ಐಕ್ಯೂ 8 ಮತ್ತು ಐಕ್ಯೂ 8 ಪ್ರೊ ಫೋನ್ ಲಾಂಚ್; ಹೈ ಎಂಡ್ ಫೀಚರ್ಸ್!
ಜನಪ್ರಿಯ ಐಕ್ಯೂ ಸಂಸ್ಥೆಯು ಹಲವು ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಇದೀಗ ಐಕ್ಯೂ ಕಂಪನಿಯು ಐಕ್ಯೂ 8 ಮತ್ತು ಐಕ್ಯೂ 8 ಪ್ರೊ ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು 120Hz ಸ್ಕ್ರೀನ್ ರೀಫ್ರೇಶ್ ಹೊಂದಿದ್ದು, ಹಾಗೆಯೇ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್ ಅನ್ನು ಪಡೆದಿದೆ.

ಹೌದು, ಐಕ್ಯೂ ಸಂಸ್ಥೆಯು ನೂತನವಾಗಿ ಐಕ್ಯೂ 8 ಮತ್ತು ಐಕ್ಯೂ 8 ಪ್ರೊ ಫೋನ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಹೈ ಎಂಡ್ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಫೋನ್‌ಗಳು ಆಕರ್ಷಕ ಎನಿಸಿವೆ. ಈ ಎರಡು ಫೋನ್‌ಗಳು 120W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಒಳಗೊಂಡಿವೆ. AMOLED ಮಾದರಿಯ ಡಿಸ್‌ಪ್ಲೇಯನ್ನು ಪಡೆದಿವೆ. ಹಾಗಾದರೇ ಐಕ್ಯೂ 8 ಮತ್ತು ಐಕ್ಯೂ 8 ಪ್ರೊ ಫೋನ್‌ಗಳ ಇತರೆ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ 8 ಫೋನಿನ ಫೀಚರ್ಸ್
ಐಕ್ಯೂ 8 ಫೋನ್ 6.56-ಇಂಚಿನ ಫುಲ್ ಹೆಚ್‌ಡಿ+ (1,080x2,376 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ದರ, 10-ಬಿಟ್ ಬಣ್ಣ, 19.8: 9 ಆಕಾರ ಅನುಪಾತ, 92.76 ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 398ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಹಾಗೆಯೇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಇದ್ದು, ಆಂಡ್ರಾಯ್ಡ್ 11 ಬೆಂಬಲ ಪಡೆದಿದೆ. ಇದರೊಂದಿಗೆ 12GB RAM ಮತ್ತು 256GB ವೇರಿಯಂಟ್ ಆಯ್ಕೆ ಇದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ, ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಆಗಿದೆ. ಇನ್ನು ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್ ಆಗಿದೆ. ಹಾಗೆಯೇ 4,350mAh ಬ್ಯಾಟರಿಯು ಬೆಂಬಲಿಸುತ್ತದೆ, ಇದು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಐಕ್ಯೂ 8 ಪ್ರೊ ಫೋನಿನ ಫೀಚರ್ಸ್
ಐಕ್ಯೂ 8 ಪ್ರೊ ಫೋನ್ 6.78 ಇಂಚಿನ ಫುಲ್ ಹೆಚ್‌ಡಿ+ 1,440x3,200 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ದರ, 10-ಬಿಟ್ ಬಣ್ಣ, 19.8: 9 ಆಕಾರ ಅನುಪಾತ, 92 ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 517ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಹಾಗೆಯೇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 ಪ್ಲಸ್ SoC ಇದ್ದು, ಆಂಡ್ರಾಯ್ಡ್ 11 ಬೆಂಬಲ ಪಡೆದಿದೆ. ಇದರೊಂದಿಗೆ 12GB RAM ಮತ್ತು 256GB ವೇರಿಯಂಟ್ ಆಯ್ಕೆ ಇದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ. ಇನ್ನು ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್ ಆಗಿದೆ. ಹಾಗೆಯೇ 4,500mAh ಬ್ಯಾಟರಿಯು ಬೆಂಬಲಿಸುತ್ತದೆ, ಇದು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಬೆಲೆ ಮತ್ತು ಲಭ್ಯತೆ
ಐಕ್ಯೂ 8 ಫೋನ್ 8GB + 128GB ವೇರಿಯಂಟ್ ಬೆಲೆಯು ಚೀನಾದಲ್ಲಿ CNY 3,799 (ಭಾರತದಲ್ಲಿ ಅಂದಾಜು 43,600ರೂ. ಎನ್ನಲಾಗಿದೆ). 12GB + 256GB ವೇರಿಯಂಟ್ ಬೆಲೆಯು CNY 4,199 (ಭಾರತದಲ್ಲಿ ಅಂದಾಜು 48,200ರೂ. ಆಗಿರಲಿದೆ). ಅದೇ ರೀತಿ ಐಕ್ಯೂ 8 ಪ್ರೊ ಫೋನ್ 8GB + 256GB ವೇರಿಯಂಟ್ ಬೆಲೆಯು CNY 4,999 (ಭಾರತದಲ್ಲಿ ಅಂದಾಜು 57,300ರೂ.) 12GB + 256GB ವೇರಿಯಂಟ್ ದರದವು CNY 5,499 (ಭಾರತದಲ್ಲಿ ಅಂದಾಜು 63,100ರೂ. ಇರಲಿದೆ ಎನ್ನಲಾಗಿದೆ).


Click it and Unblock the Notifications








