Home
ಸುದ್ದಿಜಾಲ

IPL ಮ್ಯಾಚ್‌ ವೀಕ್ಷಿಸುವಾಗ ಡೇಟಾ ಖಾಲಿಯಾಗುತ್ತಾ? ಹಾಗಿದ್ರೆ ಈ ರೀಚಾರ್ಜ್‌ ಪ್ಲ್ಯಾನ್‌ ಬೆಸ್ಟ್‌!

ಐಪಿಎಲ್‌ 2023 ರ ಸಂಭ್ರಮ ಭಾರತದಲ್ಲಿ ಮನೆ ಮಾಡಿದ್ದು, ಈ ಮೂಲಕ ತಮ್ಮ ನೆಚ್ಚಿನ ಮ್ಯಾಚ್‌ ನೋಡಲು ಬಹುಮಂದಿ ಕ್ಷಣಕ್ಷಣಕ್ಕೂ ಕಾತುರದಲ್ಲೇ ಇರುತ್ತಾರೆ. ಈ ನಡುವೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಥವಾ ಫೋನ್‌ನಲ್ಲಿನ ಇಂಟರ್ನೆಟ್‌ ಬಳಕೆ ಮಾಡಿಕೊಂಡು ಸ್ಮಾರ್ಟ್‌ಟಿವಿಯಲ್ಲಿ ಮ್ಯಾಚ್‌ ನೋಡುತ್ತಿದ್ದರೆ ಈ ರೀಚಾರ್ಜ್‌ ಪ್ಲ್ಯಾನ್‌ಗಳು ಬೆಸ್ಟ್‌.

ಹೌದು, ಪ್ರಮುಖ ಟೆಲಿಕಾಂ ಸಂಸ್ಥೆಯಾಗಿರುವ ಏರ್‌ಟೆಲ್‌ ಈಗಾಗಲೇ ವಿವಿಧ ರಿಚಾರ್ಜ್‌ ಪ್ಲ್ಯಾನ್‌ ಘೋಷಣೆ ಮಾಡಿದೆ. ಅದರಲ್ಲೂ ಕೆಲವು ಪ್ಲ್ಯಾನ್‌ಗಳ ದರದಲ್ಲಿ ಹೆಚ್ಚಳ ಮಾಡಿದರೆ, ಇನ್ನೂ ಕೆಲವು ಪ್ಲ್ಯಾನ್‌ಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿದೆ. ಅದರಂತೆ ಈ ಐಪಿಎಲ್‌ ಮ್ಯಾಚ್‌ ಅನ್ನು ವೀಕ್ಷಣೆ ಮಾಡಲು ಯಾವೆಲ್ಲಾ ಪ್ಲ್ಯಾನ್‌ಗಳು ಉತ್ತಮ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

IPL ಮ್ಯಾಚ್‌ ವೀಕ್ಷಿಸುವಾಗ ಡೇಟಾ ಖಾಲಿಯಾಗುತ್ತಾ?ಈ ರೀಚಾರ್ಜ್‌ ಪ್ಲ್ಯಾನ್‌ ಬೆಸ್ಟ್

ಏರ್‌ಟೆಲ್ 19ರೂ. ಗಳ ಡೇಟಾ ಪ್ಯಾಕ್: ಬಳಕೆ ಮಾಡುತ್ತಿದ್ದ ಡೇಟಾ ಮುಗಿದುಹೋದರೆ ತಕ್ಷಣಕ್ಕೆ ಮ್ಯಾಚ್‌ ವೀಕ್ಷಣೆ ಮಾಡಲು ನೀವು 19ರೂ.ಗಳ ರೀಚಾರ್ಜ್‌ ಪ್ಲ್ಯಾನ್‌ ಆಯ್ಕೆ ಮಾಡಿಕೊಳ್ಳಬಹುದು. ಯಾಕೆಂದರೆ ಈ ಪ್ಲ್ಯಾನ್‌ನಲ್ಲಿ ನಿಮಗೆ 1GB ಡೇಟಾ ಪ್ಯಾಕ್‌ ಲಭ್ಯವಾಗಲಿದ್ದು, ಇದು ಹೈ-ಸ್ಪೀಡ್ ಸೇವೆಯನ್ನು ಅನ್ನು ನೀಡುತ್ತದೆ. ಇದರ ಮಾನ್ಯತೆ ಒಂದು ದಿನವಾಗಿದ್ದು, ಯಾವುದೇ ತುರ್ತು ಮತ್ತು ಅನಿರೀಕ್ಷಿತ ಸಂದರ್ಭದಲ್ಲಿ ಈ ಪ್ಯಾಕ್‌ ಸೂಕ್ತವಾಗಿದೆ.

ಏರ್‌ಟೆಲ್ 181ರೂ. ಗಳ ಡೇಟಾ ಪ್ಯಾಕ್: ಏರ್‌ಟೆಲ್‌ನ ಮತ್ತೊಂದು ರೀಚಾರ್ಜ್‌ ಪ್ಲ್ಯಾನ್‌ ಎಂದರೆ 181ರೂ. ಗಳ ಪ್ಲ್ಯಾನ್‌. ಇದರಲ್ಲಿ ಗ್ರಾಹಕರು ಪ್ರತಿದಿನ 1GB ಹೈ ಸ್ಪೀಡ್ ಡೇಟಾವನ್ನು ಪಡೆದುಕೊಳ್ಳಬಹುದಾಗಿದ್ದು, ಈ ಮೂಲಕ ಯಾವುದೇ ಸಮಸ್ಯೆ ಇಲ್ಲದೆ ಮ್ಯಾಚ್‌ ವೀಕ್ಷಣೆ ಮಾಡಬಹುದಾಗಿದೆ. ಹಾಗೆಯೇ ಇದು 30 ದಿನಗಳವರೆಗೆ ಮಾನ್ಯತೆಯನ್ನು ಹೊಂದಿದೆ. ಅಂದರೆ ಈ ಪ್ಯಾಕ್‌ನಲ್ಲಿ ನಿಮಗೆ 30GB ಡೇಟಾ ಲಭ್ಯವಾಗುತ್ತದೆ.

ಏರ್‌ಟೆಲ್ 301ರೂ. ಗಳ ಡೇಟಾ ಪ್ಯಾಕ್: ಈ ಪ್ಲ್ಯಾನ್‌ನಲ್ಲಿ ಹೆಚ್ಚಿದ ಡೇಟಾ ಅಗತ್ಯಗಳನ್ನು ಪೂರೈಕೆ ಮಾಡಿಕೊಳ್ಳಬಹುದು. ಹಾಗೆಯೇ ಭಾರೀ ಸ್ಟ್ರೀಮಿಂಗ್ ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಇದು ಭಾರೀ ಅನುಕೂಲ. ಈ ಪ್ಯಾಕ್‌ ಮೂಲಕ 50GB ಹೈ ಸ್ಪೀಡ್ ಡೇಟಾ ಲಭ್ಯವಾಗಲಿದ್ದು, ಮೂಲ ಯೋಜನೆ ಎಲ್ಲಿಯವರೆಗೆ ಅಸ್ತಿತ್ವದಲ್ಲಿರುತ್ತದೋ ಅಲ್ಲಿಯವರೆಗಿನ ಮಾನ್ಯತೆಯನ್ನು ಇದು ಹೊಂದಿರಲಿದೆ. ಹಾಗೆಯೇ ಈ ಪ್ಯಾಕ್‌ನಲ್ಲಿ ಗ್ರಾಹಕರು 1 ವರ್ಷದವರೆಗೆ ವೈಂಕ್ ಮ್ಯೂಸಿಕ್ ಪ್ರೀಮಿಯಂ ಸೌಲಭ್ಯ ಪಡೆಯಬಹುದು.

IPL ಮ್ಯಾಚ್‌ ವೀಕ್ಷಿಸುವಾಗ ಡೇಟಾ ಖಾಲಿಯಾಗುತ್ತಾ?ಈ ರೀಚಾರ್ಜ್‌ ಪ್ಲ್ಯಾನ್‌ ಬೆಸ್ಟ್

ಗ್ರಾಹಕರೇ ಗಮನಿಸಿ: ಈ ಮೇಲೆ ತಿಳಿಸಲಾದ ಎಲ್ಲಾ ಪ್ಯಾಕ್‌ಗಳು ಹೆಚ್ಚುವರಿ ಸೌಲಭ್ಯ ನೀಡುವ ಪ್ಯಾಕ್‌ಗಳಾಗಿವೆ. ಅಂದರೆ, ಈ 19 ರೂ., 181ರೂ, ಮತ್ತು 301 ರೂ. ಗಳ ಪ್ಲ್ಯಾನ್‌ ಅನ್ನು ಹೆಚ್ಚಿನ ಡೇಟಾ ಬಳಕೆ ಮಾಡಲು ಉಪಯೋಗಿಸಿಕೊಳ್ಳಬಹುದಾಗಿದೆ. ಇವು ನಿಮ್ಮ ಅಸ್ತಿತ್ವದಲ್ಲಿರುವ ಮೂಲ ಯೋಜನೆಗಳ ಮೇಲೆ ಹೆಚ್ಚುವರಿ ಡೇಟಾವನ್ನು ನೀಡಲಿದ್ದು, ಇವುಗಳ ಮಾನ್ಯತೆ ಭಿನ್ನವಾಗಿದೆ.

ಅನಿಯಮಿತ 5G ಡೇಟಾ: ಮೇಲೆ ತಿಳಿಸಲಾದ ಎಲ್ಲಾ ಪ್ಲ್ಯಾನ್‌ಗಳು 4G ಪ್ಲ್ಯಾನ್‌ಗಳಾಗಿದ್ದು, ಈ ನಡುವೆ ಏರ್‌ಟೆಲ್ 5G ಪ್ಲಸ್ ಸೇವೆ ನೀಡುವ ಕೆಲಸದಲ್ಲೂ ತಲ್ಲೀನವಾಗಿದೆ. ಈಗಾಗಲೇ 500 ಕ್ಕೂ ಹೆಚ್ಚಿನ ನಗರಗಳಲ್ಲಿ ಈ ಸೇವೆ ಲಭ್ಯವಿದ್ದು, ನೀವೇನಾದರೂ 239 ರೂ. ಗಳಿಗಿಂತ ಹೆಚ್ಚಿನ ಮೌಲ್ಯದ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಆಯ್ದುಕೊಂಡರೆ ಇದರಲ್ಲಿ ನೀವು ಅನಿಯಮಿತ 5G ಡೇಟಾವನ್ನು ಪಡೆಯಬಹುದಾಗಿದೆ.

IPL ಮ್ಯಾಚ್‌ ವೀಕ್ಷಿಸುವಾಗ ಡೇಟಾ ಖಾಲಿಯಾಗುತ್ತಾ?ಈ ರೀಚಾರ್ಜ್‌ ಪ್ಲ್ಯಾನ್‌ ಬೆಸ್ಟ್

ಇನ್ನು 5G ಉದ್ದೇಶಕ್ಕಾಗಿಯೇ ಸದ್ಯಕ್ಕೆ ಯಾವುದೇ ವಿಶೇಷ ರೀಚಾರ್ಜ್‌ ಪ್ಲ್ಯಾನ್‌ ಇಲ್ಲ. ಈ ಮೂಲಕ ನಿಮ್ಮ ಪ್ರದೇಶದಲ್ಲಿ 5G ಲಭ್ಯವಿದ್ದರೆ ತಕ್ಷಣವೇ 4G ಯಿಂದ 5G ಗೆ ಬದಲಾಗುವ ಮೂಲಕ ವೇಗದ ಇಂಟರ್ನೆಟ್‌ ಸೇವೆಯನ್ನು ಪಡೆದುಕೊಳ್ಳಿ. ಇದರಿಂದ ಮ್ಯಾಚ್‌ ವೀಕ್ಷಣೆಯಲ್ಲಿ ಅತ್ಯುತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೆ ಮ್ಯಾಚ್‌ನ ಯಾವುದೇ ಅಮೂಲ್ಯ ಕ್ಷಣ ನಿಮ್ಮ ಕಣ್ಣುತಪ್ಪಿ ಹೋಗುವುದಿಲ್ಲ.

Best Mobiles in India

English summary
If you are looking for the best data plan to watch IPL 2023 matches, here are Airtel's flagship recharge plans. Get better streaming with these.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+