ಬಂದೇ ಬಿಡ್ತು IPL; ಉಚಿತವಾಗಿ ಮ್ಯಾಚ್ ವೀಕ್ಷಿಸಲು ಈ ಪ್ಲ್ಯಾನ್ ಬೆಸ್ಟ್!
ಕ್ರಿಕೆಟ್ ಪ್ರಿಯರ ಪಾಲಿಗೆ ಲೀಗ್ 'ಇಂಡಿಯನ್ ಪ್ರೀಮಿಯರ್ ಲೀಗ್' (IPL) ಎಂದರೇ ಹಬ್ಬವೇ ಸರಿ. ಈ ಬಾರಿಯ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ಕ್ರಿಕೆಟ್ ಪ್ರಿಯರು ಮೊಬೈಲ್‌ನಲ್ಲಿ ಮ್ಯಾಚ್‌ಗಳನ್ನು ವೀಕ್ಷಿಸಲು ಉಚಿತ ಹಾಟ್ ಸ್ಟಾರ್ ವಿಐಪಿ ಚಂದಾದಾರಿಕೆ ಸೌಲಭ್ಯ ಇರುವ ಪ್ರೀಪೇಯ್ಡ್ ಯೋಜನೆ ರೀಚಾರ್ಜ್ ಮಾಡಿಸಲು ಮುಂದಾಗುತ್ತಾರೆ.

ಹೌದು, ಜನಪ್ರಿಯ ಏರ್‌ಟೆಲ್ ಹಾಗೂ ಜಿಯೋ ಟೆಲಿಕಾಂಗಳ ಕೆಲವು ಪ್ರೀಪೇಯ್ಡ್ ಯೋಜನೆಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವದ ಪ್ಲ್ಯಾನ್‌ಗಳನ್ನು ಹೊಂದಿವೆ. ಅದರೊಂದಿಗೆ ಅನಿಯಮಿತ ವಾಯಿಸ್ ಕರೆ, ಎಸ್‌ಎಮ್‌ಎಸ್, ದೈನಂದಿನ ಡೇಟಾ ಪ್ರಯೋಜನಗಳನ್ನು ಪಡೆದಿವೆ. ಹಾಗೆಯೇ ಈ ಪ್ಲ್ಯಾನ್‌ಗಳು ಭಿನ್ನ ವ್ಯಾಲಿಡಿಟಿ ಸೌಲಭ್ಯದ ಆಯ್ಕೆಗಳನ್ನು ಪಡೆದಿವೆ. ಹಾಗಾದರೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸೌಲಭ್ಯದ ಪಡೆದ ಏರ್‌ಟೆಲ್ ಮತ್ತು ಜಿಯೋ ಟೆಲಿಕಾಂ ನ ಕೆಲವು ಪ್ರಮುಖ ಪ್ರೀಪೇಯ್ಡ್ ಪ್ಲ್ಯಾನ್ ಗಳ ಬಗ್ಗೆ ಮುಂದೆ ಓದಿರಿ.

ಜಿಯೋ 401ರೂ. ಪ್ರೀಪೇಯ್ಡ್ ಯೋಜನೆ
ಜಿಯೋದ ಈ ಪ್ರೀಪೇಯ್ಡ್ ಪ್ಲಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ ಒಟ್ಟು 90GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಜಿಯೋ ಟು ಜಿಯೋ ಉಚಿತ ವಾಯಿಸ್ ಕರೆ ಹಾಗೂ ಜಿಯೋ ಟು ಇತರೆ ಟೆಲಿಕಾಂಗಳ ಕರೆಗಳು ಸಹ ಅನಿಯಮಿತ ಉಚಿತ. ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ಇದೆ. ಹಾಗೆಯೇ ಜಿಯೋ ಆಪ್ಸ್ ಲಭ್ಯ.

ಏರ್‌ಟೆಲ್ 448ರೂ. ಪ್ರೀಪೇಯ್ಡ್ ಯೋಜನೆ
ಏರ್‌ಟೆಲ್ ಸಂಸ್ಥೆಯ ಈ ಹೊಸ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಯಾವುದೇ ನೆಟವರ್ಕ್ ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಪ್ರತಿದಿನ 100ಎಸ್‌ಎಮ್‌ಎಸ್ ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.

ಜಿಯೋ 888ರೂ. ಪ್ಲ್ಯಾನ್
ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್ ಕಳುಹಿಸುವ ಅವಕಾಶವು ದೊರೆಯಲಿದೆ. 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ.

ಏರ್‌ಟೆಲ್ 401ರೂ. ಪ್ರೀಪೇಯ್ಡ್ ಯೋಜನೆ
ಏರ್‌ಟೆಲ್ ಸಂಸ್ಥೆಯ ಈ ಹೊಸ ಪ್ರೀಪೇಯ್ಡ್ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿ ದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಆದರೆ ಈ ಪ್ಲ್ಯಾನಿನಲ್ಲಿ ಯಾವುದೇ ಉಚಿತ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಿರುವುದಿಲ್ಲ.

ಜಿಯೋ 666ರೂ. ಪ್ಲ್ಯಾನ್
ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್ ಕಳುಹಿಸುವ ಅವಕಾಶವು ದೊರೆಯಲಿದೆ. 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ.

ಜಿಯೋ 2599ರೂ. ಪ್ರೀಪೇಯ್ಡ್ ಯೋಜನೆ
ಜಿಯೋದ 2,599ರೂ. ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.


Click it and Unblock the Notifications








