ಐಕ್ಯೂ ಸಂಸ್ಥೆಯ ಈ ಸ್ಮಾರ್ಟ್‌ಫೋನಿಗೆ ಈಗ ಬೊಂಬಾಟ್ ರಿಯಾಯಿತಿ!
ಜನಪ್ರಿಯ ಐಕ್ಯೂ ಮೊಬೈಲ್ ಸಂಸ್ಥೆಯ ಕೆಲವು ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಸೆಳೆದಿದೆ. ಐಕ್ಯೂ ಸಂಸ್ಥೆಯ ಜನಪ್ರಿಯ ಫೋನ್‌ಗಳ ಲಿಸ್ಟ್‌ನಲ್ಲಿ ಐಕ್ಯೂ ನಿಯೋ 7 ಪ್ರೊ 5G ಫೋನ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಭರ್ಜರಿ ಡಿಸ್ಕೌಂಟ್ ಬೆಲೆಗೆ ಖರೀದಿಗೆ ಲಭ್ಯ ಇದೆ.
ಹೌದು, ಐಕ್ಯೂ ಸಂಸ್ಥೆಯ ಐಕ್ಯೂ ನಿಯೋ 7 ಪ್ರೊ 5G ಮೊಬೈಲ್ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ನಲ್ಲಿ ಶೇ. 29% ರಷ್ಟು ಡಿಸ್ಕೌಂಟ್ ಪಡೆದಿದ್ದು, ಈ ಫೋನ್ 24,999ರೂ. ಗಳ ದರದಲ್ಲಿ ಖರೀದಿಸಬಹುದಾಗಿದೆ. ಇದರೊಂದಿಗೆ ಇನ್ನಷ್ಟು ರಿಯಾಯಿತಿ ಸೌಲಭ್ಯಗಳು ಕೂಡಾ ಖರೀದಿದಾರರಿಗೆ ಲಭ್ಯವಾಗಲಿವೆ.

ಹಾಗೆಯೇ ಐಕ್ಯೂ ನಿಯೋ 7 ಪ್ರೊ 5G ಫೋನ್ ಸ್ನಾಪ್‌ಡ್ರಾಗನ್ 8+ ಜೆನ್ 1 SoC ಪ್ರೊಸೆಸರ್ ಸೌಲಭ್ಯ ಪಡೆದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ. ಹಾಗಾದರೆ ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಡಿಸೈನ್ ಮಾಹಿತಿ
ಐಕ್ಯೂ ನಿಯೋ 7 ಪ್ರೊ 5G ಫೋನ್ 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇಯು 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದ್ದು, ಹಾಗೆಯೇ ಇದು 120Hz ರಿಫ್ರೆಶ್ ರೇಟ್ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಸಾಮರ್ಥ್ಯ ಅನ್ನು ಹೊಂದಿದೆ.

ಪ್ರೊಸೆಸರ್ ಕಾರ್ಯವೈಖರಿ ಯಾವುದು
ಐಕ್ಯೂ ನಿಯೋ 7 ಪ್ರೊ 5G ಫೋನ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 8+ ಜೆನ್ 1 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಈ ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಜೊತೆಗೆ ಕಾರ್ಯ ಮಾಡಲಿದೆ. ಹಾಗೆಯೇ 12GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.
ತ್ರಿವಳಿ ಕ್ಯಾಮೆರಾ ಸೆನ್ಸಾರ್ ಸೌಲಭ್ಯ
ಐಕ್ಯೂ ನಿಯೋ 7 ಪ್ರೊ 5G ಫೋನ್ ಹಿಂಭಾಗದಲ್ಲಿ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿದ್ದು, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೇ ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ
ಐಕ್ಯೂ ನಿಯೋ 7 ಪ್ರೊ 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಈ ಬ್ಯಾಟರಿಗೆ ಪೂರಕವಾಗಿ 120W ಫ್ಲ್ಯಾಶ್ ಚಾರ್ಜಿಂಗ್ ಸೌಲಭ್ಯ ಕೂಡಾ ಇದು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.2, GPS, GNSS, NavIC, ಮತ್ತು USB ಟೈಪ್-C ಪೋರ್ಟ್ ಅನ್ನು ಪಡೆದಿದೆ.
ಮೆಮೊರಿ ಹಾಗೂ ಕಲರ್ ಆಯ್ಕೆ
ಭಾರತದಲ್ಲಿ ಐಕ್ಯೂ ನಿಯೋ 7 ಪ್ರೊ 5G ಫೋನ್ 12GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಈ ಫೋನ್ ಬ್ಲೂ ಹಾಗೂ ಬ್ಕ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿವೆ.


Click it and Unblock the Notifications








