ಈ ವೇಗದ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಡಿಸ್ಕೌಂಟ್ ಎಷ್ಟು?
ಐಕ್ಯೂ ಸಂಸ್ಥೆಯ ಜನಪ್ರಿಯ ಫೋನ್‌ಗಳಲ್ಲಿ ಒಂದಾದ ಐಕ್ಯೂ ನಿಯೋ 6 (iQOO Neo 6) ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರು ಇದೀಗ ಸಖತ್ ಡಿಸ್ಕೌಂಟ್ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 8GB + 128GB ಮತ್ತು 12GB + 256GB ಸ್ಟೋರೇಜ್ ವೇರಿಯಂಟ್ ಆಗಿವೆ.
ಹೌದು, ಐಕ್ಯೂ ಸಂಸ್ಥೆಯ ಐಕ್ಯೂ ನಿಯೋ 6 (iQOO Neo 6) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ 5,000ರೂ. ಗಳ ಭರ್ಜರಿ ಇಳಿಕೆ ಆಗಿದೆ. ಈ ಫೋನಿನ 8GB + 128GB ಮತ್ತು 12GB + 256GB ಈ ಎರಡು ವೇರಿಯಂಟ್‌ಗಳಲ್ಲಿಯೂ ಬೆಲೆ ಇಳಿಕೆ ಆಗಿದೆ. ಬೆಲೆ ಇಳಿಕೆಯಿಂದಾಗಿ 8GB + 128GB ವೇರಿಯಂಟ್ ಅನ್ನು 24,999ರೂ. ಗಳಿಗೆ ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಅನ್ನು 29,999ರೂ. ಗಳಿಗೆ ಖರೀದಿಸಬಹುದಾಗಿದೆ.

ಅಂದಹಾಗೆ ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಪಡೆದಿದ್ದು, ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಹಾಗೆಯೇ ಇದು 8GB RAM + 128GB ಮತ್ತು 12GB RAM ಹಾಗೂ 256 GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಇನ್ನು ಈ ಫೋನ್ ಸೈಬರ್ ರೇಜ್ ಮತ್ತು ಡಾರ್ಕ್ ನೋವಾ ಬಣ್ಣ ಆಯ್ಕೆಗಳಲ್ಲಿ ಲಭ್ಯ. ಹಾಗಾದರೆ ಐಕ್ಯೂ ನಿಯೋ 6 ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್ 6.62 ಇಂಚಿನ ಫುಲ್ ಹೆಚ್‌ಡಿ ಪ್ಲಸ್ E4 ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ : ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಸಾಮರ್ಥ್ಯವನ್ನ ಹೊಂದಿದೆ. ಇದು ಆಂಡ್ರಾಯ್ಡ್ 12 ಆಧಾರಿತ ಫನ್‌ಟಚ್ OS 12 ನಲ್ಲಿ ರನ್ ಆಗಲಿದೆ. ಇದು 12GB RAM ಮತ್ತು 256 GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇನ್ನು ಈ ಫೋನ್ ಗೇಮಿಂಗ್ ಮಾಡುವಾಗ ಸುಧಾರಿತ ಥರ್ಮಲ್ ಮ್ಯಾನೇಜ್‌ಮೆಂಟ್‌ಗಾಗಿ ಲಿಕ್ವಿಡ್ ಕೂಲಿಂಗ್ ವೇಪರ್ ಚೇಂಬರ್ ಅನ್ನು ಹೊಂದಿದೆ.

ಟ್ರಿಪಲ್ ಕ್ಯಾಮೆರಾ ಸೆನ್ಸಾರ್ : ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ ಐಸೋಸೆಲ್ GW1P ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು : ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W ಫ್ಲ್ಯಾಶ್ ಚಾರ್ಜ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ 5.2, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಜೊತೆಗೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಮ್ಯಾಗ್ನೆಟೋಮೀಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಒಳಗೊಂಡಿದೆ.


Click it and Unblock the Notifications