ಭರ್ಜರಿ ಡಿಸ್ಕೌಂಟ್‌ನಲ್ಲಿ ಐಫೋನ್ XR ಖರೀದಿಗೆ ಇದುವೇ ಸಕಾಲ!
ಮೊಬೈಲ್ ಮಾರುಕಟ್ಟೆಯಲ್ಲಿ ಐಫೋನ್ ಮಾಡೆಲ್‌ಗಳಿಗೆ ಡಿಮ್ಯಾಂಡ್ ಇದ್ದೆ ಇದೆ. ನೂತನ ಐಫೋನ್ ಮಾಡೆಲ್‌ಗಳು ಸೇರಿದಂತೆ, ಕೆಲವು ಹಳೆಯ ಮಾಡೆಲ್‌ನ ಐಫೋನ್ ಮಾಡೆಲ್‌ಗಳು ಡಿಮ್ಯಾಂಡ್ ಇದೆ. ಆ ಪೈಕಿ ಐಫೋನ್ XR ಫೋನ್ ಸಹ ಜನಪ್ರಿಯತೆ ಪಡೆದಿದೆ. ಈ ಫೋನ್ ಅನ್ನು ರಿಯಾಯಿತಿಯಲ್ಲಿ ಖರೀದಿಸಬೇಕು ಎನ್ನುವ ಗ್ರಾಹಕರಿಗೆ ಸದ್ಯ ಅಮೆಜಾನ್ ಇ ಕಾಮರ್ಸ್ ತಾಣ ಸೂಕ್ತ ಎನಿಸಿದೆ. ಏಕೆಂದರೇ ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಈ ಐಫೋನ್ ಆಫರ್ ನಲ್ಲಿ ಲಭ್ಯವಿದೆ.

ಹೌದು, ಅಮೆಜಾನ್ ತಾಣವು ಆಪಲ್ ಐಫೋನ್ XR ಫೋನ್ ರಿಯಾಯಿತಿ ನೀಡಿದೆ. 64GB ಸ್ಟೋರೇಜ್ ವೇರಿಯಂಟ್ ಐಫೋನ್ XR ಫೋನ್ 34,999ರೂ. ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ 14,900ರೂ.ಗಳ ವರೆಗೂ ಎಕ್ಸ್‌ಚೇಂಜ್ ಕೊಡುಗೆ ತಿಳಿಸಿದೆ. ಇದಲ್ಲದೇ ಕೆಲವು ಆಯ್ದ ಬ್ಯಾಂಕ್‌ಗಳ ಕಾರ್ಡ್ ಮೂಲಕ ಖರೀದಿಸಿದರೇ ಹೆಚ್ಚುವರಿ ಡಿಸ್ಕೌಂಟ್ ಸಹ ಲಭ್ಯ ಆಗಲಿದೆ. ಸದ್ಯ ಐಫೋನ್ 6 ಅಥವಾ 6s ಅಥವಾ ಐಫೋನ್ 7 ನಂತಹ ಹಳೆಯ ಐಫೋನ್ ಬಳಕೆ ಮಾಡುತ್ತಿರುವ ಗ್ರಾಹಕರು, ಆಕರ್ಷಕ ಬೆಲೆಯಲ್ಲಿ ಐಫೋನ್ XR ಫೋನ್‌ಗೆ ಅಪ್‌ಗ್ರೇಡ್ ಆಗಬಹುದು. ಹಾಗಾದರೇ ಐಫೋನ್ XR ಫೀಚರ್ಸ್ ಬಗ್ಗೆ ಹಾಗೂ ನೂತನ ಐಫೋನ್ 13 ಸರಣಿಯ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ
ಐಫೋನ್ XR ಫೋನ್ 1792x828 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.1 ಇಂಚಿನ LCD ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 326 ppi ಆಗಿದೆ. ಡಿಸ್‌ಪ್ಲೇಯ ಕಾಂಟ್ರಾಸ್ಟ್ ಅನುಪಾತವು 1400:1ರಷ್ಟಾಗಿದ್ದು, ಡಿಸ್‌ಪ್ಲೇಯು 150.9 x 75.7 x 8.3 mm ಸುತ್ತಳತೆಯನ್ನು ಪಡೆದುಕೊಂಡಿದೆ. 194 ಗ್ರಾಂ ತೂಕವನ್ನು ಹೊಂದಿದೆ.

ಪ್ರೊಸೆಸರ್ ಶಕ್ತಿ
ಆಪಲ್ ಐಫೋನ್ XR ಫೋನ್ Neural ಇಂಚಿನ್ ಜೊತೆಗೆ A12 ಬೈಯೋನಿಕ್ ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಐಫೋನ್‌ಗೆ iOS 12 ಆಪರೇಟಿಂಗ್ ಸಿಸ್ಟಮ್ ಹೆಚ್ಚಿನ ಬೆಂಬಲ ಒದಗಿಸಿದೆ. 64GB, 128GB ಮತ್ತು 256GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಆಯ್ಕೆಗಳನ್ನು ಹೊಂದಿದೆ. ಫೇಶಿಯಲ್ ರಿಕಾಗ್ನೈಸೇಶನ್ ಸೌಲಭ್ಯವನ್ನು ಪಡೆದುಕೊಂಡಿದೆ.

ಕ್ಯಾಮೆರಾ ವಿಶೇಷತೆ
ಐಫೋನ್ XR ಫೋನ್ ƒ/1.8 ಅಪರ್ಚರ್ ಸಾಮರ್ಥ್ಯದಲ್ಲಿ 12ಎಂಪಿ ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡಿದ್ದು, ಈ ಕ್ಯಾಮೆರಾವು 5x ಡಿಜಿಟಲ್ ಝೂಮ್ ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 7ಎಂಪಿ ಸೆನ್ಸಾರ್‌ನ ಕ್ಯಾಮೆರಾ ನೀಡಲಾಗಿದ್ದು, 1080p HD ರೆಕಾರ್ಡಿಂಗ್ ಬೆಂಬಲಿಸಲಿದೆ. ಜೊತೆಗೆ ಹೈಬ್ರಿಡ್ IR ಫಿಲ್ಟರ್, ಆಟೋಫೋಕಸ್, ಎಚ್‌ಆರ್‌ಡಿ, ಸ್ಲೋ ಮೋಷನ್, ಪೋರ್ಟ್‌ರೇಟ್ ಮೋಡ್ ಆಯ್ಕೆಗಳು ಇವೆ.

ಬ್ಯಾಟರಿ ಲೈಫ್
ಐಫೋನ್ 2,942mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದ್ದು, ಬ್ಯಾಟರಿ ಶಕ್ತಿ ನೀಡಲಿದೆ.

ಇತರೆ ಫೀಚರ್ಸ್
ಈ ಡಿವೈಸ್ IP67 ಸಾಮರ್ಥ್ಯದ ವಾಟರ್ ರೆಜಿಸ್ಟಂಟ್ ಸೌಲಬ್ಯವನ್ನು ಪಡೆದಿದ್ದು, ಫಿಂಗರ್‌ಪ್ರಿಂಟ್, ಫೇಸ್‌ಐಡಿ, ಬ್ಲೂಟೂತ್, ವೈಫೈ ಆಯ್ಕೆಗಳನ್ನು ಹೊಂದಿದೆ. ಆಂಬಿಯಂಟ್ ಲೈಟ್ ಸೆನ್ಸಾರ್, ಬಾರೊಮೀಟರ್, ಪ್ರೊಕ್ಸಿಮೀಟಿ ಸೆನ್ಸಾರ್, ವಾಯಿಸ್ ಓವರ್, ಸಿರಿ ವಾಯಿಸ್ ಅಸಿಸ್ಟಂಟ್, ಅಸಿಸ್ಟಿವ್ ಟಚ್, ಸ್ಪೀಕ್ ಸ್ಕ್ರೀನ್, ಸ್ವೀಚ್ ಕಂಟ್ರೋಲ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಐಫೋನ್ 13 ಫೋನ್ ಫೀಚರ್ಸ್
ಐಫೋನ್ 13 ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 13 ಮಿನಿ ಫೋನ್ ಫೀಚರ್ಸ್
ಐಫೋನ್ 13 ಮಿನಿ ಫೋನ್ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. . 800nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 13 ಪ್ರೊ ಫೋನ್ ಫೀಚರ್ಸ್
ಐಫೋನ್ 13 ಪ್ರೊ ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 13 ಪ್ರೊ ಮ್ಯಾಕ್ಸ್ ಫೋನ್ ಫೀಚರ್ಸ್
ಐಫೋನ್ 13 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತಮ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ ಸಹ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಮ್ಯಾಕ್ಸ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ನೈಟ್ ಮೋಡ್ ಆಯ್ಕೆ ಇದ್ದು, ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಬಹುದಾಗಿದೆ.


Click it and Unblock the Notifications








