ಅಧಿಕ ವೇಗದ ಈ ಜನಪ್ರಿಯ ಫೋನ್ ಬೆಲೆಯಲ್ಲಿ ಶಾಶ್ವತ ಬೆಲೆ ಇಳಿಕೆ!
ಐಕ್ಯೂ ಸಂಸ್ಥೆಯು ಭಾರತದಲ್ಲಿ ಬರುವ ಫೆಬ್ರವರಿಯಲ್ಲಿ ಐಕ್ಯೂ ನಿಯೋ 9 ಪ್ರೊ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಹೊಸ ಫೋನ್ ಬಿಡುಗಡೆ ಮಾಡುವ ಮೊದಲೇ ಗ್ರಾಹಕರಿಗೆ ಸಖತ್ ಖುಷಿ ಸಂಗತಿ ಹೊರಹಾಕಿದೆ. ಅದು ಏನೆಂದರೆ, ಐಕ್ಯೂ ಸಂಸ್ಥೆಯು ತನ್ನ ಜನಪ್ರಿಯ ಐಕ್ಯೂ ನಿಯೋ 7 5G ಮೊಬೈಲ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ.
ಹೌದು, ಐಕ್ಯೂ ಸಂಸ್ಥೆಯ ತನ್ನ ಐಕ್ಯೂ ನಿಯೋ 7 5G ಮೊಬೈಲ್ ಬೆಲೆಯಲ್ಲಿ ಆಕರ್ಷಕ ಇಳಿಕೆ ತಿಳಿಸಿದೆ. ಈ ಫೋನಿನ 8GB RAM/128GB ಸ್ಟೋರೇಜ್ ವೇರಿಯಂಟ್ ದರದಲ್ಲಿ 3,000ರೂ. ಕಡಿತ ಸಿಗಲಿದೆ. ಅದೇ ರೀತಿ ಐಕ್ಯೂ ನಿಯೋ 7 5G ಫೋನಿನ 12GB RAM/256GB ವೇರಿಯಂಟ್ ಬೆಲೆಯಲ್ಲಿ 4,000ರೂ. ಗಳ ಇಳಿಕೆ ಮಾಡಲಾಗಿದೆ.

ಅಂದಹಾಗೆ ಐಕ್ಯೂ ನಿಯೋ 7 5G ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 5G ಪ್ರೊಸೆಸರ್ ಸೌಲಭ್ಯ ಪಡೆದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ. ಹಾಗಾದರೆ ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಕ್ಯೂ ನಿಯೋ 7 5G ಫೀಚರ್ಸ್‌ನತ್ತ ಒಂದು ಲುಕ್
ಐಕ್ಯೂ ಸಂಸ್ಥೆಯ ಈ ಫೋನ್ 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನ್ 120Hz ರಿಫ್ರೆಶ್ ರೇಟ್ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಸಾಮರ್ಥ್ಯ ಅನ್ನು ಪಡೆದಿದೆ.

ಐಕ್ಯೂ ನಿಯೋ 7 5G ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 5G ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದೆ. ಈ ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಜೊತೆಗೆ ಕಾರ್ಯ ಮಾಡಲಿದೆ. ಹಾಗೆಯೇ 8GB RAM/128GB ಹಾಗೂ 12GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.

ಐಕ್ಯೂ ನಿಯೋ 7 5G ಫೋನ್ ಹಿಂಭಾಗದಲ್ಲಿ ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿದ್ದು, ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ.
ಇದಲ್ಲದೇ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
ಐಕ್ಯೂ ನಿಯೋ 7 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಈ ಬ್ಯಾಟರಿ ಶಕ್ತಿಗೆ ಪೂರಕವಾಗಿ 120W ಫ್ಲ್ಯಾಶ್ ಚಾರ್ಜಿಂಗ್ ಸೌಲಭ್ಯ ಕೂಡಾ ಇದು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.2, GPS, GNSS, NavIC, ಮತ್ತು USB ಟೈಪ್-C ಪೋರ್ಟ್ ಅನ್ನು ಪಡೆದಿದೆ.
ದೇಶಿಯ ಮಾರುಕಟ್ಟೆಯಲ್ಲಿ ಐಕ್ಯೂ ನಿಯೋ 7 5G ಫೋನ್ 8GB RAM/128GB ಹಾಗೂ 12GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಫೋನ್ ಬ್ಲೂ ಹಾಗೂ ಬ್ಕ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿವೆ.


Click it and Unblock the Notifications







