iQOO 12 ಫೋನ್ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್! ಈ ಸೌಲಭ್ಯ ಪಡೆದ ಮೊದಲ ಫೋನ್?
ಐಕ್ಯೂ ಫೋನ್‌ಗಳಿಗೆ (IQOO Phone) ಭಾರತದಲ್ಲಿ ಭಾರೀ ಬೇಡಿಕೆ ಇದೆ. ಈ ಫೋನ್‌ಗಳು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್ ಆಯ್ಕೆ ಪಡೆದುಕೊಳ್ಳಲಿದ್ದು, ಈ ನಡುವೆ ಭಾರತದಲ್ಲಿ ಶೀಘ್ರವೇ ಬಹುನಿರೀಕ್ಷಿಯ ವಿಶೇಷವಾದ ಸ್ಮಾರ್ಟ್‌ಫೋನ್ ಅನಾವರಣ ಆಗಲಿದೆ.
ಹೌದು, ಐಕ್ಯೂ ಕಂಪೆನಿ ಭಾರತದಲ್ಲಿ ಶೀಘ್ರವೇ ಐಕ್ಯೂ 12 (iQOO 12) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಾಗುತ್ತದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ (Snapdragon 8 Gen 3 chipset) ಅನ್ನು ಹೊಂದುವ ಮೂಲಕ ಮೊದಲ ಫೋನ್ ಆಗಿ ಗುರುತಿಸಿಕೊಳ್ಳಲಿದೆ. ಹಾಗಿದ್ರೆ ಲೀಕ್ ಆದ ಮಾಹಿತಿ ಪ್ರಕಾರ ಈ ಫೋನ್ ನಲ್ಲಿನ ವಿಶೇಷ ಫೀಚರ್ಸ್ ಏನು?, ಬೆಲೆ ಎಷ್ಟಿರಬಹುದು ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಐಕ್ಯೂ 12: ಈ ಹೊಸ ಫೋನ್ ಭಾರತದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಸಂಬಂಧ ಯಾವಾಗ ಲಾಂಚ್ ಆಗಲಿದೆ ಹಾಗೂ ಪ್ರಮುಖ ಫೀಚರ್ಸ್ ಏನು ಎಂದು ಆನ್‌ಲೈನ್‌ನಲ್ಲಿ ಪ್ರಮುಖ ಮಾಹಿತಿ ಸೋರಿಕೆಯಾಗಿವೆ. ಕಂಪನಿಯು ಮುಂದಿನ ಪೀಳಿಗೆಯ ಪ್ರಮುಖ ಐಕ್ಯೂ ಫೋನ್ ಅನ್ನು ಈ ವರ್ಷದ ಒಳಗೆ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂದು ಹೇಳಲಾಗುತ್ತದೆ.
ಐಕ್ಯೂ 12 ಸ್ಮಾರ್ಟ್‌ಫೋನ್ ನವೆಂಬರ್ ಅಂತ್ಯದ ವೇಳೆಗೆ ಅಥವಾ ಡಿಸೆಂಬರ್‌ನಲ್ಲಿ ಲಾಂಚ್ ಆಗಲಿದೆ ಎಂದು ಟಿಪ್‌ಸ್ಟರ್ ಮುಕುಲ್ ಶರ್ಮಾ ಮಾಹಿತಿ ನೀಡಿದ್ದಾರೆ. ಈ ಫೋನ್ ಕ್ವಾಲ್‌ಕಾಮ್ ಇನ್ನೂ ಬಿಡುಗಡೆಯಾಗದ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಅನ್ನು ಹೊಂದಿರಲಿದೆ ಎಂದು ಉಲ್ಲೇಖಿಸಲಾಗಿದೆ. ಇದು ಏನಾದರೂ ನಿಜವಾದರೆ ಈ ಪ್ರೊಸೆಸರ್ ಅನ್ನು ಹೊಂದಿದ ಮೊದಲ ಫೋನ್ ಆಗಿ ಐಕ್ಯೂ ಹೆಸರಾಗಲಿದೆ.
ಇದರೊಂದಿಹೆ ಈ ಫೋನ್ 2K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ರೇಟ್‌ನೊಂದಿಗೆ ಅಮೋಲೆಡ್ ಡಿಸ್‌ಪ್ಲೇ (AMOLED display) ಹೊಂದಿರಬಹುದು ಎಂದು ಹೇಳಲಾಗಿದ್ದು ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ (Ultrasonic in-display fingerprint scanner) ಆಯ್ಕೆ ಪಡೆಯಲಿದೆ ಎಂದು ತಿಳಿದುಬಂದಿದೆ. ಜನರು ಒದ್ದೆಯಾದ ಅಥವಾ ತೇವವಾದ ಬೆರಳುಗಳಿಂದ ಫೋನ್ ಅನ್ನು ಅನ್‌ಲಾಕ್ ಮಾಡಲು ಇದು ಅನುಮತಿಸುತ್ತದೆ.
ಇದಿಷ್ಟೇ ಅಲ್ಲದೆ ಈ ಫೋನ್ ಟ್ರಿಪಲ್ ರಿಯಲ್ ಕ್ಯಾಮೆರಾ (Triple Real Camera) ಹೊಂದಿರಲಿದೆ ಎನ್ನಲಾಗಿದ್ದು, ಇದರಲ್ಲಿ ಪ್ರಮುಖವಾಗಿ 50 ಮೆಗಾಪಿಕ್ಸೆಲ್ ಓಮ್ನಿವಿಷನ್ OV50H ಸೆನ್ಸರ್, ISOCELL JN1 ಸೆನ್ಸರ್ ಹೊಂದಿರುವ 50 ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಮತ್ತು 3X ಆಪ್ಟಿಕಲ್ ಜೊತೆಗೆ 64 ಮೆಗಾಪಿಕ್ಸೆಲ್ ಸೆನ್ಸರ್ ಇರುವ ಕ್ಯಾಮೆರಾ ಇದರಲ್ಲಿ ಇರಲಿದೆ ಎನ್ನಲಾಗಿದೆ. ಈ ಮೂಲಕ ಕ್ಯಾಮೆರಾ ಪ್ರಿಯರು ಈ ಫೋನ್ ಅನ್ನು ಕಣ್ಣುಮುಚ್ಚಿಕೊಂಡು ಖರೀದಿ ಮಾಡಬಹುದಾಗಿದೆ.
ಇದರೊಂದಿಗೆ ಈ 5G ಫೋನ್ 200W ವೇಗದ ಚಾರ್ಜಿಂಗ್ ತಂತ್ರಜ್ಞಾನದ ಬೆಂಬಲ ಪಡೆಯಲಿದೆ ಎನ್ನಲಾಗಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿರಲಿದೆ ಎಂದು ಲೀಕ್ ಆದ ಮಾಹಿತಿಗಳಿಂದ ತಿಳಿದುಬಂದಿದೆ. ಈ ಮೂಲಕ ಯಾರೆಲ್ಲಾ ಉತ್ತಮ ಕಾರ್ಯಕ್ಷಮತೆಯ ಫೋನ್ ಖರೀದಿ ಮಾಡಲು ಇಚ್ಚಿಸುತ್ತಾರೋ ಅವರು ಇದನ್ನು ಖರೀದಿ ಮಾಡಬಹುದಾಗಿದೆ.

ಇನ್ನು ಈ ಫೋನ್‌ನ ಬೆಲೆ ವಿಚಾರಕ್ಕೆ ಬರುವುದಾದರೆ ಕಂಪನಿಯು ಈವರೆಗೂ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆ ಮತ್ತು ವಿನ್ಯಾಸವನ್ನು ನೀಡುವ ಫೋನ್‌ಗಳನ್ನು ನೀಡಿದೆ. ಅಷ್ಟೇ ಅಲ್ಲದೆ ಐಕ್ಯೂ 11 ಅನ್ನು ಭಾರತದಲ್ಲಿ 59,999ರೂ.ಗಳ ಆರಂಭಿಕ ಬೆಲೆಯೊಂದಿಗೆ ಲಾಂಚ್ ಮಾಡಿತ್ತು. ಈ ಮೂಲಕ ಮುಂದಿನ ಪೀಳಿಗೆಯ ಐಕ್ಯೂ 12 ಸಹ ಇದೇ ರೀತಿಯ ಬೆಲೆ ಹೊಂದಿರಬಹುದು ಎನ್ನಲಾಗಿದೆ.


Click it and Unblock the Notifications








