ಐಕ್ಯೂ ನಿಯೋ 7 ಪ್ರೊ ಲಾಂಚ್‌ಗೆ ದಿನಗಣನೆ: ಫೀಚರ್ಸ್ ಏನಿರಲಿವೆ?
ಐಕ್ಯೂ ಸ್ಮಾರ್ಟ್‌ಫೋನ್‌ಗಳು ತಮ್ಮ ಬೆಲೆ ಹಾಗೂ ಕ್ಯಾಮೆರಾ, ಪ್ರೊಸೆಸರ್ ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿರುತ್ತದೆ. ಈ ನಡುವೆ ಸಾಕಷ್ಟು ಐಕ್ಯೂ ಫೋನ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ತಮ್ಮದೇ ಆದ ಬೇಡಿಕೆ ನಿರ್ಮಾಣ ಮಾಡಿಕೊಂಡಿದ್ದು, ಈ ನಡುವೆ ಮತ್ತೊಂದು ಫೋನ್ ಅನ್ನು ಅನಾವರಣ ಮಾಡಲು ಐಕ್ಯೂ ಮುಂದಾಗಿದೆ. ಈ ಫೋನ್‌ನ ಕೆಲವು ಫೀಚರ್ಸ್ ಈಗಾಗಲೇ ಲೀಕ್ ಆಗಿವೆ.
ಹೌದು,ಐಕ್ಯೂ ತನ್ನ ಹೊಸ ನಿಯೋ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.ಈ ಮೂಲಕ ಶೀಘ್ರದಲ್ಲೇ ನೀವು ಐಕ್ಯೂ ನಿಯೋ 7 ಪ್ರೊ (iQoo Neo 7 Pro) ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಬಹುದು. ಈ ಫೋನ್ ಚಿತ್ರವನ್ನು ಐಕ್ಯೂನ ಭಾರತದ ಮುಖ್ಯಸ್ಥ ನಿಪುನ್ ಮರಿಯಾ ಅವರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕnಕೆಲವು ವಿಚಾರಗಳು ತಿಳಿದು ಬಂದಿವೆ.ಹಾಗಿದ್ರೆ,ಬನ್ನಿ ಈ ಫೋನ್‌ನ ಲೀಕ್ ಆದ ಫೀಚರ್ಸ್ ಬಗ್ಗೆ ತಿಳಿಯೋಣ.

ಐಕ್ಯೂ ನಿಯೋ 7 ಪ್ರೊ ಡಿಸ್‌ಪ್ಲೇ ವಿವರ: ನಿಪುನ್ ಮರಿಯಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಫೋಟೋಗೆ #ಸ್ಟೇ ಟ್ಯೂನ್ #ಪವರ್ ಟುವಿನ್ ಎಂದು ಶೀರ್ಷಿಕೆ ನೀಡಿದ್ದು, ಈ ಮೂಲಕ ಐಕ್ಯೂ ನಿಯೋ 7 ಪ್ರೊ ಮರುಬ್ರಾಂಡೆಡ್ ಆವೃತ್ತಿಯಾಗಿರಲಿದೆ ಎಂದು ತೋರುತ್ತಿದೆ. ಅದರಂತೆ ಈ ಫೋನ್ 6.78 ಇಂಚಿನ FHD+ ಸ್ಯಾಮ್‌ಸಂಗ್ E5 ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದ್ದು, 120Hz ರಿಫ್ರೆಶ್ ರೇಟ್ ಹೊಂದಿದೆ ಎಂದು ಹೇಳಲಾಗುತ್ತದೆ.

ಐಕ್ಯೂ ನಿಯೋ 7 ಪ್ರೊ ಪ್ರೊಸೆಸರ್ ಯಾವುದಿರಬಹುದು?: ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, 8GB RAM ಹಾಗೂ 256GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಮತ್ತು 12GBRAM ಹಾಗೂ 256GB ಇಂಟರ್ ಸ್ಟೋರೇಜ್‌ನ ಎರಡು ವೇರಿಯಂಟ್‌ನಲ್ಲಿ ಈ ಫೋನ್ ಕಾಣಿಸಿಕೊಳ್ಳಲಿದೆ ಎಂದು ನಂಬಲಾಗಿದೆ.
ಐಕ್ಯೂ ನಿಯೋ 7 ಪ್ರೊ ಕ್ಯಾಮೆರಾ ರಚನೆ ಹೇಗಿರಲಿದೆ? : ಇದರ ಕ್ಯಾಮೆರಾ ವಿಷಯಕ್ಕೆ ಬಂದರೆ ಈ ಫೋನ್ OIS ಜೊತೆಗೆ ಸ್ಯಾಮ್‌ಸಂಗ್ GN5 ಸೆನ್ಸರ್ ಆಯ್ಕೆಯ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿರಲಿದೆ ಎಂಬ ವದಂತಿಗಳಿವೆ. ಇದರೊಂದಿಗೆ ಈ ಫೋನ್ ಡ್ಯುಯಲ್ ಕ್ಯಾಮೆರಾ ಹೊಂದಿರಲಿದೆಯೋ ಅಥವಾ ಟ್ರಿಪಲ್ ಕ್ಯಾಮೆರಾ ಹೊಂದಿರಲಿದೆಯೋ ಎಂಬ ಮಾಹಿತಿ ತಿಳಿದುಬಂದಿಲ್ಲ. ಜೊತೆಗೆ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAhಸಾಮರ್ಥ್ಯದ ಬ್ಯಾಟರಿಯಿಂದ ಬೆಂಬಲಿತವಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನುಳಿದಂತೆ ಐಕ್ಯೂ ಐಕ್ಯೂ ಇತ್ತೀಚೆಗೆ ಐಕ್ಯೂ Z7s 5G ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಮೂಲಕ ಐಕ್ಯೂ 5G ಸ್ಮಾರ್ಟ್‌ಫೋನ್‌ಗಳ ಶ್ರೇಣಿಯನ್ನು ವಿಸ್ತರಣೆ ಮಾಡಿಕೊಂಡಿದ್ದು, ಕ್ವಾಲ್ಕಾಮ್ ಚಿಪ್‌ಸೆಟ್‌ನ ಬಲ ಪಡೆದಿಕೊಂಡಿದೆ. ಜೊತೆಗೆ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗಲಿದೆ. ಇನ್ನು FHD + ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 4,500 mAh ಸಾಮರ್ಥ್ಯದ ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಈ ಫೋನ್‌ನಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಇದರಲ್ಲಿದ್ದು, ಇದು ಕಂಪನಿಯ ಸ್ವಂತ ಲೇಯರ್ ಫನ್‌ಟಚ್ ಓಎಸ್ 13 ಮೂಲಕ ಅಗ್ರಸ್ಥಾನದಲ್ಲಿದೆ. ಜೊತೆಗೆ ಈ ಫೋನ್‌ಗೆ 2 ವರ್ಷಗಳವರೆಗೆ ಆಂಡ್ರಾಯ್ಡ್ ನವೀಕರಣಗಳು ಮತ್ತು 3 ವರ್ಷಗಳ ಮಾಸಿಕ ಭದ್ರತಾ ಪ್ಯಾಚ್ ನವೀಕರಣಗಳನ್ನು ಸಹ ನೀಡಲಾಗುತ್ತಿದೆ. ಈ ಕಾರಣಕ್ಕೆ ಈಗಾಗಲೇ ಈ ಫೋನ್‌ಗೆ ಜನರು ಮುಗಿಬಿದಿದ್ದಾರೆ.


Click it and Unblock the Notifications








