Home
ಸುದ್ದಿಜಾಲ

ಮೊಬೈಲ್‌ ಪ್ರಿಯರ ಎದೆ ಬಡಿತ ಹೆಚ್ಚಿಸಿದ ಐಕ್ಯೂ 12 ಪ್ರೊ! ಫೀಚರ್ಸ್‌ ಮಾತ್ರ ಬೆಂಕಿ!

ಐಕ್ಯೂ 12 ಸರಣಿ ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ತನ್ನ ಇಮೇಜ್‌ ಸೋರಿಕೆಯೊಂದಿಗೆ ಸನ್ಸೇಷನ್‌ ಕ್ರಿಯೆಟ್‌ ಮಾಡಿದೆ. ಇದೀಗ ಈ ಸರಣಿಯ ಐಕ್ಯೂ 12 ಪ್ರೊ ಮಾದರಿಯ ಸಂಪೂರ್ಣ ಫೀಚರ್ಸ್‌ ಬಹಿರಂಗವಾಗಿದೆ. ಅದರಂತೆ ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 3 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಐಕ್ಯೂ 12 ಸರಣಿಯು ಇದೇ ನವೆಂಬರ್ 7 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಈ ಸರಣಿಯಲ್ಲಿ ಐಕ್ಯೂ 12 ಪ್ರೊ ಮಾದರಿಯು ಅತ್ಯಾಕರ್ಷಕ ಫೀಚರ್ಸ್‌ಗಳೊಂದಿಗೆ ಬರುವುದು ಕನ್ಫರ್ಮ್‌ ಆಗಿದೆ. ಇದರ ಫೀಚರ್ಸ್‌ ಆನ್‌ಲೈನ್‌ನಲ್ಲಿ ಬಹಿರಂಗವಾಗಿರುವುದರಿಂದ ಮೊಬೈಲ್‌ ಪ್ರಿಯರ ಎದೆ ಬಡಿತ ಜೋರಾಗುವಂತೆ ಮಾಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ಗಳನ್ನು ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್‌ ಪ್ರಿಯರ ಎದೆ ಬಡಿತ ಹೆಚ್ಚಿಸಿದ ಐಕ್ಯೂ 12 ಪ್ರೊ! ಫೀಚರ್ಸ್‌ ಮಾತ್ರ ಬೆಂಕಿ!

ಐಕ್ಯೂ 12 ಪ್ರೊ ಡಿಸ್‌ಪ್ಲೇ ನಿರೀಕ್ಷೆ ಏನು?
ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ 6.82 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1440 x 3200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆಯಬಹುದು. ಇನ್ನು ಡಿಸ್‌ಪ್ಲೇ HDR10+ ಬೆಂಬಲಿಸಲಿದ್ದು, P3 ಬಣ್ಣದ ಗ್ಯಾಮಟ್‌ನೊಂದಿಗೆ ಬರಲಿದೆ. ಜೊತೆಗೆ ಡಿಸ್‌ಪ್ಲೇಯು 3000ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದ್ದು, 2160Hz PWM ಡಿಮ್ಮಿಂಗ್‌ ಅನ್ನು ಹೊಂದಿರಲಿದೆ. ಇದೊರಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಸಹ ಪಡೆದಿರುವ ನಿರೀಕ್ಷೆಯಿದೆ.

ಐಕ್ಯೂ 12 ಪ್ರೊ ಪ್ರೊಸೆಸರ್‌ ಯಾವುದು?
ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನೊಂದಿಗೆ ಬರಲಿದೆ. ಇದರ ಟಾಪ್-ಆಫ್-ಲೈನ್ ಮಾದರಿಯು 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿರಲಿದೆ ಎಂದು ಕಂಪನಿಯು ದೃಢಪಡಿಸಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡುವ ಸಾಧ್ಯತೆ ಕೂಡ ಇದೆ.

ಮೊಬೈಲ್‌ ಪ್ರಿಯರ ಎದೆ ಬಡಿತ ಹೆಚ್ಚಿಸಿದ ಐಕ್ಯೂ 12 ಪ್ರೊ! ಫೀಚರ್ಸ್‌ ಮಾತ್ರ ಬೆಂಕಿ!

ಐಕ್ಯೂ 12 ಪ್ರೊ ಕ್ಯಾಮೆರಾ ಸೆಟ್‌ಅಪ್‌ ಏನಿದೆ?
ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆಯುವ ನಿರೀಕ್ಷೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಇರಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾದೊಂದಿಗೆ ಬರುವ ನಿರೀಕ್ಷೆಯನ್ನು ಇಡಲಾಗಿದೆ.

ಐಕ್ಯೂ 12 ಪ್ರೊ ಬ್ಯಾಟರಿ ಮತ್ತು ಇತರೆ ಸೌಲಭ್ಯ
ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 200W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ. ಇದು ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೋಮೀಟರ್‌, ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ನೊಂದಿಗೆ ಬರಲಿದೆ.

ಮೊಬೈಲ್‌ ಪ್ರಿಯರ ಎದೆ ಬಡಿತ ಹೆಚ್ಚಿಸಿದ ಐಕ್ಯೂ 12 ಪ್ರೊ! ಫೀಚರ್ಸ್‌ ಮಾತ್ರ ಬೆಂಕಿ!

ಐಕ್ಯೂ 12 ಪ್ರೊ ಬೆಲೆ ಮತ್ತು ಲಭ್ಯತೆ
ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಇದೇ ನವೆಂಬರ್‌ 7 ರಂದು ಬಿಡುಗಡೆ ಆಗಲಿದೆ. ಇದರ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಸ್ಮಾರ್ಟ್‌ಫೋನ್‌ ವೈಟ್‌ ಲೆಜೆಂಡ್ ಎಡಿಷನ್‌ ಮತ್ತು ಬ್ಲ್ಯಾಕ್ ಟ್ರ್ಯಾಕ್ ಆವೃತ್ತಿಯಲ್ಲಿ AG ಗ್ಲಾಸ್ ಬ್ಯಾಕ್ ವಿನ್ಯಾಸದೊಂದಿಗೆ ಬರಲಿದೆ.

Best Mobiles in India

English summary
iQoo 12 Pro Specifications Revealed Ahead of Launch in global market
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+