Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿದೆ ಐಕ್ಯೂ ನಿಯೋ 8: ಏನೆಲ್ಲಾ ಫೀಚರ್ಸ್‌ ಹೊಂದಿರಲಿದೆ!?

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಐಕ್ಯೂ ಸ್ಮಾರ್ಟ್‌ಫೋನ್‌ಗಳು ಇತ್ತೀಚೆಗೆ ಭಾರೀ ಜನಮನ್ನಣೆ ಪಡೆದುಕೊಳ್ಳುತ್ತಿವೆ. ಇದರ ನಡುವೆ ಐಕ್ಯೂ ಹೊಸ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲು ಮುಂದಾಗಿದ್ದು, ಈ ಫೋನ್‌ ಲಾಂಚ್‌ ಆಗುವ ಮುನ್ನವೇ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಾಗೆಯೇ ಇದರ ವಿವಿಧ ಫೀಚರ್ಸ್‌ಗಳು ಜನರನ್ನು ಆಕರ್ಷಿಸುತ್ತಿವೆ.

ಹೌದು, ಐಕ್ಯೂ ನಿಯೋ 8(iQOO Neo 8)ಸ್ಮಾರ್ಟ್‌ಫೋನ್‌ ಅನ್ನು ಇದೇ ತಿಂಗಳ ಅಂತ್ಯದಲ್ಲಿ ಲಾಂಚ್‌ ಮಾಡಲಾಗುತ್ತಿದ್ದು, ಇದು ಅನಾವರಣ ಆಗುವ ಮುನ್ನವೇ ಮುನ್ನೆಲೆಗೆ ಬಂದಿದೆ. ಅದರಂತೆ ಈ ಫೋನ್ ಸ್ನಾಪ್‌ಡ್ರಾಗನ್ 8+ಜನ್ 1 ಚಿಪ್ ಬಲ ಪಡೆದುಕೊಳ್ಳುವ ಸಾಧ್ಯತೆ ಇರಲಿದ್ದು, ನಿಯೋ7 ಸ್ಮಾರ್ಟ್‌ಫೋನ್‌ನ ಉತ್ತರಾಧಿಕಾರಿಯಾಗಿ ಗುರುತಿಸಿಕೊಳ್ಳಲಿದೆ. ಇದರೊಂದಿಗೆ ಪ್ರೊ ವೇರಿಯಂಟ್‌ ಅನ್ನು ಸಹ ಲಾಂಚ್‌ ಮಾಡಲಾಗುತ್ತದೆ ಎನ್ನಲಾಗಿದೆ. ಹಾಗಿದ್ರೆ, ಬನ್ನಿ ಇದರ ನಿರೀಕ್ಷಿತ ಫೀಚರ್ಸ್ ಹಾಗೂ ಬೆಲೆ ವಿವರವನ್ನು ತಿಳಿದುಕೊಳ್ಳೋಣ.

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿದೆ ಐಕ್ಯೂ ನಿಯೋ 8...

ಐಕ್ಯೂ ನಿಯೋ 8 ಡಿಸ್‌ಪ್ಲೇ ವಿವರ: ಟಿಪ್‌ಸ್ಟರ್ ಮಾಹಿತಿ ಪ್ರಕಾರ ಐಕ್ಯೂ ನಿಯೋ 8 ಫೋನ್‌ ಡಿಸ್‌ಪ್ಲೇ ಗಾತ್ರದ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಆದರೂ ಕಂಪನಿಯು ಹಳೆಯ ಫೋನ್‌ನ ಡಿಸ್‌ಪ್ಲೇ ಗಾತ್ರವನ್ನೇ ಮುಂದುವರೆಸಿದ್ದೇ ಆದರೆ ಈ ಫೋನ್‌ ಸಹ 6.78 ಇಂಚಿನ ಅಮೋಲೆಡ್‌ ಪ್ಯಾನೆಲ್ ಅನ್ನು ಪಡೆದುಕೊಳ್ಳಲಿದೆ. ಇದರೊಂದಿಗೆ ಹೆಚ್ಚಿನ ಆವರ್ತನದ PWM ಡಿಮ್ಮಿಂಗ್‌ಗೆ ಬೆಂಬಲವನ್ನು ಹೊಂದಿರುತ್ತದೆ ಎನ್ನಲಾಗಿದೆ.

ಐಕ್ಯೂ ನಿಯೋ 8 ಪ್ರೊಸೆಸರ್‌ ಯಾವುದು?:ಐಕ್ಯೂ ನಿಯೋ 8 ಫೋನ್‌ಗಳಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್‌ ಇರಲಿದೆ ಎಂದು ಹೇಳಲಾಗುತ್ತಿದೆ. ಅದಾಗ್ಯೂ ಮತ್ತೊಂದು ಕಡೆ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 8+ಜನ್‌ 1SoC ಪ್ರೊಸೆಸರ್‌ ಅನ್ನು ಸಹ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಈ ಫೋನ್ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಅದರಲ್ಲಿ ಪ್ರಮುಖವಾಗಿ 16GBRAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಗಮನಸೆಳೆಯಲಿದೆ.

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿದೆ ಐಕ್ಯೂ ನಿಯೋ 8...

ಐಕ್ಯೂ ನಿಯೋ 8 ಕ್ಯಾಮೆರಾ ರಚನೆ :ಈ ಮುಂಬರುವ ವಿಶೇಷ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಟಿಪ್‌ಸ್ಟರ್ ತಿಳಿಸಿದೆ. ಜೊತೆಗೆ ನಿಯೋ 8 ಪ್ರೊ 1/1.5 ಇಂಚಿನ ಕ್ಯಾಮೆರಾ ಸೆನ್ಸರ್‌ ಆಯ್ಕೆ ಹೊಂದಿರಲಿದೆ ಎಂದು ಉಲ್ಲೇಖ ಮಾಡಲಾಗಿದೆ. ಅದಾಗ್ಯೂ ಈ ಕ್ಯಾಮೆರಾ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

ಐಕ್ಯೂ ನಿಯೋ 8 ಬ್ಯಾಟರಿ ಸಾಮರ್ಥ್ಯ: ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿರಲಿದ್ದು, ಇದು 120W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ ಎಂದು ತಿಳಿದುಬಂದಿದೆ. ಆದರೂ ಇದು ನಿಖರವಲ್ಲ. ಆದರೆ, ಈ ಹಿಂದಿನ ಸರಣಿಯಲ್ಲಿ ಇದೇ ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದ್ದಿದ್ದರಿಂದ ಈ ಫೋನ್‌ ಸಹ ಇದೇ ಬ್ಯಾಟರಿ ಹೊಂದಿರಬಹುದು ಎಂದು ಊಹಿಸಲಾಗಿದೆ.

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿದೆ ಐಕ್ಯೂ ನಿಯೋ 8...

ಐಕ್ಯೂ ನಿಯೋ 8 ಬೆಲೆ ಹಾಗೂ ಲಭ್ಯತೆ: ಸೋರಿಕೆಯಾದ ಮಾಹಿತಿ ಪ್ರಕಾರ ಈ ಫೋನ್ 39,999ರೂ. ಗಳ ಆರಂಭಿಕ ಬೆಲೆ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಈ ಮೂಲಕ ಒನ್‌ಪ್ಲಸ್‌ ಹಾಗೂ ಇನ್ನಿತರೆ ಪ್ರಮುಖ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡಲಿದೆ ಎಂದು ತೋರುತ್ತದೆ. ಈ ಎಲ್ಲಾ ವಿಶೇ‍ಷ ಫೀಚರ್ಸ್‌ ಇರುವ ಫೋನ್‌ ಅನ್ನು ನಾವು 2023 ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ನೋಡಬಹುದು. ಹಾಗೆಯೇ ಚೀನಾದಲ್ಲಿ ಮೇ 23 ರಂದು ಬಿಡುಗಡೆಯಾಗಲಿದೆ.

Best Mobiles in India

English summary
The iQOO Neo 8 smartphone is being launched at the end of this month and this phone has come to the fore even before its unveiling. Also, this phone is likely to be powered by Snapdragon 8+ Gen 1 chip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+