Home
ಸುದ್ದಿಜಾಲ

ನಾಳೆ ದೈತ್ಯ iQOO 13 ಫೋನ್‌ ಫಸ್ಟ್‌ ಸೇಲ್‌; ಜಬರ್ದಸ್ತ್‌ ಪ್ರೊಸೆಸರ್‌ ಪವರ್‌!

ಐಕ್ಯೂ ಮೊಬೈಲ್ ಸಂಸ್ಥೆಯು ನೂತನವಾಗಿ ಲಾಂಚ್‌ ಮಾಡಿರುವ ಐಕ್ಯೂ 13 (iQOO 13) ಮೊಬೈಲ್‌ ಕೆಲವು ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಇನ್ನು ಈ ದೈತ್ಯ ಮೊಬೈಲ್‌ ನಾಳೆ (ಡಿಸೆಂಬರ್‌ 11 ರಂದು) ಭಾರತದಲ್ಲಿ ಫಸ್ಟ್‌ ಸೇಲ್‌ ಶುರು ಮಾಡಲಿದೆ. ಅಂದಹಾಗೆ ಈ ಮೊಬೈಲ್‌ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್‌ ಪವರ್‌ ಪಡೆದುಕೊಂಡಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ನಾಳೆ ಐಕ್ಯೂ 13 (iQOO 13) ಸೇಲ್‌ ಪ್ರಾರಂಭ ಮಾಡಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 12GB + 256GB ಹಾಗೂ 12GB + 512GB ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಹಾಗೆಯೇ ಇದು 6,150mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಕೂಡಾ ಒಳಗೊಂಡಿದೆ.

ನಾಳೆ ದೈತ್ಯ iQOO 13 ಫೋನ್‌ ಫಸ್ಟ್‌ ಸೇಲ್‌; ಜಬರ್ದಸ್ತ್‌ ಪ್ರೊಸೆಸರ್‌ ಪವರ್‌!

ಇನ್ನು ಈ ಸ್ಮಾರ್ಟ್‌ಫೋನ್‌ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸಾಮರ್ಥ್ಯದಲ್ಲಿ ಇದ್ದು, ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇನ್ನುಳಿದಂತೆ ಐಕ್ಯೂ 13 (iQOO 13) ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಸಖತ್ ಡಿಸ್‌ಪ್ಲೇ ರಚನೆ

ಐಕ್ಯೂ 13 ಮೊಬೈಲ್ 6.82 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು 1,440 x 3,168 ಪಿಕ್ಸೆಲ್‌ ರೆಸಲ್ಯೂಶನ್‌ ಸೌಲಭ್ಯ ಹೊಂದಿದೆ. ಅಲ್ಲದೇ ಈ ಸ್ಕ್ರೀನ್‌ 2K ಸಪೋರ್ಟ್‌, BOE Q10 8T LTPO 2.0 OLED ಡಿಸ್‌ಪ್ಲೇ ಹೊಂದಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್‌ ಮತ್ತು HDR ಬೆಂಬಲವನ್ನು ಪಡೆದುಕೊಂಡಿದೆ.

ವೇಗದ ಪ್ರೊಸೆಸರ್‌ ಬಲ

ಐಕ್ಯೂ 13 ಮೊಬೈಲ್ ನೂತನ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್‌ ಸಾಮರ್ಥ್ಯದ ಪವರ್‌ನಲ್ಲಿ ಕಾರ್ಯ ಮಾಡಲಿದ್ದು, ಇದಕ್ಕೆ ಪೂರಕವಾಗಿ Android 15 ಆಧಾರಿತ OriginOS 5 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಈ ಫೋನ್ Q2 ಗೇಮಿಂಗ್ ಚಿಪ್‌ಸೆಟ್ ಅನ್ನು ಕೂಡಾ ಪಡೆದಿದೆ. ಅಲ್ಲದೇ 12GB + 256GB ಹಾಗೂ 12GB + 512GB ವೇರಿಯಂಟ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

ಅತ್ಯುತ್ತಮ ಕ್ಯಾಮರಾ ರಚನೆ

ಐಕ್ಯೂ 13 ಮೊಬೈಲ್ ಟ್ರಿಪಲ್‌ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಒಳಗೊಂಡಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ ಹೊಂದಿದೆ. ಇದು 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬಿಗ್ ಬ್ಯಾಟರಿ ಸೌಲಭ್ಯ

ಐಕ್ಯೂ 13 ಮೊಬೈಲ್ 6,150mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಸಪೋರ್ಟ್‌ ಆಗಿ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.4, NFC, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಫೋನ್ ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಸಹ ಪಡೆದಿದೆ.

ಬೆಲೆ ಹಾಗೂ ಲಭ್ಯತೆ

ಐಕ್ಯೂ 13 ಫೋನಿನ ಬೇಸ್‌ 12GB + 256GB ವೇರಿಯಂಟ್ ಬೆಲೆ 54,999ರೂ. ಗಳಲ್ಲಿ ಲಭ್ಯ ಇದೆ. ಅಲ್ಲದೇ 12GB + 512GB ವೇರಿಯಂಟ್‌ ಬೆಲೆಯು 56,999ರೂ. ಗಳು ಆಗಿದೆ. ಇನ್ನು ಹೆಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್‌ ಕಾರ್ಡ್‌ ಮೂಲಕ ಈ ಫೋನ್‌ ಖರೀದಿಸಿದರೇ, 3000ರೂ. ಗಳ ರಿಯಾಯಿತಿ ಸಹ ಸಿಗಲಿದೆ.

Best Mobiles in India

English summary
iQOO 13 goes on sale in India Tomorrow. know offer, price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+