Home
ಸುದ್ದಿಜಾಲ

ಈ ದೈತ್ಯ ಫೋನಿನ ಬೆಲೆಯಲ್ಲಿ ಭಾರೀ ಇಳಿಕೆ!..ಬಿಗ್‌ ಸ್ಟೋರೇಜ್‌ ಸೌಲಭ್ಯ!

ಭಾರತೀಯ ಮಾರುಕಟ್ಟೆಯಲ್ಲಿ ಐಕ್ಯೂ ಮೊಬೈಲ್‌ ಸಂಸ್ಥೆಯು ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ ಪರಿಚಯಿಸಿ ಈಗಾಗಲೇ ನೆಲೆಯೂರಿದೆ. ಆ ಪೈಕಿ ಸಂಸ್ಥೆಯ ಇತ್ತೀಚಿಗಿನ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾದ ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್‌ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಬೊಂಬಾಟ್‌ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.

ಹೌದು, ಅಮೆಜಾನ್ ತಾಣದಲ್ಲಿ ಐಕ್ಯೂ ನಿಯೋ 7 ಪ್ರೊ 5G ಮೊಬೈಲ್ ಶೇ. 16% ರಷ್ಟು ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 12 GB RAM + 256GB ವೇರಿಯಂಟ್‌ ಫೋನ್ 42,999ರೂ. ದರದಲ್ಲಿ ಕಾಣಸಿಕೊಂಡಿದ್ದು, ಆಫರ್‌ನಲ್ಲಿ, ಗ್ರಾಹಕರು ಇದನ್ನು 35,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳಿಂದ ಇತರೆ ಡಿಸ್ಕೌಂಟ್‌ ಸಹ ಲಭ್ಯ.

ಈ ದೈತ್ಯ ಫೋನಿನ ಬೆಲೆಯಲ್ಲಿ ಭಾರೀ ಇಳಿಕೆ!..ಬಿಗ್‌ ಸ್ಟೋರೇಜ್‌ ಸೌಲಭ್ಯ!

ಅಂದಹಾಗೆ ಈ ಫೋನ್‌ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ ಒಳಗೊಂಡಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಇದರ ಜತೆಗೆ ಈ ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ. ಇನ್ನುಳಿದಂತೆ ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್‌ ಹಾಗೂ ರಚನೆ ಹೀಗಿದೆ

ಐಕ್ಯೂ ನಿಯೋ 7 ಪ್ರೊ 5G ಮೊಬೈಲ್‌ 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಡಿಸ್‌ಪ್ಲೇಯು 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದ್ದು, 120Hz ರಿಫ್ರೆಶ್ ರೇಟ್‌ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಈ ದೈತ್ಯ ಫೋನಿನ ಬೆಲೆಯಲ್ಲಿ ಭಾರೀ ಇಳಿಕೆ!..ಬಿಗ್‌ ಸ್ಟೋರೇಜ್‌ ಸೌಲಭ್ಯ!

ಪ್ರೊಸೆಸರ್‌ ಪವರ್ ಯಾವುದು

ಐಕ್ಯೂ ನಿಯೋ 7 ಪ್ರೊ 5G ಮೊಬೈಲ್‌ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256 GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಈ ದೈತ್ಯ ಫೋನಿನ ಬೆಲೆಯಲ್ಲಿ ಭಾರೀ ಇಳಿಕೆ!..ಬಿಗ್‌ ಸ್ಟೋರೇಜ್‌ ಸೌಲಭ್ಯ!

ತ್ರಿವಳಿ ಕ್ಯಾಮೆರಾ ಸೆನ್ಸಾರ್ ಸೌಲಭ್ಯ

ಐಕ್ಯೂ ಸಂಸ್ಥೆಯ ಈ ನಿಯೋ 7 ಪ್ರೊ 5G ಮೊಬೈಲ್‌ ತ್ರಿವಳಿ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದ್ದು, ಸೆಕೆಂಡರಿ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ ಅನ್ನು ಹೊಂದಿದೆ. ಹಾಗೆಯೇ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಪಡೆದಿದೆ. ಇದರೊಂದಿಗೆ 16 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಸೌಲಭ್ಯ ಒಳಗೊಂಡಿದೆ.

ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ

ಈ ಐಕ್ಯೂ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಅನ್ನು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 120W ಫ್ಲ್ಯಾಶ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.2, GPS, GNSS, NavIC, ಮತ್ತು USB ಟೈಪ್-C ಪೋರ್ಟ್ ಸೌಲಭ್ಯ ಪಡೆದುಕೊಂಡಿದೆ.

ಮೆಮೊರಿ ಆಯ್ಕೆ ಹಾಗೂ ಕಲರ್ ಆಯ್ಕೆ

ಐಕ್ಯೂ ಸಂಸ್ಥೆಯ ಈ ನಿಯೋ 7 ಪ್ರೊ 5G ಮೊಬೈಲ್‌ 12 GB RAM + 256GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಅನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ ಫಿಯರ್‌ಲೆಸ್‌ ಫೇಮ್‌ ಹಾಗೂ ಡಾರ್ಕ್ ಸ್ಟ್ರೋಮ್‌ ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
iQOO Neo 7 Pro 5G available big price cut on amazon. check offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+