ಸ್ಮಾರ್ಟ್‌ಫೋನ್‌ ಬ್ಯಾಟರಿ ವಾರ್‌: ಯಾರು ಬೆಸ್ಟ್‌?

By Ashwath
|

ವಿಶ್ವದ ವೇಗದ ಪ್ರೊಸೆಸರ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಐಫೋನ್‌ 5 ಎಸ್‌ ಬ್ಯಾಟರಿ ವಿಚಾರದಲ್ಲಿ ಸ್ಯಾಮ್‌ಸಂಗ್‌ನ ಗೆಲಾಕ್ಸಿ ಎಸ್‌4 ಎದುರು ಸೋತಿದೆ. ಸದ್ಯ ವಿಶ್ವದ ಎಲ್ಲಾ ಸ್ಮಾರ್ಟ್‌ಫೋನ್‌ ಬ್ಯಾಟರಿಗಳ ಮುಂದೆ ಗೆಲಾಕ್ಸಿ ಎಸ್‌4 ಬ್ಯಾಟರಿ ಹೆಚ್ಚು ಶಕ್ತಿಶಾಲಿ ಎಂದು ಇಂಗ್ಲೆಂಡ್‌ನಲ್ಲಿರುವ which ಬ್ಲಾಗ್‌ ಹೇಳಿದೆ.

ಸದ್ಯ ವಿಶ್ವದಲ್ಲಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳಾದ ಐಫೋನ್‌ 5ಎಸ್‌,ಐಫೋನ್‌ 5ಸಿ,ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4,ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಮಿನಿ,ಎಚ್‌ಟಿಸಿ ಒನ್‌, ಬ್ಲ್ಯಾಕ್‌ಬೆರಿ ಝಡ್‌ 10,ಎಚ್‌ಟಿಸಿ ಒನ್‌ ಮಿನಿ, ನೋಕಿಯಾ ಲೂಮಿಯಾ 1020 ಸ್ಮಾರ್ಟ್‌ಫೋನ್‌ಗಳನ್ನು which ಅಧ್ಯಯನಕ್ಕೆ ಪರಿಗಣಿಸಿ ರ್‍ಯಾಂಕಿಂಗ್‌ ನೀಡಿದೆ.

which ಬ್ಲಾಗ್‌ನವರು ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ನೆಟ್‌‌ವರ್ಕ್‌ ಸಿಗ್ನಲ್‌ ಚೆನ್ನಾಗಿ ಸಿಗುವ ಒಂದು ಪ್ರದೇಶದಲ್ಲಿ ಕಾಲ್‌ ಮತ್ತು ಇಂಟರ್‌ನೆಟ್‌ ಬ್ರೌಸ್‌ ಮಾಡುವ ಮೂಲಕ ಅಧ್ಯಯನ ನಡೆಸಿ ಈ ರ್‍ಯಾಂಕಿಂಗ್‌ ನೀಡಿದ್ದಾರೆ. ಪರೀಕ್ಷಿಸುವ ಸಮಯದಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಸ್ಕ್ರೀನಿನ ಬ್ರೈಟ್‌ನೆಸ್‌ ಸಹ ಒಂದೇ ರೀತಿಯಲ್ಲಿ ಸೆಟ್‌ಮಾಡಿಕೊಂಡು ಪರೀಕ್ಷಿಸಿದ್ದಾರೆ.

ಬಿಡುಗಡೆಯಾದ ಎರಡೇ ತಿಂಗಳಲ್ಲಿ 2 ಕೋಟಿ ಗೆಲಾಕ್ಸಿ ಎಸ್‌ 4 ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಯಾಮ್‌ಸಂಗ್‌ ಸೃಷ್ಟಿಸಿತ್ತು. ಭಾರತದಲ್ಲಿ ನಂಬರ್‌ ಒನ್‌ ಬ್ರ್ಯಾಂಡ್‌ ಕಂಪೆನಿ, ವಿಶ್ವದ ನಂಬರ್‌ ಒನ್‌ ಸ್ಮಾರ್ಟ್‌ಫೋನ್ ಕಂಪೆನಿ ಎಂದು ಹೆಸರುವಾಸಿಯಾಗಿರುವ ಸ್ಯಾಮ್‌ಸಂಗ್‌ ಈಗ which ಬ್ಲಾಗ್‌ ಅಧ್ಯಯನದಿಂದಾಗಿ ಮತ್ತೊಂದು ಪಟ್ಟ ಸಿಕ್ಕಿದಂತಾಗಿದೆ.

ಹೀಗಾಗಿ ಇಲ್ಲಿ which ಬ್ಲಾಗ್‌ನವರು ನಡೆಸಿದ ಅಧ್ಯಯನದ ವರದಿ ಇಲ್ಲಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಮಾರ್ಟ್‌‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

 ಸ್ಮಾರ್ಟ್‌ಫೋನ್‌ ಬ್ಯಾಟರಿ  ವಾರ್‌

ಸ್ಮಾರ್ಟ್‌ಫೋನ್‌ ಬ್ಯಾಟರಿ ವಾರ್‌


ಕರೆಯಲ್ಲಿ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4ನಲ್ಲಿ ಕಡಿಮೆ ಪ್ರಮಾಣದ ಬ್ಯಾಟರಿ ಖರ್ಚಾಗಿದೆ.

 ಸ್ಮಾರ್ಟ್‌ಫೋನ್‌ ಬ್ಯಾಟರಿ  ವಾರ್‌

ಸ್ಮಾರ್ಟ್‌ಫೋನ್‌ ಬ್ಯಾಟರಿ ವಾರ್‌


ಇಂಟರ್‌ನೆಟ್‌ ಬ್ರೌಸಿಂಗ್‌ನಲ್ಲೂ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4ನಲ್ಲಿ ಕಡಿಮೆ ಪ್ರಮಾಣದ ಬ್ಯಾಟರಿ ಖರ್ಚಾಗಿದೆ.

   ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ಬೆಲೆ:34,999

ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್‌ AMOLED ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
ಅಕ್ಟಾ ಕೋರ್‌ ಪ್ರೊಸೆಸರ್
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
2,600mAh ಬ್ಯಾಟರಿ

 ಎಚ್‌ಟಿಸಿ ಒನ್‌

ಎಚ್‌ಟಿಸಿ ಒನ್‌

ಬೆಲೆ:45,499

ವಿಶೇಷತೆ :
4.7 ಇಂಚಿನ ಎಲ್‌ಸಿಡಿ 3 ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್‌)
1.7GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ ಪ್ರೋಸೆಸರ್‍
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
4 ಎಂಪಿ ಆಲ್ಟ್ರಾ ಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
2GB RAM
3ಜಿ,ವೈಫೈ,ಮೈಕ್ರೋ ಯುಎಸ್‌ಬಿ
32GB ಆಂತರಿಕ ಮೊಮೋರಿ
2,300 mAh ಬ್ಯಾಟರಿ

  ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಮಿನಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಮಿನಿ

ಬೆಲೆ:22,900

ವಿಶೇಷತೆ
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.3 ಇಂಚಿನ qHD ಸೂಪರ್‌ AMOLED ಸ್ಕ್ರೀನ್‌
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
1.7GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
1.5GB of RAM
8GB ಆಂತರಿಕ ಮೆಮೋರಿ
64GBವರೆಗೆ ವಿಸ್ತರಿಸಬಹುದಾದಾ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 ಎಂಪಿ ಮುಂದುಗಡೆ ಕ್ಯಾಮೆರಾ
1900mAh ಬ್ಯಾಟರಿ

ಐಫೋನ್‌ 5 ಎಸ್‌

ಐಫೋನ್‌ 5 ಎಸ್‌

ಬೆಲೆ:52,000(16 GB)

ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
112 ಗ್ರಾಂ ತೂಕ
A7 ಚಿಪ್‌‌ 64 ಬಿಟ್‌ ಅರ್ಕಿಟೆಕ್ಚರ್‌
M7 ಮೋಷನ್‌ ಪ್ರೊಸೆಸರ್
16/32/64GB ಆಂತರಿಕ ಮೆಮೋರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
1560 mAh ಬ್ಯಾಟರಿ

  ಬ್ಲ್ಯಾಕ್‌ಬೆರಿ ಝಡ್‌ 10

ಬ್ಲ್ಯಾಕ್‌ಬೆರಿ ಝಡ್‌ 10

ಬೆಲೆ: 27,500

ವಿಶೇಷತೆ:
4.2 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌ (1280 x 768 ಪಿಕ್ಸೆಲ್)
1.5GHz T ಡ್ಯುಯಲ್‌ ಕೋರ್‌ ಪ್ರೊಸೆಸರ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
2GB RAM
ಮೈಕ್ರೋ ಎಸ್‌ಡಿ ಸ್ಲಾಟ್‌, ಎಚ್‌ಡಿಎಂಐ ಪೋರ್ಟ್,
ವೈಫೈ,ಬ್ಲೂಟೂತ್‌,ಎನ್‌ಎಫ್‌ಸಿ,
1,800 mAh ಬ್ಯಾಟರಿ

 ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ ಮಿನಿ

ಬೆಲೆ:32,999

ವಿಶೇಷತೆ:
ಸಿಂಗಲ್‌ ಸಿಮ್‌ 4.3 ಇಂಚಿನ ಎಲ್‌ಸಿಡಿ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.4GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
16GB ಆಂತರಿಕ ಮೆಮೋರಿ
ಎಲ್‌ಇಡಿ ಫ್ಲ್ಯಾಶ್‌ ಸಹಿತ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌‌,ಬ್ಲೂಟೂತ್‌
1800mAh ಬ್ಯಾಟರಿ

  ಐಫೋನ್‌ 5 ಸಿ

ಐಫೋನ್‌ 5 ಸಿ

ಬೆಲೆ:41,900(16 GB)

ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
A6 ಚಿಪ್‌‌
16/32GB ಆಂತರಿಕ ಮೆಮೋರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
1510 mAh ಬ್ಯಾಟರಿ

ನೋಕಿಯಾ ಲೂಮಿಯಾ 1020

ನೋಕಿಯಾ ಲೂಮಿಯಾ 1020

ಬೆಲೆ:47,222

ವಿಶೇಷತೆ:
4.5 ಇಂಚಿನ AMOLED WXGA ಸ್ಕ್ರೀನ್‌(1280x768 ಪಿಕ್ಸೆಲ್‌)
1.5 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
2GB RAM
ವಿಂಡೋಸ್‌ ಫೋನ್‌8 ಆಪರೇಟಿಂಗ್‌ ಸಿಸ್ಟಂ
32GB ಆಂತರಿಕ ಮೆಮೋರಿ
41 ಎಂಪಿ ಹಿಂದುಗಡೆ ಕ್ಯಾಮೆರಾ(Carl Zeiss optics, optical image stabilization, autofocus, Xenon,LED flash)
1.2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌,ಜಿಪಿಎಸ್‌,ಮೈಕ್ರೋ ಯುಎಸ್‌ಬಿ,ಎನ್‌ಎಫ್‌ಸಿ,
2000 mAh ಬ್ಯಾಟರಿ

ಸ್ಮಾರ್ಟ್‌ಫೋನ್‌ ಬ್ಯಾಟರಿ ಅಧ್ಯಯನದ ವರದಿಯ ಮಾಹಿತಿ ಮೂಲ:blogs.which.co.uk

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X