Home
ಸುದ್ದಿಜಾಲ

ಇಂದು iQOO 13 ಮಾರಾಟ ಪ್ರಾರಂಭ!..ದುಬಾರಿ ಬೆಲೆ ಆದ್ರೂ ಆಫರ್‌ ಇದೆ!

ವಿವೋ ಸಂಸ್ಥೆಯ ಸಬ್‌ ಬ್ರ್ಯಾಂಡ್‌ ಆಗಿರುವ ಐಕ್ಯೂ ಮೊಬೈಲ್ ಕಂಪನಿಯು ಇತ್ತೀಚಿಗೆ ಹೊಸದಾಗಿ ಬಿಡುಗಡೆ ಮಾಡಿರುವ ಐಕ್ಯೂ 13 (iQOO 13) ಫೋನ್‌ ದೈತ್ಯ ಫೀಚರ್ಸ್‌ಗಳಿಂದ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಇನ್ನು ಈ ಹೈ ಎಂಡ್‌ ಮೊಬೈಲ್‌ ಇಂದು (ಡಿಸೆಂಬರ್‌ 11 ರಂದು) ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ ಇ ಕಾಮರ್ಸ್‌ ತಾಣದ ಮೂಲಕ ಫಸ್ಟ್‌ ಸೇಲ್‌ ಶುರು ಮಾಡಲಿದೆ. ಅಂದಹಾಗೆ ಈ ಮೊಬೈಲ್‌ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪಡೆದುಕೊಂಡಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಇಂದು ಐಕ್ಯೂ 13 (iQOO 13) ಮೊದಲ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಈ ಮೊಬೈಲ್‌ 6,150mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿದ್ದು, ಹಾಗೆಯೇ ಇದು 12GB + 256GB ಹಾಗೂ 12GB + 512GB ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ.

ಇಂದು iQOO 13 ಮಾರಾಟ ಪ್ರಾರಂಭ!..ದುಬಾರಿ ಬೆಲೆ ಆದ್ರೂ ಆಫರ್‌ ಇದೆ!

ಐಕ್ಯೂ 13 ಮೊಬೈಲ್‌ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಮೂರು ಕ್ಯಾಮೆರಾಗಳು 50 ಮೆಗಾ ಪಿಕ್ಸಲ್‌ ಸಾಮರ್ಥ್ಯದಲ್ಲಿ ಇರುವುದು ವಿಶೇ‍ಷ. ಇನ್ನು ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಇನ್ನುಳಿದಂತೆ ಐಕ್ಯೂ 13 (iQOO 13) ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

144Hz ರಿಫ್ರೆಶ್ ರೇಟ್‌ ಸ್ಕ್ರೀನ್‌

ಐಕ್ಯೂ 13 ಫೋನ್‌ 6.82 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು 1,440 x 3,168 ಪಿಕ್ಸೆಲ್‌ ರೆಸಲ್ಯೂಶನ್‌ ಸೌಲಭ್ಯ ಹೊಂದಿದೆ. ಅಲ್ಲದೇ ಈ ಸ್ಕ್ರೀನ್‌ 2K ಸಪೋರ್ಟ್‌, BOE Q10 8T LTPO 2.0 OLED ಡಿಸ್‌ಪ್ಲೇ ಹೊಂದಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್‌ ಮತ್ತು HDR ಸಪೋರ್ಟ್‌ ಸಹ ಪಡೆದುಕೊಂಡಿದೆ.

ನೂತನ ಪ್ರೊಸೆಸರ್‌ ಪವರ್‌

ಐಕ್ಯೂ 13 ಫೋನ್‌ ನೂತನ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್‌ ಸಾಮರ್ಥ್ಯದ ಪವರ್‌ನಲ್ಲಿ ಕಾರ್ಯ ಮಾಡಲಿದ್ದು, ಇದಕ್ಕೆ ಪೂರಕವಾಗಿ Android 15 ಆಧಾರಿತ OriginOS 5 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಈ ಫೋನ್ Q2 ಗೇಮಿಂಗ್ ಚಿಪ್‌ಸೆಟ್ ಅನ್ನು ಕೂಡಾ ಪಡೆದಿದೆ. ಅಲ್ಲದೇ 12GB + 256GB ಹಾಗೂ 12GB + 512GB ವೇರಿಯಂಟ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

50ಎಂಪಿ ಕ್ಯಾಮರಾ ಸೆಟ್‌ಅಪ್‌

ಐಕ್ಯೂ 13 ಫೋನ್‌ ಟ್ರಿಪಲ್‌ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮೊದಲ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಒಳಗೊಂಡಿದೆ. ದ್ವಿತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ ಹೊಂದಿದೆ. ಹಾಗೆಯೇ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ದೊಡ್ಡ ಬ್ಯಾಟರಿ ಸೌಲಭ್ಯ

ಐಕ್ಯೂ 13 ಫೋನ್‌ 6,150mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದಕ್ಕೆ ಸಪೋರ್ಟ್‌ ಆಗಿ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.4, NFC, GPS ಮತ್ತು USB ಟೈಪ್-C ಪೋರ್ಟ್ ಪಡೆದಿದೆ. ಇದಲ್ಲದೆ ಫೋನ್ ಇನ್-ಡಿಸ್‌ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಸಹ ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಐಕ್ಯೂ 13 ಫೋನಿನ ಬೇಸ್‌ 12GB + 256GB ವೇರಿಯಂಟ್ ಬೆಲೆ 54,999ರೂ. ಗಳಲ್ಲಿ ಲಭ್ಯ ಇದೆ. ಅಲ್ಲದೇ 12GB + 512GB ವೇರಿಯಂಟ್‌ ಬೆಲೆಯು 56,999ರೂ. ಗಳು ಆಗಿದೆ. ಇನ್ನು ಹೆಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್‌ ಕಾರ್ಡ್‌ ಮೂಲಕ ಈ ಫೋನ್‌ ಖರೀದಿಸಿದರೇ, 3000ರೂ. ಗಳ ರಿಯಾಯಿತಿ ಕೂಡಾ ಸಿಗಲಿದೆ.

Best Mobiles in India

English summary
iQOO 13 Sale Starts Today in India via Amazon website. Check Price, Offers and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+