ಐಕ್ಯೂ 12 ಡೆಸರ್ಟ್ ರೆಡ್ ವೇರಿಯಂಟ್ ಖರೀದಿಗೆ ಲಭ್ಯ!..ಬಿಗ್ ಡಿಸ್ಕೌಂಟ್ ಸಿಗುತ್ತೆ!
ಮೊಬೈಲ್ ಮಾರುಕಟ್ಟೆಯಲ್ಲಿ ಐಕ್ಯೂ ಸಂಸ್ಥೆಯು ತನ್ನ ಕೆಲ ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ಇದೀಗ ಐಕ್ಯೂ ಸಂಸ್ಥೆಯು ಡೆಸರ್ಟ್ ರೆಡ್ ವಾರ್ಷಿಕೋತ್ಸವ ಆವೃತ್ತಿ (Desert Red Anniversary Edition) ಸೇಲ್ ಅನ್ನು ಪ್ರಾರಂಭಿಸಿದೆ. ಈ ಮಾರಾಟದಲ್ಲಿ ಸಂಸ್ಥೆಯ ಐಕ್ಯೂ 12 ಫೋನ್ ಭರ್ಜರಿ ರಿಯಾಯಿತಿ ಪಡೆದಿದೆ.
ಹೌದು, ಐಕ್ಯೂ ತಾಣದಲ್ಲಿ ಡೆಸರ್ಟ್ ರೆಡ್ ವಾರ್ಷಿಕೋತ್ಸವ ಆವೃತ್ತಿ ಮಾರಾಟ ಶುರುವಾಗಿದೆ. ಐಕ್ಯೂ 12 ಡೆಸರ್ಟ್ ರೆಡ್ ಆವೃತ್ತಿಯು ಇಂದು ಅಮೆಜಾನ್ ಹಾಗೂ ಐಕ್ಯೂ ವೆಬ್‌ಸೈಟ್‌ಗಳ ಮೂಲಕ ಖರೀದಿಗೆ ಲಭ್ಯ. ಈ ಫೋನ್ ಆಯ್ದ ಬ್ಯಾಂಕ್‌ಗಳಿಂದ 3000 ರೂ. ಗಳ ಡಿಸ್ಕೌಂಟ್ ಕೂಡಾ ಪಡೆದುಕೊಂಡಿದೆ.

ಐಕ್ಯೂ 12 ಫೋನ್ 12 GB + 256 GB ಸ್ಟೋರೇಜ್ ವೇರಿಯಂಟ್ ಡಿಸ್ಕೌಂಟ್ ಬೆಲೆಯು 52,999 ರೂ. ಗಳು ಆಗಿದೆ. ಹಾಗೆಯೇ 16 GB + 512 GB ವೇರಿಯಂಟ್ 57,999 ರೂ. ಗಳ ಬೆಲೆ ಪಡೆದಿದೆ.
ಇನ್ನು ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಕೂಡಾ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಹಾಗಾದರೇ ಐಕ್ಯೂ 12 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಕ್ಯೂ 12 ಸ್ಮಾರ್ಟ್‌ಫೋನ್ ಫೀಚರ್ಸ್
ಐಕ್ಯೂ 12 ಮೊಬೈಲ್ 6.78 ಇಂಚಿನ 1.5K LTPO OLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 2800 x 1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಪಡೆದಿದ್ದು, ಇದರ ಜೊತೆಗೆ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಹಾಗೆಯೇ 2160Hz PWM ಡಿಮ್ಮಿಂಗ್ ಅನ್ನು ಬೆಂಬಲಿಸಲಿದ್ದು, ಕಣ್ಣಿಗೆ ಸುರಕ್ಷತೆಯನ್ನು ನೀಡಲಿದೆ.
ಐಕ್ಯೂ 12 ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 SoC ನಲ್ಲಿ ಕೆಲಸ ನಿರ್ವಹಿಸಲಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಪಡೆದುಕೊಂಡಿದೆ. ಇನ್ನು ಗೇಮಿಂಗ್ ಅನುಭವ ಹೆಚ್ಚಿಸಲು ಮತ್ತು ಫ್ರೇಮ್ ದರಗಳನ್ನು ಆಪ್ಟಿಮೈಜ್ ಮಾಡಲು, ಮೀಸಲಾದ Q1 ಚಿಪ್‌ಸೆಟ್ ಅನ್ನು ಡಿವೈಸ್‌ನ ಆರ್ಕಿಟೆಕ್ಚರ್‌ಗೆ ಸಂಯೋಜಿಸಲಾಗಿದೆ. ಹಾಗೆಯೇ 16GB RAM ಮತ್ತು 512 GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ.
ಐಕ್ಯೂ 12 ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ, ದ್ವಿತೀಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಐಕ್ಯೂ 12 ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 120W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಇದಲ್ಲದೆ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಸ್ಟೀರಿಯೋ ಸ್ಪೀಕರ್‌ಗಳು ಮತ್ತು ಹೈ-ರೆಸ್ ಆಡಿಯೊಗೆ ಸಪೋರ್ಟ್ ಇದೆ.


Click it and Unblock the Notifications







