Home
ಸುದ್ದಿಜಾಲ

ಅತೀ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಐಕ್ಯೂ Z9 5G ಸ್ಮಾರ್ಟ್‌ಫೋನ್!

ವಿವೋ ಬ್ರ್ಯಾಂಡ್‌ನ ಸಬ್‌ ಬ್ರ್ಯಾಂಡ್‌ ಆಗಿರುವ ಐಕ್ಯೂ (iQOO) ಮೊಬೈಲ್‌ ಸಂಸ್ಥೆಯು ಇದೀಗ ಮಾರುಕಟ್ಟೆಗೆ ಹೊಸ ಫೋನ್‌ ಪರಿಚಯಿಸಲು ಸಜ್ಜಾಗುತಿದ್ದು, ಅದುವೇ ಐಕ್ಯೂ Z9 5G (iQOO Z9 5G) ಆಗಿದೆ. ಭಾರತದಲ್ಲಿ ಈ ಫೋನ್‌ ಬಿಡುಗಡೆ ದಿನಾಂಕವನ್ನು ಸಂಸ್ಥೆಯು ಪ್ರಕಟಿಸಿದೆ. ಇನ್ನು ಈ ಫೋನಿನ ಕೆಲವು ಲೀಕ್ ಫೀಚರ್ಸ್‌ ಗ್ರಾಹಕರಲ್ಲಿ ಭಾರೀ ಕುತೂಹಲ ಮೂಡಿಸಿವೆ.

ಹೌದು, ಐಕ್ಯೂ ಸಂಸ್ಥೆಯ Z ಸರಣಿಯ ಮುಂಬರುವ ಐಕ್ಯೂ Z9 5G ಸ್ಮಾರ್ಟ್‌ಫೋನ್ ಇದೇ ಮಾರ್ಚ್ 12 ರಂದು ದೇಶಿಯ ಮಾರುಕಟ್ಟೆಯಲ್ಲಿ ಲಗ್ಗೆ ಇಡಲಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 7200 SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಹೊಸ ಫೋನ್‌ ಅನ್ನು ಅಮೆಜಾನ್ ಮೂಲಕ ದೇಶದಲ್ಲಿ ಸೇಲ್‌ ಮಾಡಲಾಗುತ್ತದೆ.

ಅತೀ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಐಕ್ಯೂ Z9 5G ಸ್ಮಾರ್ಟ್‌ಫೋನ್!

ಐಕ್ಯೂ Z9 5G ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೋನಿ IMX882 ಸೆನ್ಸಾರ್‌ ಅನ್ನು ಒಳಗೊಂಡಿರಲಿದೆ. ಈ ಕ್ಯಾಮೆರಾವು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಸೆನ್ಸಾರ್‌ ಸಪೋರ್ಟ್‌ ಪಡೆದಿರಲಿದೆ. ಇನ್ನುಳಿದಂತೆ ಐಕ್ಯೂ Z9 5G ಸ್ಮಾರ್ಟ್‌ಫೋನ್ ಇತರೆ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ Z9 5G ಸ್ಮಾರ್ಟ್‌ಫೋನ್ ದೇಶಿಯ ವೇರಿಯಂಟ್‌ ಮಾದರಿ ಸಂಖ್ಯೆ I2302 ಅನ್ನು ಆಗಿದ್ದು, ಇತ್ತೀಚೆಗೆ Geekbench ಬೆಂಚ್‌ಮಾರ್ಕ್ ಡೇಟಾಬೇಸ್‌ನಲ್ಲಿ ಗುರುತಿಸಲಾಗಿದೆ. ಲಿಸ್ಟ್‌ ಪ್ರಕಾರ, ಈ ಫೋನ್‌ 8 GB RAM ಅನ್ನು ಪಡೆದಿರಲಿದ್ದು, ಜೊತೆಗೆ ಆಂಡ್ರಾಯ್ಡ್‌ನ ಇತ್ತೀಚಿನ (ಆಂಡ್ರಾಯ್ಡ್‌ 14) ಆವೃತ್ತಿಯೊಂದಿಗೆ ಎಂಟ್ರಿ ಕೊಡಲಿದೆ. ಅಂದಹಾಗೆ ಈ ನೂತನ ಫೋನ್‌ ಐಕ್ಯೂ Z7 ಫೋನಿನ ಉತ್ತರಾಧಿಕಾರಿಯಾಗಿ ಲಗ್ಗೆ ಇಡಲಿದೆ.

ಐಕ್ಯೂ Z9 5G ಸ್ಮಾರ್ಟ್‌ಫೋನ್ ಪೂರ್ಣ HD+ ರೆಸಲ್ಯೂಶನ್‌ ಸೌಲಭ್ಯದೊಂದಿಗೆ 90Hz ರಿಫ್ರೆಶ್‌ ರೇಟ್‌ ಪಡೆದಿರಲಿದ್ದು, AMOLED ಡಿಸ್‌ಪ್ಲೇ ಮಾದರಿಯನ್ನು ಪಡೆದಿರಲಿದೆ. ಅಲ್ಲದೇ ಈ ಫೋನ್‌ 44W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಜೊತೆಗೆ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಐಕ್ಯೂ Z7 ಫೋನಿನ ಫೀಚರ್ಸ್‌
ಐಕ್ಯೂ Z7 ಫೋನ್‌ 6.28 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 90hz ಸ್ಕ್ರೀನ್ ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ. ಅಲ್ಲದೇ ಈ ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್ ನಲ್ಲಿ ಕೆಲಸ ನಿರ್ವಿಹಿಸಲಿದ್ದು, ಆಂಡ್ರಾಯ್ಡ್‌ 13 ಆಧಾರಿತ ಫನ್‌ಟಚ್‌ ಓಎಸ್‌ 13 ನಲ್ಲಿ ಸೌಲಭ್ಯ ಕೂಡಾ ಪಡೆದಿದೆ.

ಹಾಗೆಯೇ ಈ ಫೋನ್‌ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರಲ್ಲಿ OIS ಬೆಂಬಲದ 64 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 2 ಮೆಗಾ ಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಸೆನ್ಸರ್‌ ಹೊಂದಿದೆ.

ಇನ್ನುಳಿದಂತೆ ಸೆಲ್ಫಿ ಫೋಟೊ ಹಾಗೂ ವಿಡಿಯೋ ಉದ್ದೇಶಕ್ಕೆ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಅದೇ ರೀತಿ ಈ ಫೋನ್‌ 4500 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದು 44W ವೇಗದ ಚಾರ್ಜಿಂಗ್ ಬೆಂಬಲ ಸೌಲಭ್ಯ ಅನ್ನು ಪಡೆದುಕೊಂಡಿದೆ.

Best Mobiles in India

English summary
iQOO has announced the iQOO Z9 5G India launch date. Specifications and other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+