ಈ ದುಬಾರಿ ಬೆಲೆಯ ಫೋನಿಗೂ ಈಗ ಬಿಗ್ ಡಿಸ್ಕೌಂಟ್!..ಆಫರ್ ಇಲ್ಲಿ ತಿಳಿಯಿರಿ!
ಐಕ್ಯೂ ಮೊಬೈಲ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಹಲವು ಫೋನ್ ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಮೊಬೈಲ್ ಐಕ್ಯೂ 11 ಪ್ರೀಮಿಯಂ ಮಾದರಿಯ ವಿಭಾಗದಲ್ಲಿ ಗ್ರಾಹಕರನ್ನು ಸೆಳೆದಿದೆ. ಈಗ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಬೊಂಬಾಟ್ ರಿಯಾಯಿತಿ ದರದಲ್ಲಿ ಆಕರ್ಷಿಸಿದ್ದು, ಮತ್ತಷ್ಟು ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ.
ಹೌದು, ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ನಲ್ಲಿ ಐಕ್ಯೂ ಕ್ವೆಸ್ಟ್ ಸೇಲ್ ಇದ್ದು, ಇದರಲ್ಲಿ ಐಕ್ಯೂ ಮೊಬೈಲ್‌ಗಳು ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿವೆ. ಐಕ್ಯೂ 11 ಫೋನ್ 11% ರಿಯಾಯಿತಿ ಪಡೆದಿದೆ. 8 GB RAM + 256 GB ಸ್ಟೋರೇಜ್‌ನ ಈ ಫೋನ್ ಬೆಲೆ 61,999ರೂ. ಇದ್ದು, ಈಗ 54,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಸಹ ಸಿಗಲಿದೆ. ಹಾಗಾದರೇ ಐಕ್ಯೂ 11 ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ 11 ಫೋನ್ ಡಿಸ್‌ಪ್ಲೇ ರಚನೆ ಏನು : ಐಕ್ಯೂ 11 ಮೊಬೈಲ್ 6.78 ಇಂಚಿನ ಪಂಚ್-ಹೋಲ್ ಸ್ಯಾಮ್‌ಸಂಗ್ E6 ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 3200 x 1440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಅನ್ನು ಪಡೆದುಕೊಂಡಿದೆ. ಇದು 144Hz ರಿಫ್ರೆಶ್ ರೇಟ್, 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒದಗಿಸಲಿದೆ. ಇನ್ನು ಡಿಸ್‌ಪ್ಲೇ 517 PPI ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಜೊತೆಗೆ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಅನ್ನು ಪಡೆದಿದೆ.
ಐಕ್ಯೂ 11 ಫೋನ್ ಪ್ರೊಸೆಸರ್ ಯಾವುದು? ಐಕ್ಯೂ 11 ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್ ಅನ್ನು ಕಾರ್ಯ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಆಧಾರಿತ Funtouch OS 13 ಬಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್ 8 RAM ಮತ್ತು 256GB ಹಾಗೂ 16GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಆಯ್ಕೆ ಅನ್ನು ಪಡೆದುಕೊಂಡಿದೆ.
ಐಕ್ಯೂ 11 ಫೋನ್ ಕ್ಯಾಮೆರಾ ಸೆನ್ಸಾರ್ : ಐಕ್ಯೂ 11 ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ GN5 ಸೆನ್ಸಾರ್, ಸೆಕೆಂಡರಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 13 ಮೆಗಾಪಿಕ್ಸೆಲ್ 2x ಟೆಲಿಫೋಟೋ ಲೆನ್ಸ್ ಅನ್ನು ಪಡೆದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಎಲ್ಲಾ ಕ್ಯಾಮೆರಾಗಳು Vivo V2 ಇಮೇಜಿಂಗ್ ಚಿಪ್‌ನಿಂದ ರನ್ ಆಗಲಿವೆ.
ಐಕ್ಯೂ 11 ಫೋನ್ ಬ್ಯಾಟರಿ ಬ್ಯಾಕ್‌ಅಪ್ : ಐಕ್ಯೂ 11 ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದೆ. ಇದು 120W ವೇಗದ ವೈರ್ಡ್ ಚಾರ್ಜಿಂಗ್‌ಗೆ ಸಪೋರ್ಟ್ ಅನ್ನು ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5 ಜಿ, ವೈಫೈ 6, ಬ್ಲೂಟೂತ್ 5.3, ಜಿಎನ್ಎಸ್ಎಸ್, ಎನ್ಎಫ್ಸಿ ಮತ್ತು ಯುಎಸ್‌ಬಿ ಟೈಪ್-ಸಿಗೆ ಬೆಂಬಲವನ್ನು ನೀಡಲಿದೆ. ಇದು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಐಆರ್ ಸೆನ್ಸಾರ್ ಮತ್ತು ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಕೂಡ ಒಳಗೊಂಡಿದೆ.


Click it and Unblock the Notifications








