ಜಸ್ಟ್ 999 ಅಷ್ಟೇ!..ದೈತ್ಯ ಐಕ್ಯೂ 13 ಫೋನ್ ಪ್ರೀ-ಬುಕಿಂಗ್ ಮಾಡಬಹುದು!
ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಐಕ್ಯೂ 13 (iQOO 13) ಫೋನ್ ಇಂದು ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಪ್ರಿ-ಬುಕಿಂಗ್ (Pre-Booking) ಆರಂಭ ಆಗಿದೆ. ಅಂದಹಾಗೆ ಈ ಫೋನ್ ಇದೇ ಡಿಸೆಂಬರ್ 3 ರಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಈ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್ ಒಳಗೊಂಡಿದ್ದು, ಭಾರೀ ಸದ್ದು ಮಾಡಿದೆ.
ಹೌದು, ಅಮೆಜಾನ್ ಮೂಲಕ ಐಕ್ಯೂ 13 (iQOO 13) ಪ್ರಿ-ಬುಕಿಂಗ್ (Pre-Booking) ಈಗ ಶುರು ಆಗಿದೆ. ಆಸಕ್ತ ಗ್ರಾಹಕರು ಜಸ್ಟ್ 999ರೂ. ಮೂಲಕ ಪ್ರೀ-ಬುಕಿಂಗ್ ಮಾಡಬಹುದಾಗಿದೆ. ಅಂದಹಾಗೆ ಈ ಫೋನಿನ ಆರಂಭಿಕ 12GB + 256GB ವೇರಿಯಂಟ್ ಬೆಲೆ 54,999ರೂ. ಆಗಿದೆ. ಇದೇ ಡಿಸೆಂಬರ್ 10 ರಂದು ಈ ಫೋನ್ ಫಸ್ಟ್ ಸೇಲ್ ಪ್ರಾರಂಭ ಮಾಡಲಿದೆ. ಹಾಗಾದರೇ ಐಕ್ಯೂ 13 (iQOO 13) ಫೋನಿನ ಇತರೆ ಫೀಚರ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

OLED ಡಿಸ್ಪ್ಲೇ ಸೌಲಭ್ಯ
ಐಕ್ಯೂ 13 ಫೋನ್ 6.82 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು 1,440 x 3,168 ಪಿಕ್ಸೆಲ್ ರೆಸಲ್ಯೂಶನ್ ಸೌಲಭ್ಯ ಹೊಂದಿದೆ. ಅಲ್ಲದೇ ಈ ಸ್ಕ್ರೀನ್ 2K ಸಪೋರ್ಟ್, BOE Q10 8T LTPO 2.0 OLED ಡಿಸ್‌ಪ್ಲೇ ಪಡೆದಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್ ಮತ್ತು HDR ಬೆಂಬಲವನ್ನು ಪಡೆದುಕೊಂಡಿದೆ.
ಬಲವಾದ ಪ್ರೊಸೆಸರ್ ವೇಗ
ಐಕ್ಯೂ 13 ಫೋನ್ ನೂತನ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್ ಸಾಮರ್ಥ್ಯದ ಪವರ್‌ನಲ್ಲಿ ಕಾರ್ಯ ಮಾಡಲಿದ್ದು, ಇದಕ್ಕೆ ಅನುಗುಣವಾಗಿ Android 15 ಆಧಾರಿತ OriginOS 5 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಈ ಫೋನ್ Q2 ಗೇಮಿಂಗ್ ಚಿಪ್‌ಸೆಟ್ ಅನ್ನು ಕೂಡಾ ಪಡೆದಿದೆ. ಅಲ್ಲದೇ 12GB + 256GB ಹಾಗೂ 12GB + 512GB ವೇರಿಯಂಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ.
ಅತ್ಯುತ್ತಮ ಕ್ಯಾಮರಾ ಸೆಟ್‌ಅಪ್
ಐಕ್ಯೂ 13 ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮೊದಲ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಒಳಗೊಂಡಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದು 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಬಿಗ್ ಬ್ಯಾಟರಿ ಸೌಲಭ್ಯ
ಐಕ್ಯೂ 13 ಫೋನ್ 6,150mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಇದಕ್ಕೆ ಸಪೋರ್ಟ್ ಆಗಿ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.4, NFC, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಫೋನ್ ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ.
ಬೆಲೆ ಹಾಗೂ ಲಭ್ಯತೆ
ಐಕ್ಯೂ 13 ಮೊಬೈಲ್ ನ ಆರಂಭಿಕ 12GB + 256GB ವೇರಿಯಂಟ್ ಬೆಲೆ 54,999ರೂ. ಆಗಿದೆ. ಹಾಗೆಯೇ 12GB + 512GB ವೇರಿಯಂಟ್ ಬೆಲೆಯು 56,999ರೂ. ಗಳು ಆಗಿದೆ. ಇನ್ನು ಹೆಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ ಈ ಮೊಬೈಲ್ ಖರೀದಿಸಿದರೇ, 3000ರೂ. ಗಳ ರಿಯಾಯಿತಿ ಸಹ ಸಿಗಲಿದೆ. ಡಿಸೆಂಬರ್ 10 ರಿಂದ ಮಾರಾಟ ಪ್ರಾರಂಭ ಆಗಲಿದೆ.


Click it and Unblock the Notifications







