Home
ಸುದ್ದಿಜಾಲ

ನಾಳೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ ಈ ದೈತ್ಯ ಫೋನ್‌!..ಸ್ಪೀಡ್‌ ಪ್ರೊಸೆಸರ್‌!

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ಒಂದಾದ ಐಕ್ಯೂ (iQOO) ಸಂಸ್ಥೆಯು ಈಗಾಗಲೇ ಭಿನ್ನ ಶ್ರೇಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚತಿಸಿ ಸೈ ಎನಿಸಿಕೊಂಡಿದೆ. ಆ ಸಾಲಿಗೆ ಇದೀಗ ದೈತ್ಯ ಐಕ್ಯೂ 13 (iQOO 13) ಸ್ಮಾರ್ಟ್‌ಫೋನ್‌ ಅನ್ನು ಸೇರ್ಪಡೆ ಮಾಡಲು ಸಕಲ ರೀತಿ ಸಜ್ಜಾಗಿದೆ.

ಹೌದು, ಜನಪ್ರಿಯ ಐಕ್ಯೂ ಸಂಸ್ಥೆಯು ಇದೇ ಡಿಸೆಂಬರ್‌ 2 ರಂದು (ನಾಳೆ) ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಗೆ ನೂತನವಾಗಿ ಐಕ್ಯೂ 13 (iQOO 13) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಈ ಬಗ್ಗೆ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೈಕ್ರೋ ಪೇಜ್‌ ಸಹ ನೀಡಿದೆ. ಅಂದಹಾಗೆ ಈ ಫೋನಿನ ಲೀಕ್‌ ಫೀಚರ್ಸ್‌ ಮೊಬೈಲ್‌ ಪ್ರಿಯರ ಗಮನ ಸೆಳೆದಿವೆ.

ನಾಳೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ ಈ ದೈತ್ಯ ಫೋನ್‌!..ಸ್ಪೀಡ್‌ ಪ್ರೊಸೆಸರ್‌!

ಬರಲಿರುವ ಐಕ್ಯೂ 13 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್‌ ಸೌಲಭ್ಯ ಪಡೆದಿದೆ. ಇದಲ್ಲದೇ ಈ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದ್ದು, ಇದಕ್ಕೆ ಪೂರಕವಾಗಿ 120W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಪಡೆದಿರುವ ನಿರೀಕ್ಷೆಗಳು ಇವೆ. ಹಾಗಾದರೇ ಐಕ್ಯೂ 13 ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ ಹಾಗೂ ರೆಸಲ್ಯೂಶನ್‌

ಐಕ್ಯೂ 13 ಸ್ಮಾರ್ಟ್‌ಫೋನ್‌ 6.82 ಇಂಚಿನ ಡಿಸ್‌ಪ್ಲೇ ಪಡೆದಿರಲಿದ್ದು, ಡಿಸ್‌ಪ್ಲೇಯು 1,440 x 3,168 ಪಿಕ್ಸೆಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಹಾಗೆಯೇ ಈ ಸ್ಕ್ರೀನ್‌ 2K ಸಪೋರ್ಟ್‌, BOE Q10 8T LTPO 2.0 OLED ಡಿಸ್‌ಪ್ಲೇ ಹೊಂದಿರಲಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್‌ ಮತ್ತು HDR ಬೆಂಬಲವನ್ನು ಒಳಗೊಂಡಿರಲಿದೆ.

ವೇಗದ ಪ್ರೊಸೆಸರ್‌ ಸಾಮರ್ಥ್ಯ

ಐಕ್ಯೂ 13 ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್‌ ಸಾಮರ್ಥ್ಯದ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ Android 15 ಆಧಾರಿತ OriginOS 5 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಈ ಫೋನ್ Q2 ಗೇಮಿಂಗ್ ಚಿಪ್‌ಸೆಟ್ ಅನ್ನು ಕೂಡಾ ಪಡೆದಿರಲಿದೆ. ಹಾಗೆಯೇ 12GB + 256GB, 12GB + 512GB ಹಾಗೂ 16GB RAM + 256GB/ 512GB / 1TB ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಬೊಂಬಾಟ್‌ ಕ್ಯಾಮೆರಾ ಸೆನ್ಸಾರ್‌

ಐಕ್ಯೂ 13 ಸ್ಮಾರ್ಟ್‌ಫೋನ್‌ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿರಲಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಒಳಗೊಂಡಿರಲಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ ಹೊಂದಿರಲಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.

ಬ್ಯಾಟರಿ ಬಲ ಯಾವುದು

ಐಕ್ಯೂ 13 ಸ್ಮಾರ್ಟ್‌ಫೋನ್‌ 6,150mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರಲಿದ್ದು, ಇದಕ್ಕೆ ಅನುಗುಣವಾಗಿ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಇರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.4, NFC, GPS ಮತ್ತು USB ಟೈಪ್-C ಪೋರ್ಟ್ ಸೇರಿರಲಿವೆ. ಇದಲ್ಲದೆ ಫೋನ್ ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಕೂಡಾ ಹೊಂದಿರಿದೆ. ಈ ಫೋನ್‌ ಐಲ್ ಆಫ್ ಮ್ಯಾನ್, ಲೆಜೆಂಡರಿ ಆವೃತ್ತಿ, ನಾರ್ಡೊ ಗ್ರೇ ಮತ್ತು ಟ್ರ್ಯಾಕ್ ಆವೃತ್ತಿಯಲ್ಲಿ ಲಭ್ಯ ಆಗಲಿವೆ.

Best Mobiles in India

English summary
iQOO 13 India Launch Tomorrow. 5 Things You Should Expect. check other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+