Home
ಸುದ್ದಿಜಾಲ

iPhone ಬಳಕೆದಾರರಿಗೆ ಎಚ್ಚರಿಕೆ! ಈಗಲೇ ನಿಮ್ಮ ಫೋನ್‌ನಲ್ಲಿ ಈ ಕೆಲಸ ಮಾಡಿ

ಐಫೋನ್‌ಗಳ ಕಾರ್ಯಕ್ಷಮತೆ ಹಾಗೂ ಭದ್ರತಾ ಫೀಚರ್ಸ್‌ಗೆ ಮಾರು ಹೋಗುವ ಗ್ರಾಹಕರು ಈ ಫೋನ್‌ಗಳ ಖರೀದಿಗೆ ಹೆಚ್ಚು ಕೇಂದ್ರೀಕರಿಸುತ್ತಾರೆ. ಆದರೆ, ಈಗ ಯಾರೆಲ್ಲಾ ಆಪಲ್‌ ಐಫೋನ್‌ ಹೊಂದಿದ್ದಾರೋ ಅಥವಾ ಆಪಲ್‌ ಡಿವೈಸ್‌ ಹೊಂದಿದ್ದಾರೋ ಅವರು ಆತಂಕಕ್ಕೆ ಒಳಗಾಗುವ ಮಾಹಿತಿ ಹೊರಬಿದ್ದಿದೆ.

ಹೌದು, ಐಫೋನ್‌ ಎಂದರೆ ಅದಕ್ಕೆ ಮತ್ತೊಂದು ಪರ್ಯಾಯ ಹೆಸರು ಎಂದರೆ ಭದ್ರತೆ. ಆದರೆ, ಈ ಫೋನ್‌ಗಳ ಭದ್ರತಾ ವ್ಯವಸ್ಥೆಗೂ ಸ್ಕ್ಯಾಮರ್‌ಗಳು ಎಂಟ್ರಿ ಕೊಡುತ್ತಿದ್ದು, ಇದನ್ನು ಶೀಘ್ರದಲ್ಲೇ ಪತ್ತೆ ಮಾಡಿರುವ ಆಪಲ್‌ ತಕ್ಷಣವೇ ಐಫೋನ್‌ಗಳನ್ನು ಅಪ್‌ಡೇಟ್‌ ಮಾಡಬೇಕು ಎಂದು ತಿಳಿಸಿದೆ. ಹಾಗಿದ್ರೆ, ಐಫೋನ್‌ಗಳಲ್ಲಿ ಸಂಭವಿಸಿದ ಸಮಸ್ಯೆಗಳೇನು? ಸ್ಕ್ಯಾಮರ್‌ಗಳು ಇದರಿಂದ ಹೇಗೆ ಲಾಭ ಪಡೆಯಲಿದ್ದಾರೆ ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

iPhone ಬಳಕೆದಾರರಿಗೆ ಎಚ್ಚರಿಕೆ! ಈಗಲೇ ನಿಮ್ಮ ಫೋನ್‌ನಲ್ಲಿ ಈ ಕೆಲಸ ಮಾಡಿ

ಆಪಲ್ ಡೆವಲಪರ್‌ಗಳಿಗೆ iOS 16.6 ನ ಬೀಟಾ ಆವೃತ್ತಿಗಳನ್ನು ಹೊರತಂದಿದ್ದು, ಇದು ಬಹುಪಾಲು ಬಳಕೆದಾರರಿಗೆ ಸಂಬಂಧಿಸದಿರಬಹುದು. ಆದರೆ, ಇದು ಬಳಕೆದಾರರಿಗೆ ನಿರ್ಣಾಯಕವಾಗಿದೆ. ಹಾಗೆಯೇ ಆಪಲ್‌ನ ರಾಪಿಡ್ ಸೆಕ್ಯುರಿಟಿ ರೆಸ್ಪಾನ್ಸ್ ಸಿಸ್ಟಮ್‌ನ ಭಾಗವಾಗಿದ್ದು, iOS 16.5.1 ಗಾಗಿ ಮೀಸಲಾಗಿದೆ. ಜೊತೆಗೆ ಈ ಅಪ್‌ಡೇಟ್‌ ಹ್ಯಾಕರ್‌ಗಳಿಂದ ದುರ್ಬಳಕೆಯಾಗಬಹುದಾದ ಭದ್ರತಾ ದೋಷವನ್ನು ಸರಿಪಡಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ ಬಳಕೆದಾರರು ತಮ್ಮ ಐಫೋನ್‌ಗಳನ್ನು ಇತ್ತೀಚಿನ ಓಎಸ್‌ಗೆ ನವೀಕರಿಸಲು ಸಲಹೆ ನೀಡಲಾಗುತ್ತದೆ. ಆದರೆ, ಈ ರಾಪಿಡ್ ಸೆಕ್ಯುರಿಟಿ ರೆಸ್ಪಾನ್ಸ್ ಅಪ್‌ಡೇಟ್‌ ವಿಚಾರಕ್ಕೆ ಬಂದಾಗ ಮಾತ್ರ ಬಳಕೆದಾರರು ತಮ್ಮ ಡಿವೈಸ್‌ಗಳನ್ನು ತಕ್ಷಣವೇ ಅಪ್‌ಡೇಟ್‌ ಮಾಡಬೇಕಿದೆ. ಯಾಕೆಂದರೆ ಹ್ಯಾಕರ್‌ಗಳು ಮತ್ತು ದುರುದ್ದೇಶ ಹೊಂದಿರುವವರು ಬಳಕೆದಾರರ ವೈಯಕ್ತಿಕ ಡೇಟಾ ವಿಭಾಗಕ್ಕೆ ಶೀಘ್ರದಲ್ಲೇ ಎಂಟ್ರಿ ಕೊಟ್ಟುಬಿಡುತ್ತಾರೆ.

ಏನಿದು ರಾಪಿಡ್ ಸೆಕ್ಯುರಿಟಿ ರೆಸ್ಪಾನ್ಸ್ ?: ಈ ರಾಪಿಡ್ ಸೆಕ್ಯುರಿಟಿ ರೆಸ್ಪಾನ್ಸ್ (RSS) ಸಂಪೂರ್ಣ ಸಾಫ್ಟ್‌ವೇರ್ ಅಪ್‌ಡೇಟ್ ಅಗತ್ಯವಿಲ್ಲದೇ ಬಳಕೆದಾರರಿಗೆ ಭದ್ರತಾ ಪರಿಹಾರಗಳನ್ನಷ್ಟೇ ನೀಡಲು ಕೇಂದ್ರೀಕರಿಸುತ್ತದೆ. ಇದು ಕೇವಲ ಅಪ್‌ಡೇಟ್‌ ಮಾತ್ರ ಅಗಿರಲಿದ್ದು, ಬದಲಾಗಿ ಇದು ಅಪ್‌ಗ್ರೇಡ್‌ ಆಗಿರುವುದಿಲ್ಲ. ಇದರೊಂದಿಗೆ ರಾಪಿಡ್ ಸೆಕ್ಯುರಿಟಿ ರೆಸ್ಪಾನ್ಸ್ ಪ್ರತಿಕ್ರಿಯೆಗಳಿಗೆ ಡಿವೈಸ್‌ಗಳನ್ನು ರೀಸ್ಟಾರ್ಟ್‌ ಮಾಡಬೇಕಾಗುತ್ತದೆ.

ಅದರಂತೆ ಆಪಲ್ ತನ್ನ ಬಳಕೆದಾರರನ್ನು ತ್ವರಿತವಾಗಿ ರಕ್ಷಿಸಲು ಭದ್ರತಾ ನವೀಕರಣಗಳನ್ನು ಅಭಿವೃದ್ಧಿಪಡಿಸಲು ಮತ್ತು ವಿತರಿಸಲು ಮುಂದಾಗಿದ್ದು, ನವೀಕರಣ ಫೀಚರ್ಸ್‌ ಐಓಎಸ್‌ 16.4.1, ಐಪ್ಯಾಡ್‌ ಓಎಸ್‌ 16.4.1, ಮ್ಯಾಕ್‌ ಓಎಸ್‌ 13.3.1 ಮತ್ತು ನಂತರದ ಆವೃತ್ತಿಗಳಲ್ಲಿ ಲಭ್ಯವಿದೆ. ಇನ್ನು ಈ ಮೂರು ಆಪರೇಟಿಂಗ್ ಸಿಸ್ಟಮ್‌ಗಳಲ್ಲಿನ ವೆಬ್‌ಕಿಟ್‌ನಲ್ಲಿ ದುರ್ಬಲತೆಯನ್ನು ಕಂಡುಕೊಳ್ಳಲಾಗಿದೆ.

ಇದನ್ನು ಹೇಗೆ ಅಪ್‌ಡೇಟ್‌ ಮಾಡುವುದು?
ಐಫೋನ್ ಅಥವಾ ಐಪ್ಯಾಡ್‌ ನಲ್ಲಿ ಭದ್ರತಾ ಪ್ರತಿಕ್ರಿಯೆಗಳು ಮತ್ತು ಸಿಸ್ಟಮ್ ಫೈಲ್‌ಗಳು ಅನ್ನು ಆಕ್ಟಿವ್‌ ಮಾಡಲು ಸೆಟ್ಟಿಂಗ್ ವಿಭಾಗಕ್ಕೆ ಹೋಗಿ. ನಂತರ ನ್ಯಾವಿಗೇಟ್ ಮಾಡಿ, ಅಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್‌ ಆಯ್ಕೆಮಾಡಿ. ಅಲ್ಲಿ ನೀವು ನವೀಕರಣ ವಿಭಾಗಕ್ಕೆ ಪ್ರವೇಶಿಸಿ ಬಳಿಕ ಅದನ್ನು ಟಾಗಲ್ ಆನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಈ ರೀತಿ ಮಾಡಿದ್ರೆ ನಿಮ್ಮ ಫೋನ್‌ ಸೇಫ್‌ ಆಗಿರಲಿದೆ.

ಇದರೊಂದಿಗೆ ಮ್ಯಾಕ್ ಬಳಕೆದಾರರು ಆಪಲ್ ಲೋಗೋವನ್ನು ಕ್ಲಿಕ್ ಮಾಡುವ ಮೂಲಕ ಆಪಲ್ ಮೆನು ಓಪನ್‌ ಮಾಡಿ. ನಂತರ ಸಿಸ್ಟಮ್ ಸೆಟ್ಟಿಂಗ್‌ಆಯ್ಕೆಮಾಡಿ. ಸೆಟ್ಟಿಂಗ್‌ಗಳ ವಿಂಡೋದಲ್ಲಿ, ಸಾಮಾನ್ಯ ಮತ್ತು ಸಾಫ್ಟ್‌ವೇರ್ ನವೀಕರಣ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ಅಪ್‌ಡೇಟ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ಫೈಲ್‌ ಅನ್ನು ಇನ್‌ಸ್ಟಾಲ್‌ ಮಾಡಿ ನಂತರ ಟಾಗಲ್ ಆನ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಮತ್ತೊಂದು ಘಟನೆಯಲ್ಲಿ ಅಂದರೆ ಕಳೆದ ತಿಂಗಳು ಭಾರತ ಸರ್ಕಾರದ ಸೈಬರ್ ಭದ್ರತಾ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸುವ ರಾಷ್ಟ್ರೀಯ ನೋಡಲ್ ಏಜೆನ್ಸಿಯಾದ CERT-In ದೇಶದ ಆಪಲ್ ಉತ್ಪನ್ನಗಳಿಗೆ ಎಚ್ಚರಿಕೆಗಳನ್ನು ನೀಡಿತ್ತು. ಬಳಕೆದಾರರ ಮ್ಯಾಕ್ ಪಿಸಿಗಳು, ಆಪಲ್ ವಾಚ್ ಮತ್ತು ಆಪಲ್ ಟಿವಿಗಳ ಸಾಫ್ಟ್ ವೇರ್ ಗಳಲ್ಲಿ ಲೋಪಗಳು ಪತ್ತೆಯಾಗಿದ್ದು, ಶೀಘ್ರವೇ ಅಪ್‌ಡೇಟ್‌ ಮಾಡಿ ಎಂದು ಸೂಚನೆ ನೀಡಲಾಗಿತ್ತು.

Best Mobiles in India

English summary
Another alternate name for iPhone is security. However, scammers are giving entry to the security system of these phones, and Apple, which has discovered this soon, has said that iPhones should be updated immediately.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+