Subscribe to Gizbot

ಮುಖೇಶ್ ಅಂಬಾನಿ ಆಸ್ತಿಯಲ್ಲಿ ಎಷ್ಟು ದಿನ ಭಾರತದ ನಿರ್ವಹಣೆ ಸಾಧ್ಯ?..ಕುತೂಹಲ ವರದಿ!!

Written By:

ವಿಶ್ವದ ಶ್ರೀಮಂತ ವ್ಯಕ್ತಿಗಳ ಆಸ್ತಿಯನ್ನು ಲೆಕ್ಕಹಾಕಿ ಪ್ರಕಟಿಸುವುದು ಸಾಮಾನ್ಯ. ಆದರೆ, ವಿಶ್ವದ ಶ್ರೀಮಂತ ವ್ಯಕ್ತಿಗಳ ಆಸ್ತಿಯಿಂದ ಒಂದು ದೇಶದ ವೆಚ್ಚವನ್ನು ಎಷ್ಟು ದಿನ ನಿರ್ವಹಿಸಬಹುದು ಎಂದು ಬ್ಲೂಮ್‌ಬರ್ಗ್ ಎನ್ನುವ ಸಂಸ್ಥೆಯೊಂದು ಲೆಕ್ಕ ಮಾಡಿದೆ. ಇದರಲ್ಲಿ ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಆಸ್ತಿಯನ್ನು ಸಹ ಲೆಕ್ಕಹಾಕಿದ ನೋಡಿದೆ.!!

ಮುಖೇಶ್ ಅಂಬಾನಿ ಆಸ್ತಿಯಲ್ಲಿ ಎಷ್ಟು ದಿನ ಭಾರತದ ನಿರ್ವಹಣೆ ಸಾಧ್ಯ? ಕುತೂಹಲ ವರದಿ!

ಬ್ಲೂಮ್‌ಬರ್ಗ್ ಸಂಸ್ಥೆ 49 ದೇಶಗಳು ಮತ್ತು 49 ಸಿರಿವಂತರನ್ನು ಆಯ್ಕೆ ಮಾಡಿಕೊಂಡು, ಅವರ ಸಂಪತ್ತನ್ನು ಲೆಕ್ಕ ಹಾಕಿ, ಅವರು ಅವರ ದೇಶವನ್ನು ಎಷ್ಟು ದಿನ ನಿರ್ವಹಿಸಬಲ್ಲರು ಎನ್ನುವ ರಾಬಿನ್‌ಹುಡ್‌ ಇಂಡೆಕ್ಸ್‌ ಅನ್ನು ತಯಾರಿಸಿದೆ.! ಹಾಗಾದರೆ, ಯಾವ ದೇಶದ ಶ್ರೀಮಂತರು ಅವರ ದೇಶವನ್ನು ಎಷ್ಟು ದಿನಗಳ ಕಾಲ ನಿರ್ವಹಣೆ ಮಾಡಬಲ್ಲರು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜೆಫ್ ಬೆಜೂಸ್!

ಜೆಫ್ ಬೆಜೂಸ್!

ವಿಶ್ವದ ನಂಬರ್ ಒನ್ ಶ್ರೀಮಂತ ಜೆಫ್ ಬೆಜೂಸ್ 99 ಮಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದು, ತನ್ನ ದೇಶವಾ ಅಮೆರಿಕಾವನ್ನು 5 ದಿನ ನಿರ್ವಹಣೆ ಮಾಡುವಷ್ಟು ಶಕ್ತಿ ಹೊಂದಿದ್ದಾರಂತೆ.!!

ಅಮಾನ್ಸಿಯೊ ಓರ್ಟೆಗಾ!

ಅಮಾನ್ಸಿಯೊ ಓರ್ಟೆಗಾ!

ಸ್ಪೇನ್ ದೇಶದ ಅಮಾನ್ಸಿಯೊ ಓರ್ಟೆಗಾ ಅವರು ಒಟ್ಟು 75.3 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ಇವರು ತನ್ನ ಆಸ್ತಿಯಿಂದ ಸ್ಪೇನ್ ದೇಶವನ್ನು 48 ದಿನಗಳಕಾಲ ನಿರ್ವಹಣೆ ಮಾಡುವಷ್ಟು ಶಕ್ತಿಯನ್ನು ಹೊಂದಿದ್ದಾರೆ.!!

ಬರ್ನಾಡ್ ಅರ್ನಾಲ್ಟ್!!

ಬರ್ನಾಡ್ ಅರ್ನಾಲ್ಟ್!!

ಫ್ರಾನ್ಸ್ ದೇಶದ ನಂಬರ್ ಒನ್ ಶ್ರೀಮಂತ ಬರ್ನಾಡ್ ಅರ್ನಾಲ್ಟ್ 63.3 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ. ಇವರು ತನ್ನ ಆಸ್ತಿಯಿಂದ ಫ್ರಾನ್ಸ್ ದೇಶವನ್ನು 15 ದಿನಗಳ ಕಾಲ ನಿರ್ವಹಣೆ ಮಾಡಬಹುದಂತೆ.!!

ಕಾರ್ಲೋಸ್ ಸ್ಲಿಮ್!!

ಕಾರ್ಲೋಸ್ ಸ್ಲಿಮ್!!

ಮೆಕ್ಸಿಕಕೊ ದೇಶದ ಶ್ರೀಮಂತ ಕಾರ್ಲೋಸ್ ಸ್ಲಿಮ್ 62.8 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ಇವರು ತನ್ನ ಆಸ್ತಿಯಿಂದ ಮೆಕ್ಸಿಕೊ ದೇಶವನ್ನು 82 ದಿನಗಳ ಕಾಲ ನಿರ್ವಹಣೆ ಮಾಡುವ ಶಕ್ತಿಯನ್ನು ಹೊಂದಿದ್ದಾರಂತೆ.!

ಜಾಕ್ ಮಾ!!

ಜಾಕ್ ಮಾ!!

ಚೀನಾದ ನಂಬರ್ ಒನ್ ಶ್ರೀಮಂತ ಜಾಕ್‌ ಮಾ 45.5 ಬಿಲಿಯನ್ ಡಾಲರ್‌ ಆಸ್ತಿಯನ್ನು ಹೊಂದಿದ್ದಾರೆ. ವಿಶ್ವದಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾವನ್ನು ದೇಶವನ್ನು 4 ದಿನಗಳ ಕಾಲ ಇವರು ನಡೆಸಬಲ್ಲರು ಎಂದು ವರದಿ ಹೇಳಿದೆ.!!

ಮುಖೇಶ್ ಅಂಬಾನಿ!!

ಮುಖೇಶ್ ಅಂಬಾನಿ!!

ಭಾರತದ ನಂಬರ್ ಒನ್ ಶ್ರೀಮಂತ ಮುಖೇಶ್ ಅಂಬಾನಿ 40.3 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ವಿಶ್ವದಲ್ಲಿಯೇ ಎರಡನೇ ಅತ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದದೇಶವನ್ನು 20 ದಿನಗಳ ಕಾಲ ನಿರ್ವಹಣೆ ಮಾಡು ಶಕ್ತಿ ಅಂಬಾನಿಗೆ ಇದೆಯಂತೆ.!!

ಲಿ-ಕ ಶಿಂಗ್!!

ಲಿ-ಕ ಶಿಂಗ್!!

ಹಾಂಗ್ ಕಾಂಗ್ ದೇಶದ ಶ್ರೀಮಂತ ವ್ಯಕ್ತಿ ಲಿ-ಕ ಶಿಂಗ್ 34.7 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ.! ಅತ್ಯಂತ ಚಿಕ್ಕ ದೇಶವಾದ ಹಾಂಗ್ ಕಾಂಗ್ ಅನ್ನು 191 ದಿನಗಳ ಕಾಲ ನಿರ್ವಹಣೆ ಮಾಡಬಹುದಾದ ಶಕ್ತಿ ಲಿ-ಕ ಶಿಂಗ್ ಅವರಿಗೆ ಇದೆಯಂತೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
How many days could the government keep running if the richest person of each country was paying for it?.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot