ಅಬ್ಬರಿಸಲು ಬರ್ತಿದೆ iQOO 13; ಬಿಡುಗಡೆ ದಿನಾಂಕ ಬಹಿರಂಗ.. ಹೀಗಿವೆ ಟಾಪ್ 5 ಫೀಚರ್ಸ್
ಐಕ್ಯೂ (iQoo) ಶೀಘ್ರದಲ್ಲೇ ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಲಿದೆ. ಇದು ಡಿಸೆಂಬರ್ 5 ರಂದು ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಿದೆ. ಈ ಸ್ಮಾರ್ಟ್‌ಫೋನ್ ಐಕ್ಯೂ 13 (iQoo 13) ಎಂಬ ಹೆಸರಿನೊಂದಿಗೆ ಲಾಂಚ್ ಆಗಲಿದೆ. ಇತ್ತೀಚೆಗೆ, ಈ ಫೋನಿನ ಭಾರತದ ಬಿಡುಗಡೆಯ ಟೈಮ್‌ಲೈನ್, ಬೆಲೆ ಮತ್ತು ಫೀಚರ್ಸ್ ಸೋರಿಕೆಯಾಗಿವೆ. ಇದೀಗ, ಬಿಡುಗಡೆ ದಿನಾಂಕವೂ ಸೋರಿಕೆಯಾಗಿದೆ. ಆದರೆ, ಕಂಪನಿಯು ಈವರೆಗೆ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಂಪನಿಯು ಐಕ್ಯೂ 13 ಫೋನ್ ಅನ್ನು ಐಕ್ಯೂ 12 (IQOO 12) ಫೋನಿನ ಉತ್ತರಾಧಿಕಾರಿಯಾಗಿ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಅಮೋಲೆಡ್ ಡಿಸ್ಪ್ಲೇ ಆಗಿರಲಿದೆ. ಈ ಡಿಸ್ಪ್ಲೇಯ ರಿಫ್ರೆಶ್ ದರ 144Hz ಆಗಿದೆ. ಜೊತೆಗೆ, 2K ರೆಸಲ್ಯೂಶನ್ ಲಭ್ಯವಿದೆ. ಇದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಈ ಐಕ್ಯೂ 13 ಫೋನ್ 6150mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ.

ಐಕ್ಯೂ 13 ಫೋನಿನ ಟಾಪ್ 5 ಫೀಚರ್ಸ್ (ಸೋರಿಕೆ)
ಡಿಸ್ಪ್ಲೇ ವಿವರ
ಮುಂಬರುವ ಐಕ್ಯೂ 13 ಮೊಬೈಲ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 2K ಪ್ಯಾನಲ್ ಮತ್ತು 144Hz ರಿಫ್ರೆಶ್ ದರವನ್ನು ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಐಕ್ಯೂ 13 ಫೋನನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 4 ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಐಕ್ಯೂ 12 ಫೊನ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಐಕ್ಯೂ 13 ಮೊಬೈಲ್ 16GB RAM ಮತ್ತು 512GB ವರೆಗೆ ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ.
ಈ ಸುದ್ದಿ ಓದಿದ್ದೀರಾ?: 108MP ಕ್ಯಾಮೆರಾ, 256GB ಸ್ಟೋರೇಜ್.. ಕಡಿಮೆ ಬೆಲೆಗೆ Realme 5G ಫೋನ್ ಸೇಲ್!
ಕ್ಯಾಮೆರಾ ಸೆಟಪ್
ಐಕ್ಯೂ 13 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ. ಇದರೊಂದಿಗೆ, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ 2x ಟೆಲಿಫೋಟೋ ಕ್ಯಾಮೆರಾ ಲಭ್ಯವಿರಲಿದೆ.
ಬ್ಯಾಟರಿ ಬ್ಯಾಕಪ್
ನೂತನ ಐಕ್ಯೂ 13 ಮೊಬೈಲ್ 6,150mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರುವ ನಿರೀಕ್ಷೆಯಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು.
ಇತರೆ ವೈಶಿಷ್ಟ್ಯಗಳು
ಐಕ್ಯೂ 13 ಮೊಬೈಲ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, IP68 ರೇಟಿಂಗ್, ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಹೊಂದಿದೆ.
ಐಕ್ಯೂ 13 ಫೋನಿನ ಬೆಲೆ ಎಷ್ಟು?
ಸೋರಿಕೆಯ ಪ್ರಕಾರ, ಐಕ್ಯೂ 13 ಮೊಬೈಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ 55,000 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಗುವುದು. ಇದು ಮೂಲ ರೂಪಾಂತರದ ಬೆಲೆಯಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಐಕ್ಯೂ 12 ಫೋನಿನ 12GB + 256GB ಸ್ಟೋರೇಜ್ ಅನ್ನು 52,999 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಲಾಂಚ್ ಟೈಮ್‌ಲೈನ್ ಬಗ್ಗೆ ಹೇಳುವುದಾದರೆ, ಐಕ್ಯೂ 13 ಮೊಬೈಲ್ ಅನ್ನು ಡಿಸೆಂಬರ್ 5 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ಇದಕ್ಕೂ ಮೊದಲು ಚೀನಾದಲ್ಲಿ ಪ್ರಾರಂಭಿಸುವ ಸಾಧ್ಯತೆಯಿದೆ. ಈ ಹಿಂದಿನ ಐಕ್ಯೂ 12 ಫೋನನ್ನು ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಹಾಗಾಗಿ, ಮುಂಬರುವ ಐಕ್ಯೂ 13 ಕೂಡ ಇದೇ ತಿಂಗಳು ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ.


Click it and Unblock the Notifications








