IQOO: ಐಕ್ಯೂನ ಈ ವಿಶೇಷ ಫೋನ್ ಖರೀದಿಸಿ ಹಣ ಉಳಿಸಿ; 12 GB RAM... ಟ್ರಿಪಲ್ ಕ್ಯಾಮೆರಾ
ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ನಲ್ಲಿ ಐಕ್ಯೂ ಫೋನ್‌ಗಳು (IQOO smartphones) ಇತ್ತೀಚೆಗೆ ಹೆಚ್ಚಿನ ಬೇಡಿಕೆ ಪಡೆಯುತ್ತಿವೆ. ಈ ಫೋನ್‌ಗಳು ಬೆಲೆಗೆ ತಕ್ಕ ವಿಶೇಷ ಫೀಚರ್ಸ್ ಅನ್ನು ನೀಡಲಿದ್ದು, ಈ ನಡುವೆ ಐಕ್ಯೂದ ಬಹು ಬೇಡಿಕೆ ಇರುವ ಫೋನ್‌ಗೆ ಪ್ರಮುಖ ಇ ಕಾಮರ್ಸ್ ಸೈಟ್‌ನಲ್ಲಿ ಅಫರ್ ಘೋಷಣೆ ಮಾಡಲಾಗಿದೆ.
ಹೌದು, ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್‌ಗೆ (IQOO Neo 7 Pro 5G Smartphone) ಇದೀಗ ಆಫರ್ ನೀಡಲಾಗಿದ್ದು, ಈ ಮೂಲಕ ಹಣ ಉಳಿತಾಯ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 12 GB RAM ಆಯ್ಕೆ ಹೊಂದಿದ್ದು, ಬರೋಬ್ಬರಿ 1300 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆಯುವ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಆಫರ್ ವಿವರ ಹಾಗೂ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ನೋಡೋಣ ಬನ್ನಿ.

ಐಕ್ಯೂ ನಿಯೋ 7 ಪ್ರೊ 5G ಆಫರ್ ವಿವರ: ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 42,999 ರೂ.ಗಳಾಗಿದ್ದು, ಆದರೆ ನೀವು ಇದನ್ನು ಈಗ 35,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ (Amazon) ಇದಕ್ಕೆ 16% ರಿಯಾಯಿತಿ ನೀಡಿದೆ. ಇಷ್ಟೇ ಅಲ್ಲದೆ ಕೆಲವು ಬ್ಯಾಂಕ್ ಆಫರ್ ಹಾಗೂ ವಿನಿಮಯ ಆಫರ್ ಸಹ ಇದ್ದು, ಈ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ವಿನಿಮಯ ಆಫರ್ ಮೂಲಕ ಖರೀದಿ ಮಾಡಿದ್ರೆ ಬರೋಬ್ಬರಿ 29,550ರೂ. ವರೆಗೆ ಉಳಿತಾಯ ಮಾಡಬಹುದಾಗಿದೆ. ಹಾಗೆಯೇ ಬ್ಯಾಂಕ್ ಆಫರ್‌ನಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 1500ರೂ. ತ್ವರಿತ ರಿಯಾಯಿತಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 1500ರೂ. ತ್ವರಿತ ರಿಯಾಯಿತಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 875ರೂ. ತ್ವರಿತ ರಿಯಾಯಿತಿ ಸಿಗಲಿದೆ.

ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಫೋನ್‌ನ ಬೆಲೆಯನ್ನೇನೋ ತಿಳಿದುಕೊಂಡಿರಿ. ಆದರೆ ಈ ಬೆಲೆಗೆ ಈ ಫೋನ್ ಯೋಗ್ಯವೇ ಎಂದು ಕಂಡುಕೊಳ್ಳಲು ಇದರ ಪ್ರಮುಖ ಫೀಚರ್ಸ್ ಕಡೆ ಕಣ್ಣಾಯಿಸುವುದು ಅಗತ್ಯವಾಗಿದೆ. ಅದರಂತೆ ಈ ಫೋನ್ 6.78 ಇಂಚಿನ ಅಮೋಲೆಡ್ FHD+ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಜೊತೆಗೆ 120Hz ರಿಫ್ರೆಶ್ ರೇಟ್ ಹಾಗೂ 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಈ ಫೋನ್ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ.
ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಇನ್ನು ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಈ ಪ್ರೊಸೆಸರ್ 1.3Mn+ AnTuTu ಸ್ಕೋರ್ ಹೊಂದಿದ್ದು, ಈ ಮೂಲಕ ನೀವು ಗೇಮಿಂಗ್ ಹಾಗೂ ಇತರೆ ಕಾರ್ಯದಲ್ಲಿ ಯಾವುದೇ ಅಡೆತಡೆ ಅನುಭವಗಳನ್ನು ಎದುರಿಸಬೇಕಾಗಿಲ್ಲ. ಹಾಗೆಯೇ 12 GB RAM ಹಾಗೂ 256GB ಇಂಟರ್ ಸ್ಟೋರೇಜ್ ಸೌಲಭ್ಯ ಈ ಫೋನ್‌ನಲ್ಲಿದೆ.
ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 8MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ, ಆಟೋಫೋಕಸ್‌ನೊಂದಿಗೆ 2MP ಮ್ಯಾಕ್ರೋ ಕ್ಯಾಮೆರಾ ಮತ್ತು 50MP ಮುಖ್ಯ ಕ್ಯಾಮೆರಾ ಇದೆ. ಇದರೊಂದಿಗೆ 16MP ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಈ ಸೆನ್ಸರ್‌ಗಳು ನೈಟ್ ಮೋಡ್, ಪೋರ್ಟ್ರೇಟ್ ಮೋಡ್, ಪನೋರಮಾ, ಸ್ಲೋ ಮೋಟಿಯೋ ಮತ್ತು ಟೈಮ್ ಲ್ಯಾಪ್ಸ್ ಸೇರಿದಂತೆ ಹಲವಾರು ಮೋಡ್‌ಗಳು ಮತ್ತು ಸೆಟ್ಟಿಂಗ್‌ಗಳೊಂದಿಗೆ ಕಾಣಿಸಿಕೊಂಡಿವೆ.

ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ: ಈ ವಿಶೇಷ ಫೋನ್ ಬರೋಬ್ಬರಿ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 120W ಫ್ಲ್ಯಾಶ್ ಚಾರ್ಜಿಂಗ್ ಅನ್ನು ಬೆಂಬಲಿಸಲಾಗುತ್ತದೆ. ಈ ಮೂಲಕ ಕ್ಷಣ ಮಾತ್ರದಲ್ಲಿ ಈ ಫೋನ್ ಬ್ಯಾಟರಿ ಭರ್ತಿಯಾಗುತ್ತದೆ. ಹಾಗೆಯೇ ನಿರಂತರವಾಗಿ ಬಳಕೆ ಮಾಡಿದ್ರೂ ಸಹ ದೀರ್ಘಾವಧಿ ಬ್ಯಾಕಪ್ ಅನ್ನು ಈ ಫೋನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








