇಸ್ ಕನೆಕ್ಟೆಡ್' ಲಾಪ್‌ಟಾಪ್‌ಗಳು ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಆಸುಸ್ ಮತ್ತು ಹೆಚ್‌ಪಿ ಕಂಪನಿಗಳು ಮಾತ್ರವೇ 'ಆಲ್ವೇಸ್ ಕನೆಕ್ಟೆಡ್' ವಿಂಡೋಸ್ 10 ಲಾಪ್‌ಟಾಪ್‌ಗಳನ್ನು ಲಾಂಚ್ ಮಾಡಿದ್ದು, ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಸ್ಯಾಮ್‌ಸಂಗ್ ಮತ್ತು ಲಿನೊವೋ ಕಂಪನಿಗಳು ಸಹ ಇದೇ ಮಾದರಿಯ ಲಾಪ್‌ಟಾಪ್‌ ತಯಾರಿಕೆಗೆ ಮುಂದಾಗಿದೆ.

1 ದಿನ ಬ್ಯಾಟರಿ ಬಾಳಿಕೆಯ ಶಿಯೋಮಿ ಲ್ಯಾಪ್‌ಟಾಪ್‌ಗೆ ಇಂಟರ್ನೆಟ್ ಕನೆಕ್ಷನ್‌ ಬೇಡ.!

ಓದಿರಿ: ಏರ್‌ಟೆಲ್‌ನಿಂದ ದಿಟ್ಟ ನಿರ್ಧಾರ: ಇತರೆ ಟೆಲಿಕಾಂ ಕಂಪನಿಗಳಿಗಿಂತ ಅತೀ ಕಡಿಮೆ ಬೆಲೆಗೆ ಡೇಟಾ..!

ಇದೇ ಮಾದರಿಯಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಚೀನಾ ಮೂಲದ ಕಂಪನಿ ಶಿಯೋಮಿ ಕಂಪನಿ ಸಹ 'ಆಲ್ವೇಸ್ ಕನೆಕ್ಟೆಡ್' ವಿಂಡೋಸ್ 10 ಲಾಪ್‌ಟಾಪ್ ತಯಾರಿಕೆಗೆ ಮುಂದಾಗಿದೆ ಎನ್ನಲಾಗಿದೆ. ಇದಕ್ಕಾಗಿ ಸ್ನಾಪ್‌ಡ್ರಾಗನ್‌ನೊಂದಿಗೆ ಮಾತುಕತೆಯನ್ನು ಆರಂಭಿಸಿದೆ , ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಆಲ್ವೇಸ್ ಕನೆಕ್ಟೆಡ್'..?

'ಆಲ್ವೇಸ್ ಕನೆಕ್ಟೆಡ್'..?

ವಿಂಡೋಸ್ ಮತ್ತು ಕ್ವಾಲಕಮ್ ಒಂದಾಗಿ 'ಆಲ್ವೇಸ್ ಕನೆಕ್ಟೆಡ್' ಲ್ಯಾಪ್‌ಟಾಪ್ ವಿನ್ಯಾಸ ಮಾಡಿದ್ದು, ಇದರಲ್ಲಿ ಗ್ರಾಹಕರು ಲ್ಯಾಪ್‌ಟಾಪ್‌ನಲ್ಲಿ ಸೆಲ್ಯೂಲರ್ ಕೆನೆಷನ್ ಪಡೆಯಬಹುದಾಗಿದೆ. ಡೇಟಾಗಾಗಿ ಇತರೇ ಯಾವುದೇ ಮೂಲಗಳನ್ನು ಅವಲಂಬಿಸುವ ಅಗತ್ಯ ಇಲ್ಲ. ಸಿಮ್ ಕಾರ್ಡ್ ಮೂಲಕ ಅಲ್ಲಿಯೇ ಮೊಬೈಲ್ ಡೇಟಾ ಮಾದರಿಯಲ್ಲಿ ಇಂಟರ್‌ನೆಟ್ ಪಡೆಯಬಹುದಾಗಿದೆ. ಅಲ್ಲದೇ ಈ ಮಾದರಿಯ ಲ್ಯಾಪ್‌ಟಾಪ್‌ಗಳು ಅತೀ ದೀರ್ಘಕಾಲದ ಬ್ಯಾಟರಿ ಬಾಳಿಕೆಯನ್ನು ಹೊಂದಿರಲಿದೆ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿದೆ:

ಈಗಾಗಲೇ ಮಾರುಕಟ್ಟೆಯಲ್ಲಿದೆ:

ಶಿಯೋಮಿ ಈಗಾಗಲೇ ಮಾರುಕಟ್ಟೆಯಲ್ಲಿ ಮಿ ನೋಟ್ ಬುಕ್ ಏರ್‌ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದರಲ್ಲಿ 4G ನೆಟ್‌ವರ್ಕ್‌ ಅನ್ನು ಕಾಣಬಹುದಾಗಿದೆ. ಇದರಲ್ಲಿ ಇಂಟೆಲ್ ಕೋರ್ ಪ್ರೋಸೆಸರ್ ಅನ್ನು ಅವಳಡಿಸಿದೆ. ಅಲ್ಲದೇ ಬೆಲೆಯೂ ತೀರಾ ಹೆಚ್ಚೆನು ಇಲ್ಲ ಎನ್ನಲಾಗಿದೆ.

ಸ್ನಾಪ್‌ಡ್ರಾಗನ್ ನೊಂದಿಗೆ:

ಸ್ನಾಪ್‌ಡ್ರಾಗನ್ ನೊಂದಿಗೆ:

ಸದ್ಯ ಮಾರುಕಟ್ಟೆಯಲ್ಲಿ 'ಆಲ್ವೇಸ್ ಕನೆಕ್ಟೆಡ್' ಲ್ಯಾಪ್‌ಟಾಪ್‌ ಟ್ರೆಂಡ್ ಆಗುತ್ತಿದ್ದು, ಈ ಹಿನ್ನಲೆಯಲ್ಲಿ ಶಿಯೋಮಿ ಸ್ನಾಪ್‌ಡ್ರಾಗನ್ 835 ಚಿಪ್‌ಸೆಟ್‌ ಹಾಗೂ ಇಂಟೆಲ್ ಪ್ರೋಸೆಸರ್ ಹೊಂದಿರುವ ದೀರ್ಘಕಾಲ ಬ್ಯಾಟರಿ ಬಾಳಿಕೆ ಬರುವ ಲಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಭಾರತದಲ್ಲಿ-ಬಜೆಟ್ ಬೆಲೆಯಲ್ಲಿ:

ಭಾರತದಲ್ಲಿ-ಬಜೆಟ್ ಬೆಲೆಯಲ್ಲಿ:

ಶಿಯೋಮಿ ಈಗಾಗಲೇ ಲ್ಯಾಪ್‌ಟಾಪ್‌ಗಳನ್ನು ಚೀನಾ ಸೇರಿದಂತೆ ವಿಶ್ವದ ಹಲವು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದರೂ ಸಹ ಭಾರತೀಯ ಮಾರುಕಟ್ಟೆಗೆ ಯಾವುದೇ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿಲ್ಲ. ಆದರೆ ಲ್ಯಾಪ್‌ಟಾಪ್‌ಗಳಿಗೂ ಭಾರತ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಕಾರಣ ಇಲ್ಲಿ ಆಲ್ವೇಸ್ ಕನೆಕ್ಟೆಡ್ ಲ್ಯಾಪ್‌ಟಾಪ್‌ಗಳನ್ನು ಬಜೆಟ್ ಬೆಲೆಯಲ್ಲಿ ಪರಿಚಯಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Xiaomi offer Snapdragon-based ‘Always Connected’ Windows 10 PCs. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot