Home
ಸುದ್ದಿಜಾಲ

iQOO Neo 7 vs Nothing Phone 1 : ಐಕ್ಯೂ ನಿಯೋ 7 v/s ನಥಿಂಗ್ ಫೋನ್ (1) ; ಭಿನ್ನತೆ ಏನು?: ಯಾವುದು ಉತ್ತಮ?

ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಎಲ್ಲಾ ಫೋನ್‌ಗಳು ಭಿನ್ನ ಫೀಚರ್ಸ್‌ಗಳನ್ನು ಪಡೆದುಕೊಂಡು ಖರೀದಿ ಮಾಡಲು ಗ್ರಾಹಕರಿಗೆ ವಿವಿಧ ಆಯ್ಕೆಗಳನ್ನು ನೀಡುತ್ತವೆ. ಅದಾಗ್ಯೂ ಇತ್ತೀಚೆಗೆ ಲಾಂಚ್‌ ಆಗಿರುವ ಮಿಡ್‌ ರೇಂಜ್‌ ಫೋನ್ ಆದ ಐಕ್ಯೂ ನಿಯೋ 7 ಹಾಗೂ ನಥಿಂಗ್ ಫೋನ್ (1) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಗ್ರಾಹಕರು ಈ ಎರಡು ಸ್ಮಾರ್ಟ್‌ಫೋನ್‌ನಲ್ಲಿ ಯಾವುದು ಬೆಸ್ಟ್‌?, ಯಾವ ಫೋನ್‌ ತೆಗೆದುಕೊಂಡರೆ ಏನೆಲ್ಲಾ ಪ್ರಯೋಜನ ಎಂಬ ಗೊಂದಲ್ಲಿದ್ದಾರೆ.

ಐಕ್ಯೂ ನಿಯೋ 7 v/s ನಥಿಂಗ್ ಫೋನ್ (1) ; ಭಿನ್ನತೆ ಏನು?: ಯಾವುದು ಉತ್ತಮ?

ಹೌದು, ನೀವೇನಾದರೂ 30,000 ರೂ.ಗಳ ಬೆಲೆಯ ಮಿಡ್‌ ರೇಂಜ್‌ 5G ಫೋನ್‌ ಖರೀದಿ ಮಾಡಲು ಮುಂದಾಗಿದ್ದರೆ, ಅದರಲ್ಲೂ ಐಕ್ಯೂ ನಿಯೋ 7 ಅಥವಾ ನಥಿಂಗ್ ಫೋನ್ (1) ನಲ್ಲಿ ಯಾವ ಫೋನ್‌ ಅನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಇಲ್ಲಿ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಭಿನ್ನತೆ, ಬೆಲೆ ಮತ್ತು ಫೀಚರ್ಸ್‌ಗಳನ್ನು ತಾಳೆ ಹಾಕಿ ಮಾಹಿತಿ ನೀಡಲಾಗಿದೆ ಓದಿರಿ.

ಐಕ್ಯೂ ನಿಯೋ 7 ಹಾಗೂ ನಥಿಂಗ್ ಫೋನ್ (1) ನ ವಿನ್ಯಾಸ

ಸಾಮಾನ್ಯವಾಗಿ ಫೀಚರ್ಸ್‌ ಹಾಗೂ ಇನ್ನಿತರೆ ವಿಷಯಗಳಿಗೆ ಗಮನಹರಿಸುವುದಕ್ಕಿಂತ ಮೊದಲು ಗ್ರಾಹಕರು ವಿನ್ಯಾಸಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅದರಂತೆ ನಥಿಂಗ್ ಫೋನ್ (1) ಫೋನ್‌ರಿಯರ್‌ ಪ್ಯಾನೆಲ್‌ನಲ್ಲಿ ಎಲ್‌ಇಡಿ ಸ್ಟ್ರಿಪ್‌ಗಳನ್ನು ಅಳವಡಿಸಲಾಗಿದ್ದು, ಕರೆ ಅಥವಾ ನೋಟಿಫೀಕೇಶನ್‌ ಬಂದರೆ ಅದು ಹೊಳೆಯುತ್ತದೆ. ಹಾಗೆಯೇ ಅರೆ-ಪಾರದರ್ಶಕ ವಿನ್ಯಾಸ ಫೋನ್‌ ಅನ್ನು ಇನ್ನಷ್ಟು ಹೆಚ್ಚಿಗೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಇನ್ನು ಐಕ್ಯೂ ನಿಯೋ 7 ಫೋನ್‌ ವಿಚಾರಕ್ಕೆ ಬಂದರೆ ಸ್ಲಿಪರಿ ಬ್ಯಾಕ್ ಪ್ಯಾನೆಲ್ ಆಯ್ಕೆ ಪಡೆದುಕೊಂಡಿರುವ ಈ ಫೋನ್‌ ಹಗುರವಾಗಿದ್ದು, ನಾಲ್ಕು ಬದಿಯಲ್ಲಿ ಕರ್ವ್ಡ ಶೈಲಿ ಪಡೆದುಕೊಂಡಿದೆ. ಜೊತೆಗೆ ಫೋನ್‌ಅನ್ನು ಮೃದುವಾಗಿ ಹಿಡಿದುಕೊಳ್ಳಲು ಅಥವಾ ಬಳಕೆ ಮಾಡಲು ವಿಶೇಷ ಎನಿಸುತ್ತದೆ. ಇದರೊಂದಿಗೆ ಈ ಎರಡೂ ಫೋನ್‌ಗಳು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಪಡೆದುಕೊಂಡಿದ್ದು, ಸ್ಟೀರಿಯೋ ಸ್ಪೀಕರ್‌ಗಳ ಆಯ್ಕೆ ಸಹ ಒಂದೇ ಶೈಲಿಯಾಗಿವೆ.

ಐಕ್ಯೂ ನಿಯೋ 7 ಹಾಗೂ ನಥಿಂಗ್ ಫೋನ್ (1) ಡಿಸ್‌ಪ್ಲೇ ವಿವರ

ನಥಿಂಗ್ ಫೋನ್ (1) 6.55 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಐಕ್ಯೂ ಫೋನ್‌ 6.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಈ ಎರಡೂ ಫೋನ್‌ಗಳು 120Hz ರಿಫ್ರೆಶ್‌ ರೇಟ್ ಆಯ್ಕೆ ಹೊಂದಿದ್ದು, HDR 10+ ಗೆ ಬೆಂಬಲ ನೀಡಲಿವೆ. ಆದರೂ ಬ್ರೈಟ್‌ನೆಸ್‌ ವಿಚಾರಕ್ಕೆ ಬಂದರೆ ಐಕ್ಯೂ ಫೋನ್ ಕೊಂಚ ಹೆಚ್ಚಿನ ಬ್ರೈಟ್‌ನೆಸ್‌ ನೀಡಲಿದೆ. ಅಂದರೆ ಐಕ್ಯೂ ನಿಯೋ 1,300nits ಬ್ರೈಟ್‌ನೆಸ್‌ ಹೊಂದಿದ್ದರೆ ನಥಿಂಗ್ ಫೋನ್‌ 1,200 nits ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ.

ಐಕ್ಯೂ ನಿಯೋ 7 v/s ನಥಿಂಗ್ ಫೋನ್ (1) ; ಭಿನ್ನತೆ ಏನು?: ಯಾವುದು ಉತ್ತಮ?

ಐಕ್ಯೂ ನಿಯೋ 7 ಹಾಗೂ ನಥಿಂಗ್ ಫೋನ್ (1)ರ ಪ್ರೊಸೆಸರ್‌ ವಿವರ

ಎರಡೂ 5G ಫೋನ್‌ಗಳಾಗಿದ್ದು, ಒಂದೇ ಕಾರ್ಯಕ್ಷಮತೆಯನ್ನು ಪಡೆದಿವೆ ಎನ್ನಬಹುದಾಗಿದ್ದರೂ ಐಕ್ಯೂನ ಗೇಮಿಂಗ್ ಕಾರ್ಯಕ್ಷಮತೆ ಸ್ವಲ್ಪ ಹೆಚ್ಚಿದೆ ಎನ್ನಬಹುದು. ಅದರಂತೆ ಐಕ್ಯೂ ನಿಯೋ 7 ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ನಿಂದ ಕಾರ್ಯನಿರ್ವಹಿಸಿದರೆ ನಥಿಂಗ್ ಫೋನ್ (1) ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಐಕ್ಯೂ ಫೋನ್ 12GB RAM ಮತ್ತು 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ನಥಿಂಗ್ ಫೋನ್ (1) 8 GB RAM ಹಾಗೂ 128 GB ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

ಐಕ್ಯೂ ನಿಯೋ 7, ನಥಿಂಗ್ ಫೋನ್ (1) ಕ್ಯಾಮೆರಾ ಮಾಹಿತಿ

ಐಕ್ಯೂ ನಿಯೋ 7 ಉತ್ತಮವಾದ ಪೋರ್ಟ್ರೇಟ್ ಶಾಟ್‌ಗಳನ್ನು ತೆಗೆಯಲು ಅನುಕೂಲ ಮಾಡಿಕೊಡಲಿದ್ದು, ಇದಕ್ಕಾಗಿ ಈ ಫೋನ್‌ ಮ್ಯಾಕ್ರೋ ಮತ್ತು ಬೊಕೆ ಲೆನ್ಸ್ ಜೊತೆಗೆ 64MP ಮುಖ್ಯ ಕ್ಯಾಮೆರಾ ಹಾಗೂ 2 MP ಮ್ಯಾಕ್ರೋ ಮತ್ತು 2 MP ಡೆಪ್ತ ಸೆನ್ಸರ್‌ ಆಯ್ಕೆ ಪಡೆಯುವ ಮೂಲಕ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದೆ. ಇದರೊಂದಿಗೆ ಚರ್ಮದ ಟೋನ್, ಬಟ್ಟೆಗಳ ಮೇಲಿನ ಟೆಕಶ್ಚರ್‌ ಅನ್ನು ಈ ಕ್ಯಾಮೆರಾ ಚೆನ್ನಾಗಿ ಗ್ರಹಿಸುತ್ತದೆ. ಆದರೆ, ಸೂರ್ಯನ ಬೆಳಕಿನಲ್ಲಿ ಗ್ರೂಪ್‌ ಶಾಟ್‌ಗಳಿಗೆ ಅಷ್ಟೊಂದು ಬೆಂಬಲ ನೀಡುವುದಿಲ್ಲ ಎನ್ನುವ ವಿಷಯ ಸಹ ನಿಮ್ಮ ಗಮನಕ್ಕಿರಲಿ.

ನಥಿಂಗ್ ಫೋನ್ (1) ವಿಚಾರಕ್ಕೆ ಬಂದರೆ ಈ ಫೋನ್‌ 50 MP + 50 MP ನ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅತ್ಯುತ್ತಮವಾದ ಫೋಟೋಗಳನ್ನು ತೆಗೆಯಬಹುದು. ಅದಾಗ್ಯೂ ಇದು ಮಿಡ್‌ರೇಂಜ್‌ ಫೋನ್ ಆಗಿರುವುದರಿಂದ ಇನ್ನೂ ಹೆಚ್ಚಿನ ಅತ್ಯುತ್ತಮ ಮಟ್ಟದ ತೀಕ್ಷ್ಣತೆಯೊಂದಿಗೆ ಹೆಚ್ಚು ವಿವರವಾದ ಶಾಟ್ ಪಡೆಯಲು ನಿರೀಕ್ಷಿಸಬೇಡಿ. ಇನ್ನು ಕೆಲವು ಶಾಟ್‌ಗಳಲ್ಲಿ ಬಣ್ಣಗಳು ಸ್ವಲ್ಪ ಸ್ಯಾಚುರೇಟೆಡ್ ಆಗಿರುತ್ತವೆ. ಹೀಗಾಗಿ ಕೆಲವು ಸಮಯದಲ್ಲಿ ಕೃತಕವಾಗಿ ಕಾಣುವ ಚಿತ್ರಗಳು ಇಷ್ಟವಾಗದೆ ಇರಬಹುದು.

ಐಕ್ಯೂ ನಿಯೋ 7 v/s ನಥಿಂಗ್ ಫೋನ್ (1) ; ಭಿನ್ನತೆ ಏನು?: ಯಾವುದು ಉತ್ತಮ?

ಐಕ್ಯೂ ನಿಯೋ 7 ಹಾಗೂ ನಥಿಂಗ್ ಫೋನ್ (1) ಬ್ಯಾಟರಿ ಸಾಮರ್ಥ್ಯ

ಐಕ್ಯೂ ನಿಯೋ 7 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದು 120W ವೇಗದ ಚಾರ್ಜರ್‌ಗೆ ಬೆಂಬಲಿಸುತ್ತದೆ. ಹಾಗೆಯೇ ನಥಿಂಗ್ ಫೋನ್ (1) ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದು 33W ಚಾರ್ಜರ್‌ಗೆ ಬೆಂಬಲ ನೀಡುತ್ತದೆ. ಈ ವಿಷಯದಲ್ಲಿ ಐಕ್ಯೂ ಫೋನ್‌ ನಥಿಂಗ್‌ ಫೋನ್‌ಗಿಂತ ಒಂದು ಕೈ ಮೇಲಿದೆ ಎಂದು ಹೇಳಬಹುದು.

ಈ ಫೋನ್‌ಗಳ ಬೆಲೆ ಎಷ್ಟು?

ಭಾರತದಲ್ಲಿ ಐಕ್ಯೂ ನಿಯೋ 7 29,999 ರೂ.ಗಳ ಬೆಲೆ ಹೊಂದಿದ್ದರೆ, ನಥಿಂಗ್ ಫೋನ್ (1) 27,999 ರೂ. ಗಳ ಆಫರ್‌ ಬೆಲೆ ಪಡೆದುಕೊಂಡಿದೆ. ಈ ಫೋನ್‌ಗಳನ್ನು ಇನ್ನಷ್ಟು ಆಫರ್‌ ಬೆಲೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಮೂಲಕ ಖರೀದಿ ಮಾಡಬಹುದು.

ಐಕ್ಯೂ ನಿಯೋ 7 v/s ನಥಿಂಗ್ ಫೋನ್ (1) ; ಭಿನ್ನತೆ ಏನು?: ಯಾವುದು ಉತ್ತಮ?

ಹಾಗಿದ್ರೆ, ಇವೆರಡರಲ್ಲಿ ಯಾವುದು ಬೆಸ್ಟ್‌ ?

ಎರಡೂ ಫೋನ್‌ಗಳು ಸಹ ವಿವಿಧ ಫೀಚರ್ಸ್‌ಗಳ ಮೂಲಕ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ 5G ಫೋನ್‌ಗಳು ವಿಭಿನ್ನ ರೀತಿಯಲ್ಲಿ ಉತ್ತಮ ಅನುಭವ ಮತ್ತು ಮೌಲ್ಯವನ್ನು ನೀಡಲಿವೆ. ಬ್ಯಾಟರಿ ಹಾಗೂ ಉತ್ತಮ ಕಾರ್ಯಕ್ಷಮತೆಗೆ ಕೆಂದ್ರೀಕರಿಸುವವರು ಐಕ್ಯೂ ನಿಯೋ ಖರೀದಿ ಮಾಡಬಹುದು. ಹಾಗೆಯೇ ಕ್ಲೀನ್ ಯೂಸರ್ ಇಂಟರ್‌ಫೇಸ್, ದೀರ್ಘಾವಧಿಯ ಆಂಡ್ರಾಯ್ಡ್ ಸಾಫ್ಟ್‌ವೇರ್ ಬೆಂಬಲ, ವಿನ್ಯಾಸ, ಉತ್ತಮ ಕ್ಯಾಮೆರಾ ವಿಷಯಗಳಿಗೆ ಕೇಂದ್ರೀಕರಿಸುವವರು ನಥಿಂಗ್‌ ಫೋನ್‌ ಖರೀದಿ ಮಾಡಬಹುದು.

Best Mobiles in India

English summary
iQOO Neo 7 has been launched in India and it will get tough competition from the Nothing Phone (1).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+