ಸುಂಟರಗಾಳಿಯಂತೆ ಎಂಟ್ರಿ ಕೊಟ್ಟಿದೆ iQOO 13 ಫೋನ್; 6000mAh ಬ್ಯಾಟರಿ!
ಬಹುನಿರೀಕ್ಷಿತ ಐಕ್ಯೂ 13 (iQOO 13) ಮೊಬೈಲ್ ಅಧಿಕೃತವಾಗಿ ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಈ ಮೊಬೈಲ್ ಹೊಸ ಸ್ನಾಪ್‌ಡ್ರಾಗನ್ 8 ಎಲೈಟ್ SoC ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿರುವುದು ಪ್ರಮುಖ ಹೈಲೈಟ್ ಎನಿಸಿದೆ. ಅಲ್ಲದೇ ಈ ಮೊಬೈಲ್ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೌಲಭ್ಯದ ಮೂಲಕ ಮೊಬೈಲ್ ಪ್ರಿಯರ ಗಮನ ಸೆಳೆದಿದೆ.
ಹೌದು, ಐಕ್ಯೂ 13 (iQOO 13) ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಪ್ರೀಮಿಯಂ ಮೊಬೈಲ್ 6000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ 32 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಹಾಗಾದರೇ ಐಕ್ಯೂ 13 (iQOO 13) ಫೋನಿನ ಇತರೆ ಫೀಚರ್ಸ್ ಬಗ್ಗೆ ತಿಳಿಯಲು ಮುಂದೆ ಓದಿರಿ.

ಆಕರ್ಷಕ ಡಿಸ್‌ಪ್ಲೇ ರಚನೆ
ಐಕ್ಯೂ 13 ಮೊಬೈಲ್ 6.82 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು 1,440 x 3,168 ಪಿಕ್ಸೆಲ್ ರೆಸಲ್ಯೂಶನ್ ಸೌಲಭ್ಯ ಹೊಂದಿದೆ. ಅಲ್ಲದೇ ಈ ಸ್ಕ್ರೀನ್ 2K ಸಪೋರ್ಟ್, BOE Q10 8T LTPO 2.0 OLED ಡಿಸ್‌ಪ್ಲೇ ಹೊಂದಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್ ಮತ್ತು HDR ಬೆಂಬಲವನ್ನು ಪಡೆದುಕೊಂಡಿದೆ.
ಪ್ರವರ್‌ಫುಲ್ ಪ್ರೊಸೆಸರ್
ಐಕ್ಯೂ 13 ಮೊಬೈಲ್ ನೂತನ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್ ಸಾಮರ್ಥ್ಯದ ಪವರ್‌ನಲ್ಲಿ ಕಾರ್ಯ ಮಾಡಲಿದ್ದು, ಇದಕ್ಕೆ ಪೂರಕವಾಗಿ Android 15 ಆಧಾರಿತ OriginOS 5 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಈ ಫೋನ್ Q2 ಗೇಮಿಂಗ್ ಚಿಪ್‌ಸೆಟ್ ಅನ್ನು ಕೂಡಾ ಪಡೆದಿದೆ. ಅಲ್ಲದೇ 12GB + 256GB ಹಾಗೂ 12GB + 512GB ವೇರಿಯಂಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ.
ಉತ್ತಮ ಕ್ಯಾಮರಾ ಸೆಟ್‌ಅಪ್
ಐಕ್ಯೂ 13 ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಒಳಗೊಂಡಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದು 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ದೊಡ್ಡ ಬ್ಯಾಟರಿ ಸೌಲಭ್ಯ
ಐಕ್ಯೂ 13 ಮೊಬೈಲ್ 6,150mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದಕ್ಕೆ ಸಪೋರ್ಟ್ ಆಗಿ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.4, NFC, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಫೋನ್ ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ಪಡೆದಿದೆ.
ಬೆಲೆ ಹಾಗೂ ಲಭ್ಯತೆ
ಐಕ್ಯೂ 13 ಮೊಬೈಲ್ ನ ಆರಂಭಿಕ 12GB + 256GB ವೇರಿಯಂಟ್ ಬೆಲೆ 54,999ರೂ. ಆಗಿದೆ. ಅಲ್ಲದೇ 12GB + 512GB ವೇರಿಯಂಟ್ ಬೆಲೆಯು 56,999ರೂ. ಗಳು ಆಗಿದೆ. ಇನ್ನು ಹೆಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ ಈ ಫೋನ್ ಖರೀದಿಸಿದರೇ, 3000ರೂ. ಗಳ ರಿಯಾಯಿತಿ ಸಹ ಸಿಗಲಿದೆ. ಡಿಸೆಂಬರ್ 10 ರಿಂದ ಮಾರಾಟ ಪ್ರಾರಂಭ ಆಗಲಿದೆ.


Click it and Unblock the Notifications







