Home
ಸುದ್ದಿಜಾಲ

ವಿವೋ iQoo 3 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ವಿವೋ ಸಂಸ್ಥೆಯು ಇತ್ತೀಚಿಗೆ ತನ್ನ ಸಬ್‌ಬ್ರ್ಯಾಂಡ್ iQoo ಸಂಸ್ಥೆಯು ಬಿಡುಗಡೆ ಮಾಡಿರುವ 'iQoo 3' ಸ್ಮಾರ್ಟ್‌ಫೋನ್ ವಿಶೇಷ ಫೀಚರ್ಸ್‌ಗಳಿಂದ ಗ್ರಾಹಕರ ಮೆಚ್ಚುಗೆ ಪಡೆದಿದೆ. ಆದರೆ ಇದೀಗ iQoo ಸಂಸ್ಥೆಯು ತನ್ನ 'iQoo 3' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಸರ್‌ಪ್ರೈಸ್‌ ನೀಡಿದೆ. ಏಕೆಂದರೇ ಇತ್ತೀಚಿಗೆ ಕೆಲವು ಮೊಬೈಲ್‌ ಕಂಪನಿಗಳು ಸ್ಮಾರ್ಟ್‌ಫೋನ್‌ ದರಗಳಲ್ಲಿ ಏರಿಕೆ ಮಾಡಿವೆ.

iQoo-ಐಕ್ಯೂ ಸಂಸ್ಥೆ

ಹೌದು, iQoo-ಐಕ್ಯೂ ಸಂಸ್ಥೆಯು ತನ್ನ ಮೊದಲ ಸ್ಮಾರ್ಟ್‌ಫೋನ್ iQoo 3 ಫೋನ್ ಬೆಲೆಯಲ್ಲಿ 4000ರೂ.ಗಳನ್ನು ಕಡಿತ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಮೂರು ವೇರಿಯಂಟ್‌ಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. iQoo 3 ಫೋನ್ 4G ವೇರಿಯಂಟ್‌ನ 8 RAM+128GB ಸ್ಟೋರೇಜ್‌ನ ಬೇಸ್‌ ವೇರಿಯಂಟ್‌ ಆರಂಭಿಕ ಬೆಲೆಯು 34,990ರೂ ಆಗಿದೆ. ಹೊಸ ಬೆಲೆಗಳು ಫ್ಲಿಪ್‌ಕಾರ್ಟ್ ತಾಣ ಮತ್ತು iQoo.comನಲ್ಲಿಯೂ ಕಾಣಿಸಲಿದೆ. ಇನ್ನು ಈ ಫೋನ್ ಕ್ವಾಂಟಮ್ ಸಿಲ್ವರ್ ಮತ್ತು ಬ್ಲ್ಯಾಕ್‌ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಹಾಗಾದರೆ iQoo 3 ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ರಚನೆ

ಡಿಸ್‌ಪ್ಲೇ ಮತ್ತು ರಚನೆ

iQoo 3 ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಪೂರ್ಣ ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಪಡೆದಿದೆ. ಡಿಸ್‌ಪ್ಲೇಯು 1200 nits ಬ್ರೈಟ್ನೆಸ್‌ ಸಾಮರ್ಥ್ಯದಲ್ಲಿದ್ದು, HDR10+ ಅನ್ನು ಒಳಗೊಂಡಿದೆ. ಹಾಗೆಯೇ ಡಿಸ್‌ಪ್ಲೇಯ ರೆಫ್ರೇಶ್ ರೇಟ್ 120Hz ಆಗಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್ ಪಡೆದಿದೆ. ಇಲ್ಲದೇ ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ 6 ಅನ್ನು ಹೊಂದಿದೆ.

ಪ್ರೊಸೆಸರ್ ಕಾರ್ಯ

ಪ್ರೊಸೆಸರ್ ಕಾರ್ಯ

iQoo 3 ಸ್ಮಾರ್ಟ್‌ಫೋನ್ 5G ಬೆಂಬಲಿತ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್‌ ಅನ್ನು ಪಡೆದಿದೆ. ಇದಕ್ಕೆ ಪೂರಕವಾಗಿ iQoo UI ಹಾಗೂ ಆಂಡ್ರಾಯ್ಡ್ 10 ಓಎಸ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಫೋನ್ ಮೂರು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವು ಕ್ರಮವಾಗಿ 8GB RAM + 128GB, 8GB RAM + 256GB ಮತ್ತು 12GB RAM + 256GB ಸ್ಟೋರೇಜ್ ಆಯ್ಕೆಯಲ್ಲಿವೆ.

ಸ್ಪೆಷಲ್ ಕ್ಯಾಮೆರಾ

ಸ್ಪೆಷಲ್ ಕ್ಯಾಮೆರಾ

iQoo 3 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 13ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ತೃತೀಯ ಕ್ಯಾಮೆರಾವು 13ಎಂಪಿಯ ವೈಲ್ಡ್ ಆಂಗಲ್ ಲೆನ್ಸ್‌ ಪಡೆದಿದೆ. ನಾಲ್ಕನೇ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಕ್ಯಾಮೆರಾವು 1x, 5x ಮತ್ತು 20x ಜೂಮ್ ಸೌಲಭ್ಯ ಹೊಂದಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

iQoo 3 ಸ್ಮಾರ್ಟ್‌ಫೋನ್ 4,400mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಇದರೊಂದಿಗೆ 55W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್, ಫೇಸ್‌ಲಾಕ್ ಸೌಲಭ್ಯ, ಕಾರ್ಬನ್ ಫೈಬರ್ VC ಲಿಕ್ವಡ್ ಕೂಲಿಂಗ್ ತಂತ್ರಜ್ಞಾನ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ವೈಫೈ, ಬ್ಲೂಟೂತ್, ಜಿಪಿಎಸ್‌ ಸೌಲಭ್ಯಗಳನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

iQoo 3 ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ ಆಗಿದ್ದು, ಒಟ್ಟು ಮೂರು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. 8GB RAM + 128GB ಸ್ಟೋರೇಜ್‌ ವೇರಿಯಂಟ್ ಬೆಲೆಯು 34,990 ರೂ.ಗಳು ಆಗಿದೆ. ಹಾಗೆಯೇ 8GB RAM + 256GB ಬೆಲೆಯು 37,990ರೂ.ಗಳು ಮತ್ತು 12GB RAM + 256GB ಬೆಲೆಯು 44,990ರೂ. ಆಗಿದೆ.

Best Mobiles in India

English summary
IQoo 3 gets a price cut by Rs 4,000. The new price will also be reflected on Flipkart and iQoo.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+