Home
ಸುದ್ದಿಜಾಲ

ಐಫೋನ್‌ SE (2022) ಬಿಡುಗಡೆ!..ಭಾರತದಲ್ಲಿ ಬೆಲೆ ಎಷ್ಟು?..ಫೀಚರ್ಸ್‌ ಏನು?

ಟೆಕ್‌ ದಿಗ್ಗಜ ಆಪಲ್ ಸಂಸ್ಥೆಯು ಬಹುನಿರೀಕ್ಷಿತ ಐಫೋನ್‌ SE (2022) ಬಿಡುಗಡೆ ಆಗಿದೆ. ವರ್ಚುವಲ್ ಕಾರ್ಯಕ್ರಮದ ಮೂಲಕ ಫೋನ್‌ ಅನ್ನು ಅನಾವರಣ ಮಾಡಲಾಗಿದೆ. ನೂತನ ಐಫೋನ್‌ SE (2022) ಫೋನ್ ಸಾಕಷ್ಟು ಅಪ್‌ಡೇಟ್‌ ಕಂಡಿದ್ದು, ಕಳೆದ ವರ್ಷ ಪರಿಚಯಿಸಲಾದ A15 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ. ಹಾಗೆಯೇ ಈ ಐಫೋನ್ 5G ಬೆಂಬಲವನ್ನು ಒಳಗೊಂಡಿದೆ.

ಐಫೋನ್‌ SE (2022) ಬಿಡುಗಡೆ!..ಭಾರತದಲ್ಲಿ ಬೆಲೆ ಎಷ್ಟು?..ಫೀಚರ್ಸ್‌ ಏನು?

ಹೌದು, ಮಾರುಕಟ್ಟೆಗೆ ಆಪಲ್ ಸಂಸ್ಥೆಯ ಐಫೋನ್‌SE (2022) ಎಂಟ್ರಿ ಕೊಟ್ಟಿದೆ. 2020 ರಲ್ಲಿ ಬಿಡುಗಡೆ ಆಗಿದ್ದ ಐಫೋನ್‌ SE ಸರಣಿಯ ಅಪ್‌ಡೇಟ್‌ ಭಾಗವಾಗಿರುವ ಈ ಐಫೋನ್‌ 64GB, 128GB ಮತ್ತು 256GB ಸ್ಟೋರೇಜ್ ವೇರಿಯಂಟ್‌ ಮಾದರಿಗಳನ್ನು ಹೊಂದಿದೆ. ಹಾಗೆಯೇ ಈ ಐಫೋನ್‌SE (2022) ಫೋನ್ ಹೊಸದಾಗಿ ಗ್ರೀನ್ ಬಣ್ಣದ ಆಯ್ಕೆ ಅನ್ನು ಪಡೆದಿದೆ. ಹಾಗಾದರೇ ಇನ್ನುಳಿದಂತೆ ಐಫೋನ್‌SE (2022) ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಪಲ್ ಐಫೋನ್ SE (2022) 4.7 ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750 x 1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರೆತೆಯು 326ppi ಆಗಿದ್ದು, 625 nits ವರೆಗೆ ಗರಿಷ್ಠ ಹೊಳಪನ್ನು ಹೊಂದಿದೆ. ಹೊಸ ಮಾದರಿಯು IP67 ಪ್ರಮಾಣೀಕೃತ ನಿರ್ಮಾಣದೊಂದಿಗೆ ಬರುತ್ತದೆ. ಹಾಗೆಯೇ ಈ ಹೊಸ ಐಫೋನ್ SE ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಕಠಿಣವಾದ ಗ್ಲಾಸ್ ಅನ್ನು ಹೊಂದಿದೆ ಎಂದು ಕಂಪನಿಯು ಹೇಳಿಕೊಂಡಿದೆ.

ಐಫೋನ್‌ SE (2022) ಬಿಡುಗಡೆ!..ಭಾರತದಲ್ಲಿ ಬೆಲೆ ಎಷ್ಟು?..ಫೀಚರ್ಸ್‌ ಏನು?

ಐಫೋನ್ SE (2022) ಆಪಲ್‌ ಕಂಪೆನಿ A 15 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 15 ಬೆಂಬಲ ನೀಡಲಿದೆ. ಇದರೊಂದಿಗೆ ಈ ಐಫೋನ್‌ 64GB, 128GB ಮತ್ತು 256GB ಸ್ಟೋರೇಜ್ ವೇರಿಯಂಟ್‌ ಮಾದರಿಗಳನ್ನು ಹೊಂದಿದೆ. ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಯಾವುದೇ ಅವಕಾಶವನ್ನ ನೀಡಿಲ್ಲ.

ಇನ್ನು ಐಫೋನ್ SE (2022) ರಿಯರ್‌ ಸೆಟ್‌ಅಪ್‌ನಲ್ಲಿ ಸಿಂಗಲ್‌ ಕ್ಯಾಮೆರಾ ಹೊಂದಿದೆ. ಪ್ರಾಥಮಿಕ ಕ್ಯಾಮರಾವು 12 ಮೆಗಾ ಪಿಕ್ಸೆಲ್ ಸೆನ್ಸಾರ್ ಇದ್ದು, f/ 1.8 ಲೆನ್ಸ್‌ + ಒಐಎಸ್ ಹೊಂದಿದೆ. ಇದು ಡೀಪ್ ಫ್ಯೂಷನ್, ಸ್ಮಾರ್ಟ್ HDR 4 ಮತ್ತು ಫೋಟೋಗ್ರಾಫಿಕ್ ಸ್ಟೈಲ್ಸ್ ಸೇರಿದಂತೆ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದು 60fps ವರೆಗೆ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಐಫೋನ್‌ SE (2022) ಬಿಡುಗಡೆ!..ಭಾರತದಲ್ಲಿ ಬೆಲೆ ಎಷ್ಟು?..ಫೀಚರ್ಸ್‌ ಏನು?

ಇನ್ನು ಸೆಲ್ಫಿಗಾಗಿ ಮುಂಬಾಗದಲ್ಲಿ 7 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಸೆಲ್ಫಿ ಕ್ಯಾಮೆರಾವು ನ್ಯಾಚುರಲ್, ಸ್ಟುಡಿಯೋ, ಬಾಹ್ಯರೇಖೆ, ಹಂತ, ಸ್ಟೇಜ್ ಮೊನೊ ಮತ್ತು ಹೈ-ಕೀ ಮೊನೊ ಎಂಬ ಆರು ಪರಿಣಾಮಗಳೊಂದಿಗೆ ಪೋರ್ಟ್ರೇಟ್ ಲೈಟಿಂಗ್ ಅನ್ನು ಬೆಂಬಲಿಸುತ್ತದೆ. ಇದು ಡೀಪ್ ಫ್ಯೂಷನ್, ಫೋಟೋಗಳಿಗಾಗಿ ಸ್ಮಾರ್ಟ್ HDR 4 ಮತ್ತು ಫೋಟೋಗ್ರಾಫಿಕ್ ಶೈಲಿಗಳನ್ನು ಸಹ ಒಳಗೊಂಡಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾದಿಂದ 1080p ವೀಡಿಯೊ ರೆಕಾರ್ಡಿಂಗ್ ಅನ್ನು ಸಕ್ರಿಯಗೊಳಿಸಿದೆ. ಟೈಮ್ ಲ್ಯಾಪ್ಸ್ ವೀಡಿಯೊ ಮತ್ತು ನೈಟ್ ಮೋಡ್ ಟೈಮ್ ಲ್ಯಾಪ್ಸ್‌ಗೆ ಸಹ ಬೆಂಬಲವಿದೆ.

ಆಪಲ್‌ ಐಫೋನ್‌ SE (2022) ಬ್ಯಾಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿಯನ್ನ ಹಂಚಿಕೊಂಡಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋಈನ್ 5G, 4G VoLTE, Wi-Fi 5, ಬ್ಲೂಟೂತ್ v5, GPS/ A-GPS, NFC ಮತ್ತು ಲೈಟ್ನಿಂಗ್ ಪೋರ್ಟ್ ಸೇರಿದಂತೆ ಸಂಪರ್ಕ ಆಯ್ಕೆಗಳೊಂದಿಗೆ ಬರುತ್ತದೆ. ಹಾಗೆಯೇ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬ್ಯಾರೋಮೀಟರ್, ಮೂರು-ಆಕ್ಸಿಸ್ ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ.

ಬೆಲೆ ಎಷ್ಟು?
ಭಾರತದಲ್ಲಿ ಐಫೋನ್‌ SE (2022) ಬೆಲೆ 64GB ಮಾದರಿಗೆ 43,900ರೂ. ಐಫೋನ್ 128GB ವೇರಿಯಂಟ್‌ಗೆ 48,900ರೂ. ಮತ್ತು 256GB ವೇರಿಯಂಟ್‌ಗೆ ಮಾದರಿಗೆ 58,900ರೂ. ಆಗಿದೆ. ಹೊಸದಾಗಿ ಗ್ರೀನ್ ಬಣ್ಣಸ ಆಯ್ಕೆಯ ಪಡೆದಿದೆ. ಇದೇ ಮಾ.18 ರಿಂದ ಮಾರಾಟ ಆರಂಭಿಸಲಿದೆ.

Best Mobiles in India

English summary
iPhone SE (2022) With A15 Bionic Chip Launched: Price in India, Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+