Subscribe to Gizbot

ಐಫೋನ್‌ ಬಳಕೆದಾರರು ತುಂಬಾ ಸ್ಮಾರ್ಟ್‌ ಅಂತೆ!

Written By:

ಐಫೋನ್‌ ಬಳಸುವ ಮಂದಿ ಸ್ಮಾರ್ಟ್‌ ಆಗಿ ಕೆಲಸ ಮಾಡುತ್ತಾರಂತೆ.! ಉಳಿದ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗಿಂತ ಐಫೋನ್‌ ಬಳಸುವ ಗ್ರಾಹಕರ ಮೆದುಳು ಬಹಳ ಚುರುಕು ಅಂತೆ.!

ಈ ರೀತಿ ಐಫೋನ್‌ ಬಳಕೆದಾರರಿಗೆ ಪಟ್ಟವನ್ನು ನೀಡಿದ್ದು ಇಂಗ್ಲೆಂಡ್‌ ಮೂಲದ Test of Wits ಹೆಸರಿನ ಸಂಸ್ಥೆ. ಈ ಸಂಸ್ಥೆ ಆನ್‌ಲೈನ್‌ನಲ್ಲಿ ವಿವಿಧ ಕಂಪೆನಿಗಳ ಸಾವಿರ ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಸಮೀಕ್ಷೆ ಮಾಡಿ ಐಫೋನ್‌ ಬಳಕೆದಾರರಿಗೆ ಈ ಬಿರುದು ನೀಡಿದೆ.ಅಗಸ್ಟ್‌ ತಿಂಗಳಿನಲ್ಲಿ ಈ ಸಮೀಕ್ಷೆ ನಡೆಸಿದ್ದು ಆನ್‌ಲೈನ್‌ಲ್ಲಿ ಕೇಳಿದ ಏಳು ಪ್ರಶ್ನೆಗೆ ಐಫೋನ್‌ ಬಳಕೆದಾರರು ಕಡಿಮೆ ಸಮಯದಲ್ಲಿ ನಿಖರವಾದ ಉತ್ತರವನ್ನು ಹೇಳಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಐಫೋನ್‌ ಬಳಕೆದಾರರು ತುಂಬಾ ಸ್ಮಾರ್ಟ್‌ ಅಂತೆ!

ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಹೊಂದಿದ ಗ್ರಾಹಕರು 99 ಸೆಕೆಂಡ್‌,ಎಚ್‌ಟಿಸಿ ಬಳಕೆದಾರರು 103 ಸೆಕೆಂಡ್‌,ನೋಕಿಯಾ ಬಳಕೆದಾರರು 109 ಸೆಕೆಂಡ್‌,ಬ್ಲ್ಯಾಕ್‌ಬೆರಿ ಗ್ರಾಹಕರು 118 ಸೆಕೆಂಡ್‌ನಲ್ಲಿ ಉತ್ತರ ನೀಡಿದ್ದರೆ,ಐಫೋನ್‌ ಹೊಂದಿರುವ ಬಳಕೆದಾರರು 94 ಸೆಕೆಂಡ್‌‌ನಲ್ಲೇ ಸರಿಯಾದ ಉತ್ತರ ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಈ ಸಮೀಕ್ಷೆಯಲ್ಲಿ ನೀವು ಭಾಗವಹಿಸುವ ಮೂಲಕ ನಿಮ್ಮ ಬುದ್ಧಿಶಕ್ತಿಯನ್ನು ಪರೀಕ್ಷಿಸಬಹುದು. ಆನ್‌ಲೈನ್‌ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ: atestofwits.latestcreativework.com

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ ಬ್ಯಾಟರಿ ವಾರ್‌: ಯಾರು ಬೆಸ್ಟ್‌?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot