Home
ಸುದ್ದಿಜಾಲ

IPL Auction 2024: ಐಪಿಎಲ್‌ ಹರಾಜಿಗೆ ಒಂದೇ ದಿನ ಬಾಕಿ, ಲೈವ್ ವೀಕ್ಷಣೆ ಹೇಗೆ?

ವಿಶ್ವದ ಅತಿದೊಡ್ಡ ಫ್ರಾಂಚೈಸಿ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಹರಾಜು ನಾಳೆ ಅಂದರೆ ಮಂಗಳವಾರ ದುಬೈನ ಕೋಕಾ ಕೋಲಾ ಅರೆನಾದಲ್ಲಿ ನಡೆಯಲಿದ್ದು, ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ಉಳಿಸಿಕೊಂಡಿದ್ದು, ಇತರರನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕ್ರೀಡಾ ಪ್ರೇಮಿಗಳಲ್ಲಿ ಹೆಚ್ಚಿನ ಕಾತುರ ಉಂಟಾಗಿದೆ.

ಹೌದು, 2024 ರ ಐಪಿಎಲ್ ಹರಾಜಿಗಾಗಿ ಆಟಗಾರರ ನೋಂದಣಿ ಪ್ರಕ್ರಿಯೆಯು 30 ನವೆಂಬರ್ 2023 ರಂದು ಕೊನೆಯಾಗಿದ್ದು, ಈ ವೇಳೆ ಒಟ್ಟಾರೆ 333 ಕ್ರಿಕೆಟಿಗರು ಹರಾಜಿನ ಅಂತಿಮ ಲಿಸ್ಟ್‌ಗೆ ತಲುಪಿದ್ದಾರೆ. ಒಟ್ಟಾರೆ 333 ಆಟಗಾರರಲ್ಲಿ 214 ಭಾರತೀಯರು, 119 ವಿದೇಶಿ ಆಟಗಾರರು ಮತ್ತು ಇಬ್ಬರು ಅಸೋಸಿಯೇಟ್ ದೇಶದ ಆಟಗಾರರು ಇದ್ದಾರೆ. ಹಾಗಿದ್ರೆ. ಬನ್ನಿ ಈ ಹರಾಜು ನಡೆಯುವ ಸಮಯ, ಸ್ಥಳ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳನ್ನು ಗಮನಿಸೋಣ.

IPL Auction 2024: ಐಪಿಎಲ್‌ ಹರಾಜಿಗೆ ಒಂದೇ ದಿನ ಬಾಕಿ, ಲೈವ್ ವೀಕ್ಷಣೆ ಹೇಗೆ?

IPL ಹರಾಜು 2024 : ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್ ಮತ್ತು ಲಾಕಿ ಫರ್ಗುಸನ್ ಸೇರಿದಂತೆ 23 ಆಟಗಾರರಿಗೆ ಈಗಾಗಲೇ ಗರಿಷ್ಠ 2 ಕೋಟಿ ರೂ. ನಿಗದಿ ಮಾಡಲಾಗಿದೆ. ಈ ನಡುವೆ 77 ಸ್ಲಾಟ್ ಮಾತ್ರ ಲಭ್ಯ ಇದ್ದು, ಈ ಮೂಲಕ ಬರೋಬ್ಬರಿ 256 ಆಟಗಾರರು ಅವಕಾಶ ವಂಚಿತರಾಗಲಿದ್ದಾರೆ. ಇನ್ನು ಶಾರುಖ್ ಖಾನ್ ಒಡೆತನದ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ಹೆಚ್ಚಿನ ಖಾಲಿ ಸ್ಲಾಟ್‌ಗಳನ್ನು ಹೊಂದಿದ್ದು, ಯಾವುದೇ ತಂಡವು ಟೂರ್ನಮೆಂಟ್‌ಗಾಗಿ ತಮ್ಮ ತಂಡದಲ್ಲಿ 25 ಕ್ಕಿಂತ ಹೆಚ್ಚು ಆಟಗಾರರನ್ನು ಹೊಂದಲು ಅನುಮತಿಸುವುದಿಲ್ಲ.

ಗುಜರಾತ್ ಟೈಟಾನ್ಸ್ ನಲ್ಲಿನ 8 ಸ್ಲಾಟ್‌ಗಳಲ್ಲಿ ಇಬ್ಬರು ವಿದೇಶಿ ಆಟಗಾರರು, ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ 6 ಸ್ಲಾಟ್‌ಗಳಿದ್ದು, ಮೂವರು ವಿದೇಶಿಗರಿಗೆ ಲಭ್ಯ ಇವೆ. ಕೋಲ್ಕತ್ತಾ ನೈಟ್ ರೈಡರ್ಸ್ ನಲ್ಲಿ 4 ಸಾಗರೋತ್ತರ ಸ್ಲಾಟ್‌ಗಳು ಸೇರಿದಂತೆ 12 ಸ್ಲಾಟ್‌ಗಳು, ಚೆನ್ನೈ ಸೂಪರ್ ಕಿಂಗ್ಸ್‌ಗೆ ಸ್ಲಾಟ್‌ಗಳು 6 ಇದ್ದು, ಇದರಲ್ಲಿ 3 ಸಾಗರೋತ್ತರ ಸ್ಲಾಟ್‌ಗಳು ಖಾಲಿ ಇವೆ.

IPL Auction 2024: ಐಪಿಎಲ್‌ ಹರಾಜಿಗೆ ಒಂದೇ ದಿನ ಬಾಕಿ, ಲೈವ್ ವೀಕ್ಷಣೆ ಹೇಗೆ?

ಜೊತೆಗೆ ಪಂಜಾಬ್ ಕಿಂಗ್ಸ್ ಬಳಿ 8 ಸ್ಲಾಟ್‌‌ ಇವೆ. ದೆಹಲಿ ಕ್ಯಾಪಿಟಲ್ಸ್ ನಲ್ಲಿ 4 ಸಾಗರೋತ್ತರ ಸ್ಲಾಟ್‌ ಸೇರಿದಂತೆ 9 ಸ್ಲಾಟ್‌ಗಳು, ಆರ್‌ಸಿಬಿ ಬಳಿ 6 ಸ್ಲಾಟ್‌ಗಳು ಅದರಲ್ಲಿ 3 ಸಾಗರೋತ್ತರ ಸ್ಲಾಟ್‌ಗಳು, ಮುಂಬೈ ಇಂಡಿಯನ್ಸ್ ನಲ್ಲಿ 8, ರಾಜಸ್ಥಾನ್ ರಾಯಲ್ಸ್ 8 , ಲಕ್ನೋ ಸೂಪರ್ ಜೈಂಟ್ಸ್ನಲ್ಲಿ 6 ಗಳು ಖಾಲಿ ಇವೆ.

ಲೈವ್‌ ವೀಕ್ಷಣೆ ಹೇಗೆ?: ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು 2024 ಡಿಸೆಂಬರ್ 19 ರಂದು ಅಂದರೆ ಮಂಗಳವಾರ ನಡೆಯಲಿದ್ದು, ಇದನ್ನು ಭಾರತದಲ್ಲಿ ಜಿಯೋ ಸಿನಿಮಾ ಆಪ್‌ ಮೂಲಕ ಮತ್ತು ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ ನೀವು ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 2 HD, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1 HD, ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 HD, ಸ್ಟಾರ್ ಸ್ಪೋರ್ಟ್ಸ್ 3 ನಲ್ಲಿ ವೀಕ್ಷಣೆ ಮಾಡಬಹುದು.

IPL Auction 2024: ಐಪಿಎಲ್‌ ಹರಾಜಿಗೆ ಒಂದೇ ದಿನ ಬಾಕಿ, ಲೈವ್ ವೀಕ್ಷಣೆ ಹೇಗೆ?

ಈ ನಡುವೆ ಜಿಯೋ ಸಿನಿಮಾ IPL ಹರಾಜು 2024 ಅನ್ನು 1 PM IST ರಿಂದ ಲೈವ್‌ಸ್ಟ್ರೀಮ್ ಮಾಡಲಿದ್ದು, ಹಾಗೆಯೇ ಜಿಯೋ ಸಿನಿಮಾ ಈ ಲೀಗ್‌ನ ಮಾಹಿತಿಯನ್ನು ಬಹು ಭಾಷೆಯಲ್ಲಿ ತರಲು ಮುಂದಾಗಿದೆ. ಅಂದರೆ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಪಂಜಾಬಿ ಮತ್ತು ಭೋಜ್‌ಪುರಿ ಭಾಷೆಯಲ್ಲಿ ಪ್ರಸಾರ ಮಾಡಲಿದೆ. ಈ ನಡುವೆ ಎಬಿ ಡಿವಿಲಿಯರ್ಸ್, ಇಯಾನ್ ಮೋರ್ಗಾನ್, ಸುರೇಶ್ ರೈನಾ, ಅನಿಲ್ ಕುಂಬ್ಳೆ, ಹನುಮ ವಿಹಾರಿ, ಅಭಿನವ್ ಮುಕುಂದ್, ವೇದಾ ಕೃಷ್ಣಮೂರ್ತಿ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಭಾಗಿಯಾಗಿರಲಿದ್ದಾರೆ.

IPL Auction 2024: ಐಪಿಎಲ್‌ ಹರಾಜಿಗೆ ಒಂದೇ ದಿನ ಬಾಕಿ, ಲೈವ್ ವೀಕ್ಷಣೆ ಹೇಗೆ?

ಈ ಹರಾಜು ಪ್ರಕ್ರಿಯೆ ಐಪಿಎಲ್ ಇತಿಹಾಸದಲ್ಲೇ ಭಾರತದ ಹೊರಗೆ ನಡೆಯುವ ಮೊದಲ ಕಾರ್ಯಕ್ರಮ ಎಂದು ಹೆಸರು ಪಡೆದಿದೆ. ಅಂದರೆ ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಈ ಹಾರಾಜು ನಡೆಯಲಿದ್ದು, ದುಬೈ ಸಮಯದ ಪ್ರಕಾರ 11:30 AM ಕ್ಕೆ ಆರಂಭ ಆಗಲಿದೆ. ಆದರೆ, ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಶುರುವಾಗಲಿದೆ.

Best Mobiles in India

English summary
IPL Auction 2024 registatruon ended on 30 November 2023 and a total of 333 cricketers have reached the final list of the auction. Meanwhile, the IPL auction will be held at the Coca Cola Arena in Dubai tomorrow.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+