Home
ಸುದ್ದಿಜಾಲ

IPL 2023: ಮ್ಯಾಚ್‌ ವೀಕ್ಷಿಸಲು ಯಾವೆಲ್ಲಾ ಪ್ಲ್ಯಾನ್‌ನಲ್ಲಿ ಹೆಚ್ಚಿನ ಡೇಟಾ ಲಭ್ಯ?

IPL 2023 ಕ್ರಿಕೆಟ್‌ ಪ್ರೇಮಿಗಳ ಹಬ್ಬ. ಅದರಲ್ಲೂ ತಮ್ಮಿಷ್ಟದ ಆಟಗಾರನ ಪಂದ್ಯ ನೋಡಲು ಯುವಕ ಹಾಗೂ ಯುವತಿಯರು ಕಾತುರದಿಂದ ಕಾಯುತ್ತಿರುತ್ತಾರೆ. ಇದರ ನಡುವೆ ಮೊಬೈಲ್‌ನಲ್ಲೇ ಮ್ಯಾಚ್‌ ವೀಕ್ಷಣೆ ಮಾಡಬಹುದಾಗಿದ್ದು, ಇದಕ್ಕೆ ಡೇಟಾ ಅತ್ಯಾವಶ್ಯಕ. ಈ ನಡುವೆ ಯಾವ ಟೆಲಿಕಾಂ ಗಳ ಪ್ಲ್ಯಾನ್‌ಗಳಲ್ಲಿ ಎಷ್ಟು ಹೆಚ್ಚಿನ ಡೇಟಾ ಲಭ್ಯ ಎಂದು ತಿಳಿದುಕೊಳ್ಳಿ.

ಹೌದು, IPL 2023 ಪಂದ್ಯಗಳನ್ನು ವೀಕ್ಷಣೆ ಮಾಡಲು ನೀವು ಏರ್‌ಟೆಲ್, ವೊಡಾಫೋನ್-ಐಡಿಯಾ ಮತ್ತು ರಿಲಯನ್ಸ್ ಜಿಯೊದಿಂದ 3GB ಅಥವಾ ಹೆಚ್ಚಿನ ದೈನಂದಿನ ಡೇಟಾದೊಂದಿಗೆ ಇರುವ ಪ್ರಮುಖ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ರೀಚಾರ್ಜ್‌ ಮಾಡಿಕೊಳ್ಳಬಹುದು. ಈ ಹೆಚ್ಚಿನ ಡೇಟಾದಿಂದಾಗಿ ಉತ್ತಮ ಕ್ವಾಲಿಟಿಯ ಐಪಿಎಲ್‌ ಮ್ಯಾಚ್‌ ವೀಕ್ಷಣೆ ಸಾಧ್ಯವಾಗುವುದರ ಜೊತೆಗೆ ಇತರೆ ಸ್ಟ್ರೀಮಿಂಗ್‌ಗೂ ಸಹ ಅನುಕೂಲ. ಹಾಗಿದ್ರೆ, ಬನ್ನಿ ಯಾವೆಲ್ಲಾ ಟೆಲಿಕಾಂ ಕಂಪೆನಿಗಳು ಹೆಚ್ಚಿನ ಡೇಟಾ ಇರುವ ಪ್ಲ್ಯಾನ್‌ ಹೊಂದಿವೆ ಎಂಬುದನ್ನು ನೋಡೋಣ.

IPL 2023: ಮ್ಯಾಚ್‌ ವೀಕ್ಷಿಸಲು ಯಾವೆಲ್ಲಾ ಪ್ಲ್ಯಾನ್‌ನಲ್ಲಿ ಹೆಚ್ಚಿನ ಡೇಟಾ ಲಭ್ಯ?

ರಿಲಯನ್ಸ್ ಜಿಯೋ 219ರೂ. ಪ್ಲ್ಯಾನ್‌: ಬಳಕೆದಾರರಿಗೆ ಜಿಯೋ ನೀಡುವಷ್ಟು ಹೆಚ್ಚಿನ ಸೇವೆಯನ್ನು ಇತರೆ ಯಾವುದೇ ಟೆಲಿಕಾಂ ಸೇವೆಗಳು ನೀಡುವುದಿಲ್ಲ ಎನ್ನಬಹುದು. ಅದರಂತೆ 219ರೂ. ಗಳ ಪ್ಲ್ಯಾನ್‌ನಲ್ಲಿ 14 ದಿನಗಳ ಮಾನ್ಯತೆಯೊಂದಿಗೆ 3GB ದೈನಂದಿನ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಅನಿಯಮಿತ ಕರೆ ಮತ್ತು 5G ಡೇಟಾ ಜೊತೆಗೆ ದಿನಕ್ಕೆ 100 ಎಸ್‌ಎಮ್‌ಎಸ್‌ ಸೌಲಭ್ಯ ಹಾಗೂ 2GB ಹೆಚ್ಚುವರಿ ಡೇಟಾವನ್ನು ಸಹ ಈ ಮೂಲಕ ಪಡೆದುಕೊಳ್ಳಬಹುದು.

ಏರ್‌ಟೆಲ್‌ನ 499 ರೂ. ಪ್ರಿಪೇಯ್ಡ್ ಪ್ಲ್ಯಾನ್: ಈ ಪ್ಲ್ಯಾನ್‌ ಐಪಿಎಲ್‌ ಪ್ರಿಯರಿಗೆ ಇನ್ನಷ್ಟು ಸಂತಸ ಸಿಗಲಿದೆ. ಇದರಲ್ಲಿ ಬಳಕೆದಾರರು 28 ದಿನಗಳ ಮಾನ್ಯತೆಯೊಂದಿಗೆ 3GB ದೈನಂದಿನ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಮ್‌ಎಸ್‌ ಸೌಲಭ್ಯ ಹಾಗೂ ಅನಿಯಮಿತ 5G ಡೇಟಾವನ್ನು ಆಯ್ಕೆ ಇದರಲ್ಲಿದೆ. ಇದಿಷ್ಟು ಮಾತ್ರವಲ್ಲದೆ 3 ತಿಂಗಳವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಸೌಲಭ್ಯ ಸಹ ಲಭ್ಯ.

ರಿಲಯನ್ಸ್ ಜಿಯೋ 399ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್: ಈ ರೀಚಾರ್ಜ್‌ ಪ್ಲ್ಯಾನ್ 28 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ಇದರಲ್ಲಿ ನೀವು ದಿನವೂ 3GB 4G ಡೇಟಾ ಹಾಗೂ ಅನಿಯಮಿತ 5G ಡೇಟಾ ಜೊತೆಗೆ ದಿನವೂ 100 ಎಸ್‌ಎನ್‌ಎಸ್‌ ಸೌಲಭ್ಯ ಪಡೆದುಕೊಳ್ಳಬಹುದು. ಇದರೊಂದಿಗೆ ಹೆಚ್ಚುವರಿಯಾಗಿ 6GB ಡೇಟಾವನ್ನೂ ಪಡೆದುಕೊಳ್ಳುವ ಅವಕಾಶ ನೀಡಲಾಗಿದ್ದು, ನಿಮ್ಮ ಐಪಿಎಲ್‌ ವೀಕ್ಷಣೆ ಸಮಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.

IPL 2023: ಮ್ಯಾಚ್‌ ವೀಕ್ಷಿಸಲು ಯಾವೆಲ್ಲಾ ಪ್ಲ್ಯಾನ್‌ನಲ್ಲಿ ಹೆಚ್ಚಿನ ಡೇಟಾ ಲಭ್ಯ?

ವಿ ಟೆಲಿಕಾಂ ನ 359ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌: ಈ ವಿಶೇಷ ರೀಚಾರ್ಜ್‌ ಪ್ಲ್ಯಾನ್‌ 28 ದಿನಗಳ ಮಾನ್ಯತೆ ಹೊಂದಿದ್ದು, ನಿತ್ಯವೂ 3GB ಡೇಟಾ ಜೊತೆಗೆ ಹೆಚ್ಚುವರಿ 2GB ಡೇಟಾ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಬಳಕೆದಾರರು 12AM ನಿಂದ 6AM ವರೆಗೆ ಅನಿಯಮಿತ ಡೇಟಾವನ್ನು ಸಹ ಪಡೆದುಕೊಳ್ಳಬಹುದು. ಇನ್ನು ಹೆಚ್ಚುವರಿಯಾಗಿ ಪ್ರಿಪೇಯ್ಡ್ ಪ್ಲ್ಯಾನ್‌ ವಾರಾಂತ್ಯದ ಡೇಟಾ ರೋಲ್‌ಓವರ್ ಸೌಲಭ್ಯ ಸಹ ನೀಡಿದೆ. ಜೊತೆಗೆ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ.

ವಿ ಟೆಲಿಕಾಂ ನ 409ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌: ಈ ಪ್ಲ್ಯಾನ್ 28 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ಅನಿಯಮಿತ ಕರೆ ಸೌಲಭ್ಯದೊಂದಿಗೆ ದಿನವೂ 3.5GB ಡೇಟಾ ಮತ್ತು ಹೆಚ್ಚುವರಿ 2GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಈ ಪ್ಲ್ಯಾನ್‌ನಲ್ಲೂ ಸಹ ಬಳಕೆದಾರರು 12AM ನಿಂದ 6AM ವರೆಗೆ ಅನಿಯಮಿತ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದು. ಇದರೊಂದಿಗೆ ವಾರಾಂತ್ಯದ ಡೇಟಾ ರೋಲ್‌ಓವರ್ ಸೌಲಭ್ಯ ಹಾಗೂ ದಿನಕ್ಕೆ 100 ಎಸ್‌ಎಮ್‌ಎಸ್ ಸೌಲಭ್ಯ ಲಭ್ಯ.

ವಿ ಟೆಲಿಕಾಂ ನ 475ರೂ. ಗಳ ಪ್ಲ್ಯಾನ್‌: ವಿ ಟೆಲಿಕಾಂನ ಈ ಮತ್ತೊಂದು ಪ್ಲ್ಯಾನ್‌ 28 ದಿನಗಳ ಮಾನ್ಯತೆ ಹೊಂದಿದ್ದು, ನಿತ್ಯವೂ 4GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ 2GB ಹೆಚ್ಚುವರಿ ಡೇಟಾ ಸೌಲಭ್ಯ ಸಹ ಲಭ್ಯ. ಹಾಗೆಯೇ ನಿತ್ಯವೂ 100 ಎಸ್‌ಎಮ್‌ಎಸ್‌ ಹಾಗೂ ವಾರಾಂತ್ಯದ ಡೇಟಾ ರೋಲ್‌ಓವರ್ ಸೌಲಭ್ಯ ಮತ್ತು ರಾತ್ರಿಯಲ್ಲಿ ಅನಿಯಮಿತ ಡೇಟಾದಂತಹ ಹೆಚ್ಚುವರಿ ಪ್ರಯೋಜನಗಳನ್ನು ಈ ಪ್ಯಾಕ್ ಪಡೆದುಕೊಂಡಿದೆ.

ಏರ್‌ಟೆಲ್ 699ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌: ಈ ಪ್ಲ್ಯಾನ್‌ನಲ್ಲಿ ಬಳಕೆದಾರರು 56 ದಿನಗಳ ಮಾನ್ಯತೆಯೊಂದಿಗೆ ನಿತ್ಯವೂ 3GB ದೈನಂದಿನ ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಪಡೆದುಕೊಳ್ಳಬಹುದು. ಅದರಲ್ಲೂ 5G ಡೇಟಾ ಸಹ ಈ ಪ್ಲ್ಯಾನ್‌ನಲ್ಲಿ ಲಭ್ಯ ಇರಲಿದೆ. ಇನ್ನು ಈ ವಿಶೇಷ ಪ್ಲ್ಯಾನ್‌ನಲ್ಲಿ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ.

IPL 2023: ಮ್ಯಾಚ್‌ ವೀಕ್ಷಿಸಲು ಯಾವೆಲ್ಲಾ ಪ್ಲ್ಯಾನ್‌ನಲ್ಲಿ ಹೆಚ್ಚಿನ ಡೇಟಾ ಲಭ್ಯ?

ವಿ ಟೆಲಿಕಾಂ ನ 699ರೂ.ಗಳ ಪ್ಲ್ಯಾನ್‌: ಈ ಪ್ಲ್ಯಾನ್‌ ಏರ್‌ಟೆಲ್‌ ಪ್ಲ್ಯಾನ್‌ಗೆ ಪೈಪೋಟಿ ನೀಡಲಿದ್ದು, ಇದೂ ಸಹ 56 ದಿನಗಳ ಮಾನ್ಯತೆ ಹೊಂದಿದೆ. ಇದರಲ್ಲಿ ಬಳಕೆದಾರರು ನಿತ್ಯವೂ ಅನಿಯಮಿತ ಕರೆ, 3GBಡೇಟಾ ಮತ್ತು ಹೆಚ್ಚುವರಿ 2GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದ್ದು,12AMನಿಂದ 6AMವರೆಗೆ ಅನಿಯಮಿತ ಡೇಟಾವನ್ನು ಆಯ್ಕೆ ಸಹ ಇರಲಿದೆ. ಇನ್ನು ಹೆಚ್ಚುವರಿಯಾಗಿ ವಾರಾಂತ್ಯದ ಡೇಟಾ ರೋಲ್‌ಓವರ್ ಸೌಲಭ್ಯ ಸಹ ಒದ್ದು, ದಿನಕ್ಕೆ 100ಎಸ್‌ಎಮ್‌ಎಸ್‌ ಅನ್ನು ಬಳಕೆ ಮಾಡಿಕೊಳ್ಳಬಹುದು.

ಜಿಯೋ 999ರೂ. ಗಳ ಪ್ಲ್ಯಾನ್‌: ಈ ಪ್ಲ್ಯಾನ್ 84 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ಇದರಲ್ಲಿ ಬಳಕೆದಾರರು ನಿತ್ಯವೂ 3GB ದೈನಂದಿನ ಡೇಟಾ ಜೊತೆಗೆ 40GB ಹೆಚ್ಚುವರಿ ಡೇಟಾ ಆಯ್ಕೆ ಪಡೆದುಕೊಳ್ಳಬಹುದು. ಇದಲ್ಲದೆ ಅನಿಯಮಿತ 5G ಡೇಟಾ ಸೌಲಭ್ಯ ಸಹ ಇದ್ದು, ದಿನಕ್ಕೆ 100 ಎಸ್‌ಎಮ್‌ಎಸ್‌ ಸೌಲಭ್ಯ ಹಾಗೂ ಅನಿಯಮಿತ ಕರೆ ಜೊತೆಗೆ ಜಿಯೋ ಅಪ್ಲಿಕೇಶನ್‌ಗಳು ಮತ್ತು ಇತರೆ ಸೇವೆಗಳಿಗೆ ಉಚಿತ ಎಂಟ್ರಿ ನೀಡಲಿದೆ.

Best Mobiles in India

English summary
To watch the IPL 2023 matches, you can recharge leading prepaid plans from Airtel, Vodafone-Idea and Reliance Jio with 3GB or more daily data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+