IPL 2023: ನಿಮ್ಮ ಮನೆಯ ಸ್ಮಾರ್ಟ್‌ಟಿವಿಯಲ್ಲಿ ಈ ಬದಲಾವಣೆ ಮಾಡಿ, ಆಮೇಲೆ ನೋಡಿ 'ಆಟ'!
ಐಪಿಲ್ ಎನ್ನುವುದು ಬಹುಪಾಲು ಮಂದಿಗೆ ಹಬ್ಬದ ಸಂಭ್ರಮ. ಈ ಸಂಭ್ರಮವನ್ನು ನಿಮ್ಮ ಸ್ಮಾರ್ಟ್‌ಟಿವಿ ಮೂಲಕ ಇನ್ನಷ್ಟು ಹೆಚ್ಚಿಗೆ ಮಾಡಿಕೊಳ್ಳಬಹುದು. ಯಾಕೆಂದರೆ ಈ ಬಾರಿಯ ಐಪಿಎಲ್ ಅನ್ನು ಈ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡು ಇನ್ನಷ್ಟು ರಮಣೀಯವಾಗಿಸಿಕೊಳ್ಳಬಹುದಾಗಿದೆ.
ಹೌದು, ಐಪಿಎಲ್ ಬಂದ್ರೆ ಸಾಕು ಮನೆಯಲ್ಲಿನ ಟಿವಿಯಲ್ಲಿ ಧಾರವಾಹಿ, ಸಿನಿಮಾಗಳಿಗೆಲ್ಲ ಫುಲ್‌ಸ್ಟಾಪ್ ಇಡಲಾಗುತ್ತದೆ. ಅಷ್ಟರಮಟ್ಟಿಗೆ ಭಾರತದಲ್ಲಿ ಕ್ರೇಜ್ ಇದೆ. ಹೀಗಾಗಿ ನೀವು ನಿಮ್ಮ ಸ್ಮಾರ್ಟ್‌ಟಿವಿಯಲ್ಲಿ ಐಪಿಎಲ್‌ವೀಕ್ಷಣೆ ಮಾಡುವಾಗ ಟಿವಿಯಲ್ಲಿನ ಕೆಲವು ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡುವ ಮೂಲಕ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ನಿಮ್ಮ ಮನೆಯ ಟಿವಿಯಲ್ಲಿ ನೀವು ಮಾಡಬೇಕಿರುವುದು ಏನು?.ಇದರಿಂದ ವಿಶೇಷ ಐಪಿಎಲ್ ಮ್ಯಾಚ್ ವೀಕ್ಷಣೆ ಮಾಡುವುದು ಹೇಗೆ ಎಂಬ ವಿವರವನ್ನು ನಾವಿಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

ಟಾಟಾ ಐಪಿಎಲ್ 2023 ರ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಐಪಿಎಲ್ ಅಭಿಮಾನಿಗಳಿಗೆ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು ಉತ್ಪನ್ನ ಫೀಚರ್ಸ್‌ಗಳ ಶ್ರೇಣಿಯನ್ನು ಪ್ರಕಟಿಸಿದೆ. ಏರ್‌ಟೆಲ್ ಡಿಜಿಟಲ್ ಟಿವಿ ಮತ್ತು ಟಾಟಾ ಪ್ಲೇ ಸಹಭಾಗಿತ್ವದಲ್ಲಿ ಹೊಸ ಕಮ್ಯೂನಿಕೇಶನ್ ಸೇವೆಗಳ ಜೊತೆಗೆ 5.1.2 ಚಾನೆಲ್ ಡಾಲ್ಬಿ ಎಟಿಎಂಒಎಸ್ ಅನುಭವವನ್ನು ತರಲು ಬ್ರಾಡ್‌ಕಾಸ್ಟರ್ ಡಾಲ್ಬಿಯೊಂದಿಗೆ ಪಾಲುದಾರಿಕೆ ಹೊಂದಿದೆ.
ಡಾಲ್ಬಿ ಅಟ್ಮಾಸ್ ಬೆಂಬಲ: ಐಪಿಎಲ್ 2023 ಡಾಲ್ಬಿ ಅಟ್ಮಾಸ್ ಮೂಲಕ ಸ್ಟಾರ್ ಸ್ಪೋರ್ಟ್ ಹೆಚ್‌ಡಿಯಲ್ಲಿ ಪ್ರಸಾರವಾಗಲಿದ್ದು, ಈ ಮೂಲಕ ಬಳಕೆದಾರರು ಸಂಪೂರ್ಣ 5.1.2 ಸರೌಂಡ್ ಸೌಂಡ್‌ನಲ್ಲಿ ಎಲ್ಲಾ ಮ್ಯಾಚ್ ವೀಕ್ಷಣೆ ಮಾಡಬಹುದಾಗಿದೆ. ಹೀಗಾಗಿ ಸಿನಿಮಾವನ್ನು ಮೀರಿಸುವ ರೀತಿಯಲ್ಲಿ ಹೊಸ ವೀಕ್ಷಣೆ ಅನುಭವ ಲಭ್ಯವಾಗಲಿದೆ.
ಇಂಟರಾಕ್ಟಿವ್ ಬಟನ್‌ಗಳು: ನಿಮ್ಮ ಡಿಟಿಹೆಚ್ ರಿಮೋಟ್‌ಗಳಲ್ಲಿ ಮೀಸಲಾದ ಬಟನ್ ಸೇವೆಯು ಬಳಕೆದಾರರಿಗೆ ನೈಜ-ಸಮಯದ ಮುಖ್ಯಾಂಶಗಳು, ಪಂದ್ಯದ ಪ್ರಮುಖ ಕ್ಷಣಗಳು ಮತ್ತು ನೈಜ-ಸಮಯದ ಅಂಕಿ ಅಂಶಗಳಿಗಾಗಿ ಸ್ಟೇಟಸ್ ಫೀಡ್ ಮೂಲಕ ವೀಕ್ಷಕರಿಗೆ ಅನುವು ಮಾಡಿಕೊಡಲಾಗಿದೆ. ಇದರಿಂದಾಗಿ ಕ್ಷಣಕ್ಷಣದ ಮಾಹಿತಿಯನ್ನು ಒಂದೇ ಕ್ಲಿಕ್‌ನಲ್ಲಿ ಪಡೆದುಕೊಳ್ಳಬಹುದು.

ಆಂಬಿಯನ್ಸ್ ಓನ್ಲಿ ಫೀಡ್ : ಉತ್ತಮ ವೀಕ್ಷಣೆಯ ಅನುಭವಕ್ಕಾಗಿ ನೀವು ಆಂಬಿಯನ್ಸ್ ಓನ್ಲಿ ಫೀಡ್ ಸೌಲಭ್ಯ ಬಳಕೆ ಮಾಡಿಕೊಳ್ಳಬಹುದು. ಇದರಿಂದಾಗಿ ಕಾಮೆಂಟರಿಯನ್ನು ಸಂಪೂರ್ಣವಾಗಿ ಆಫ್ ಮಾಡಿ ನೈಜ ಸೌಂಡ್ ಅನ್ನು ಆಲಿಸಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ರಿಮೋಟ್‌ನ ಬ್ಲೂ ಬಟನ್ ಅನ್ನು ಬಳಕೆ ಮಾಡಿಕೊಳ್ಳಿ.
ಉಪಶೀರ್ಷಿಕೆ ಆಯ್ಕೆ: ಈ ಫೀಚರ್ಸ್ ವೀಕ್ಷಕರಿಗೆ ಲೈವ್ ಮ್ಯಾಚ್ ಕಾಮೆಂಟರಿಗಾಗಿ ಉಪಶೀರ್ಷಿಕೆಗಳನ್ನು ನೀಡಲಿದೆ. ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೊರಾಂಗಣಗಳಂತಹ ಗದ್ದಲದ ವಾತಾವರಣದಲ್ಲಿ ಪಂದ್ಯವನ್ನು ವೀಕ್ಷಣೆ ಮಾಡುವಾಗ ಈ ಉಪಶೀರ್ಷಿಕೆಯಿಂದ ಯಾವುದೇ ಮಾಹಿತಿಯನ್ನು ಮಿಸ್ ಮಾಡಿಕೊಳ್ಳದೆ ಮ್ಯಾಚ್ ವೀಕ್ಷಣೆ ಮಾಡಬಹುದು.
ಕ್ಸೀಬ್ರಾ ಕ್ವಾಡ್ ರಿಪ್ಲೇ: ಕ್ವಾಡ್ ರಿಪ್ಲೇ ಟೂಲ್ಸ್ ಬಳಕೆ ಮಾಡಿಕೊಂಡು ವೀಕ್ಷಕರು ವಿವಿಧ ಕೋನಗಳ ಮೂಲಕ ಏಕಕಾಲದಲ್ಲಿ ಪ್ರಮುಖ ಕ್ಷಣಗಳನ್ನು ವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಉತ್ಕೃಷ್ಟ ವೀಕ್ಷಣೆಯ ಅನುಭವವನ್ನು ಈ ಮೂಲಕ ಪಡೆದುಕೊಳ್ಳಲು ಈ ಕ್ಸೀಬ್ರಾ ಕ್ವಾಡ್ ರಿಪ್ಲೇ ಸೌಲಭ್ಯ ಅನುವು ಮಾಡಿಕೊಡುತ್ತದೆ.
VR ಕ್ರಿಕೆಟ್ ಗೇಮ್: ನೈಜ-ಸಮಯದ ಎಂಜಿನ್ ರೆಂಡರಿಂಗ್‌ನೊಂದಿಗೆ VR ಕ್ರಿಕೆಟ್ ಗೇಮ್ ಸೌಲಭ್ಯವನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದ್ದು, ಇದರಿಂದ ಮಿಶ್ರ ರಿಯಾಲಿಟಿ ಔಟ್‌ಪುಟ್, ಪ್ರಸಾರ ರೀತಿಯ ಔಟ್‌ಪುಟ್ ಹಾಗೂ ಆಟದ ಉತ್ತಮ ವಿಶ್ಲೇಷಣೆಯಲ್ಲಿ ಇನ್ನಷ್ಟು ಅತ್ಯುತ್ತಮ ಅನುಭವ ಪಡೆಯುವ ಉದ್ದೇಶದಿಂದ ಸ್ಥಿರವಾದ POV ಔಟ್‌ಪುಟ್ ಸೌಲಭ್ಯವನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.

3D ಕಟೌಟ್‌ಗಳು: ಯಾವುದೇ ಗೇಮ್‌ನಲ್ಲಿ 3D ಕಟೌಟ್‌ಗಳು ಟಿವಿ ವೀಕ್ಷಣೆಯನ್ನು ಮತ್ತಷ್ಟು ಮೆರಗುಗೊಳಿಸುತ್ತವೆ. ಅದರಂತೆ ವೀಕ್ಷಕರು ಮ್ಯಾಚ್‌ನ ವಿಶ್ಲೇಷಣೆಗಾಗಿ 3D ಪ್ಲೇಯರ್ ಕಟ್ ಔಟ್‌ಗಳೊಂದಿಗೆ ಉತ್ತಮ ವೀಕ್ಷಣೆಯ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ರನ್‌ಗಳ ವಿವರ, ಆಟಗಾರನ ಮಾಹಿತಿ ಹಾಗೂ ಇನ್ನಿತರೆ ವಿವರವನ್ನು ಸುಲಭವಾಗಿ ಪಡೆದುಕೊಳ್ಳಬಹುದು.


Click it and Unblock the Notifications








