ಐಫೋನ್ ಮಾರಾಟದಲ್ಲಿ ತೀವ್ರಗತಿಯ ಕುಸಿತ!..ಕಂಗೆಟ್ಟ ಆಪಲ್!

|

ಎವರ್‌ಗ್ರೀನ್ ಟೆಕ್ ಕಂಪೆನಿ ಎಂದು ಹೆಸರಾಗಿರುವ ವಿಶ್ವ ಮೊಬೈಲ್ ಮಾರುಕಟ್ಟೆ ದಿಗ್ಗಜ ಆಪಲ್‌ಗೆ ಸಂಕಷ್ಟ ಶುರುವಾಗಿದೆ. ಜಾಗತಿಕವಾಗಿ ಐಫೋನ್ ಮಾರಾಟದಲ್ಲಿ ತೀವ್ರಗತಿಯ ಕುಸಿತ ದಾಖಲಿಸುತ್ತಿರುವುದು ಆಪಲ್‌ ಕಂಪನಿಗೆ ತಲೆಬಿಸಿ ತಂದಿದ್ದು, ಕಳೆದ ಮೂರು ವರ್ಷದಲ್ಲಿ ಇತ್ತೀಚಿಗೆ ಕೊನೆಗೊಂಡ ಹಾಲಿಡೇ ಕ್ವಾರ್ಟರ್‌ನಲ್ಲಿ ಅತ್ಯಂತ ಕನಿಷ್ಠ ಮಾರಾಟವನ್ನು ದಾಖಲಿಸಿದೆ.

ಹೌದು, ಸ್ಮಾರ್ಟ್‌ಫೋನ್ ಮಾರುಕಟ್ಟೆ ಕುರಿತು ಸಂಶೋಧನೆ ನಡೆಸುವ ಗಾರ್ಟ್‌ನರ್ ಬಿಡುಗಡೆ ಮಾಡಿರುವ ರಿಪೋರ್ಟ್ ಪ್ರಕಾರ, ಆಪಲ್ ಐಫೋನ್‌ಗಳ ಮಾರಾಟ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ಮೂರು ವರ್ಷದಲ್ಲಿ ಇದೆ ಮೊದಲ ಬಾರಿಗೆ ಇತ್ತೀಚಿಗೆ ಕೊನೆಗೊಂಡ ಹಾಲಿಡೇ ಕ್ವಾರ್ಟರ್‌ನಲ್ಲಿ ಅತ್ಯಂತ ಕನಿಷ್ಠ ಮಾರಾಟ ದಾಖಲಿಸಿದೆ ಎಂದು ರಿಪೋರ್ಟ್ ತಿಳಿಸಿದೆ.

ಐಫೋನ್ ಮಾರಾಟದಲ್ಲಿ ತೀವ್ರಗತಿಯ ಕುಸಿತ!..ಕಂಗೆಟ್ಟ ಆಪಲ್!

ಗಾರ್ಟ್‌ನರ್ ವರದಿಯ ಪ್ರಕಾರ, 2018ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಆಪಲ್‌ ಕೇವಲ 6.4 ಕೋಟಿ ಐಫೋನ್‌ಗಳನ್ನು ಮಾತ್ರ ಮಾರಾಟ ಮಾಡಿದೆಯಂತೆ. ಆದರೆ, 2017ರ ಇದೇ ಅವಧಿಯಲ್ಲಿ ಆಪಲ್ ಕಂಪೆನಿ 7.3 ಕೋಟಿಗಳಷ್ಟು ಐಫೋನ್ ಮಾರಾಟ ಮಾಡಿತ್ತು ಎನ್ನಲಾಗಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕಡಿಮೆ ಎಂದು ರಿಪೋರ್ಟ್ ತಿಳಿಸಿದೆ.

ಚೀನಾ ಕಂಪೆನಿಯ ಫೋನ್‌ಗಳು ಇತರ ದೇಶಗಳಲ್ಲೂ ಆಪಲ್‌ಗೆ ತೀವ್ರ ಸ್ಪರ್ಧೆ ಒಡ್ಡುತ್ತಿದ್ದು, ಬೆಲೆಯಲ್ಲಿ ಭಾರೀ ವ್ಯತ್ಯಾಸ ಹೊಂದಿರುವುದು ಕೂಡ ಐಫೋನ್ ಮಾರಾಟಕ್ಕೆ ಹೊಡೆತ ಬಿದ್ದಿದೆ ಎನ್ನಲಾಗಿದೆ. ಆದರೆ, ಐಪೋನ್‌ಗಳ ಮಾರಾಟ ಇಳಿಕೆಯ ಹೊರತಾಗಿಯೂ ಆಪಲ್‌ ಜಾಗತಿಕವಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದರೆ ಸ್ಯಾಮ್‌ಸಂಗ್ ಮೊದಲನೇ ಸ್ಥಾನದಲ್ಲಿ ಇದೆ.

ಐಫೋನ್ ಮಾರಾಟದಲ್ಲಿ ತೀವ್ರಗತಿಯ ಕುಸಿತ!..ಕಂಗೆಟ್ಟ ಆಪಲ್!

ಚೀನಾದ ಹುವಾವೆ ಮತ್ತು ಶಿಯೋಮಿ ಮೊಬೈಲ್‌ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಮಾರಾಟ ದಾಖಲಿಸುತ್ತಿರುವುದು ಕೂಡ ಆಪಲ್‌ ಮೇಲೆ ಹೊಡೆತ ಬಿದ್ದಿದೆ ಎಂದು ಹೇಳಲಾಗಿದ್ದು, ಜನರು ಆಪಲ್‌ ಬೆಲೆ ದುಬಾರಿ ಎಂದು ಇತರ ಸ್ಮಾರ್ಟ್‌ಫೋನ್ ಬಳಸುತ್ತಿರುವುದು ಕಂಪನಿಗೆ ತಲೆಬಿಸಿ ತಂದಿದೆ ಎಂದು ಟೆಕ್ ಮಾಧ್ಯಮಗಳು ವಿಶ್ಲೇಷಿಸಿರುವುದನ್ನು ನಾವು ಕಾಣಬಹುದು.

ಓದಿರಿ: ಮುಖೇಶ್ ಅಂಬಾನಿ ಆಸ್ತಿಯಲ್ಲಿ ಎಷ್ಟು ದಿನ ಭಾರತದ ನಿರ್ವಹಣೆ ಸಾಧ್ಯ ಗೊತ್ತಾ?

Best Mobiles in India

English summary
iPhone Sales Suffered Worst Decline In 2018, And Apple Is Starting To GettingWorried. ... The truth is, they're selling fewer devices than ever before.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X