ದುಬಾರಿ ಬೆಲೆಯ ಐಫೋನ್ X ಕ್ಷಣ ಮಾತ್ರದಲ್ಲಿ ಸೋಲ್ಡ್ ಔಟ್
ಇಂದು ಮಧ್ಯಾಹ್ನ 12.30ಕ್ಕೆ ಶುರುವಾದ ಪ್ರೀ ಬುಕ್ಕಿಂಗ್ 12.31ಕ್ಕೆ ಮುಕ್ತಾಯವಾಗಿದ್ದು, ಕೇವಲ ಒಂದೇ ನಿಮಿಷದಲ್ಲಿ ಐಫೋನ್ X ಔಟ್ ಆಫ್ ಸ್ಟಾಕ್ ಆಗಿದೆ. ಈಗಾಗಲೇ ಐಫೋನ್ X ಬುಕ್ ಮಾಡಿದವರಿಗೆ ಫೋನ್ ನವೆಂಬರ್ 3 ನಂತರ ದೊರೆಯಲಿದೆ.
ಐಫೋನ್ X ಭಾರತದಲ್ಲಿ ಭಾರೀ ಬೇಡಿಕೆಯನ್ನು ಗಳಿಸಿಕೊಂಡಿದೆ. ಬಿಡುಗಡೆಗೊಂಡ ಕ್ಷಣಗಳಲ್ಲೇ ಸೋಲ್ಡ್ ಔಟ್ ಆಗುವ ಮೂಲಕ ಹೊಸದೊಂದು ದಾಖಲೆಯನ್ನು ಬಿಡುಗಡೆಗೂ ಮುನ್ನೇ ನಿರ್ಮಿಸಿದೆ ಎನ್ನಲಾಗಿದೆ.

ಓದಿರಿ: ಫ್ಲಿಪ್‌ಕಾರ್ಟ್ ಲೂಟ್: ರೂ.16000 ಕಡಿತಗೊಂಡ ಸ್ಯಾಮ್‌ಸಂಗ್ ಗ್ಯಾಲೆಕ್ಸಿ
ಇಂದು ಮಧ್ಯಾಹ್ನ 12.30ಕ್ಕೆ ಶುರುವಾದ ಪ್ರೀ ಬುಕ್ಕಿಂಗ್ 12.31ಕ್ಕೆ ಮುಕ್ತಾಯವಾಗಿದ್ದು, ಕೇವಲ ಒಂದೇ ನಿಮಿಷದಲ್ಲಿ ಐಫೋನ್ X ಔಟ್ ಆಫ್ ಸ್ಟಾಕ್ ಆಗಿದೆ. ಈಗಾಗಲೇ ಐಫೋನ್ X ಬುಕ್ ಮಾಡಿದವರಿಗೆ ಫೋನ್ ನವೆಂಬರ್ 3 ನಂತರ ದೊರೆಯಲಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:
ಭಾರತದಲ್ಲಿ ಆಪಲ್ ಲಾಂಚ್ ಮಾಡುತ್ತಿರುವ ಐಫೋನ್ X ಎರಡು ಆವೃತ್ತಿಯಲ್ಲಿ ದೊರೆಯುತ್ತಿದೆ ಎನ್ನಲಾಗಿದೆ. ಈಗಾಗಲೇ ಜಾಗತಿಕವಾಗಿ ಹೆಸರು ಗಳಿಸಿಕೊಂಡಿರುವ ಈ ಫೋನ್ ಭಾರತೀಯ ಮನಸ್ಸನ್ನು ಕದ್ದಿದೆ ಎನ್ನಲಾಗಿದೆ.

ಐಫೋನ್ X ವಿಶೇಷತೆ:
OLED ಡಿಸ್‌ಪ್ಲೇ ಪ್ಯಾನಲ್ ಅನ್ನು ಐಫೋನ್ X ನಲ್ಲಿ ಅಳವಡಿಸಿದ್ದು, 5.8 ಇಂಚಿನ ಬಿಜೆಲ್ ಲೆಸ್ ವಿನ್ಯಾಸವಾಗಿದ್ದು, ಐಫೋನ್ X ನಲ್ಲಿ 12 MP ಡ್ಯುಯಲ್ ಕ್ಯಾಮೆರಾ ಇದರಲ್ಲಿ ವೈಡ್ ಆಂಗಲ್ ಮತ್ತು ಟೆಲಿ ಲೈನ್ಸ್ ಕಾಣಬಹುದಾಗಿದೆ. ಇದಲ್ಲದೇ ಡ್ಯುಯಲ್ ಟೊನ್ LED ಫ್ಲಾಷ್ ಸಹ ಇದರಲ್ಲಿದೆ.

ಎರಡು ಆವೃತ್ತಿಯ ಬೆಲೆ:
ಐಫೋನ್ X ಭಾರತೀಯ ಮಾರುಕಟ್ಟೆಯಲ್ಲಿ ಎರಡು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. 64GB ಐಫೋನ್ X ಬೆಲೆ ರೂ. 89,000 ಆಗಲಿದ್ದು, ಇದೇ ಮಾದರಿಯಲ್ಲಿ 256GB ಆವೃತ್ತಿಯ ಬೆಲೆ ರೂ. 102,000ಕ್ಕೆ ದೊರೆಯಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಆಫರ್:
ಐಫೋನ್ X ಮೇಲೆ ಫ್ಲಿಪ್‌ಕಾರ್ಟ್ ಆಫರ್ ಘೋಷಣೆ ಮಾಡಿದ್ದು, ನೋ EMI ಕಾಸ್ಟ್ ಆಫರ್ ನೀಡುತ್ತಿದೆ. ಇದು ಪ್ರತಿ ತಿಂಗಳ EMI ರೂ.9889ನಿಂದ ಆರಂಭವಾಗಲಿದೆ. ಇಲ್ಲದೇ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ 5% ಡಿಸ್ಕೌಂಟ್ ದೊರೆಯಲಿದೆ.


Click it and Unblock the Notifications








