ಶೀಘ್ರದಲ್ಲೇ ಐಕ್ಯೂ ನಿಯೋ 8 ಸ್ಮಾರ್ಟ್‌ಫೋನ್ ಲಾಂಚ್; ಫೀಚರ್ಸ್ ಏನಿರಬಹುದು!?
ಐಕ್ಯೂ ಕಂಪೆನಿಯು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹಾಗೂ ಸುಧಾರಿತ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಇವುಗಳಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಈ ನಡುವೆ ಐಕ್ಯೂ ಹೊಸ ಆಕರ್ಷಕ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದ್ದು, ಫೀಚರ್ಸ್ ಲೀಕ್ ಆಗಿವೆ.
ಹೌದು, ಐಕ್ಯೂ ಶೀಘ್ರದಲ್ಲೇ ಹೊಸ ಸ್ಮಾರ್ಟ್‌ಫೋನ್ ಐಕ್ಯೂ ನಿಯೋ 8 (iQOO Neo 8) ಅನ್ನು ಲಾಂಚ್ ಮಾಡಲಿದ್ದು, ಇದು ಸ್ನಾಪ್‌ಡ್ರಾಗನ್ 8+ ಜನ್ 1 SoC ಶಕ್ತಿ ಪಡೆಯಲಿದೆ ಎನ್ನಲಾಗಿದೆ. ಹಾಗೆಯೇ ಲಾಂಚ್ ಆಗುವ ಮುನ್ನವೇ ಈ ಫೋನ್‌ನ ಕೆಲವು ಪ್ರಮುಖ ಫೀಚರ್ಸ್ ಲೀಕ್ ಆಗಿದ್ದು, ಅದರಂತೆ ಲೀಕ್‌ಆದ ಫೀಚರ್ಸ್ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಕ್ಯೂ ನಿಯೋ 8 ಡಿಸ್‌ಪ್ಲೇ : ಟಿಪ್‌ಸ್ಟರ್ ವರದಿಯ ಪ್ರಕಾರ ಈ ಫೋನ್ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಯಾಕೆಂದರೆ ಈ ಹಿಂದಿನ ಸರಣಿಯ ಫೋನ್‌ಗಳಲ್ಲೂ ಇದೇ ಡಿಸ್‌ಪ್ಲೇ ಗಳನ್ನು ನೀಡುತ್ತಿರುವುದರಿಂದ ಈ ಫೋನ್‌ನಲ್ಲೂ ಸಹ ಇದೇ ಡಿಸ್‌ಪ್ಲೇ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.
ಐಕ್ಯೂ ನಿಯೋ 8 ಪ್ರೊಸೆಸರ್ : ಐಕ್ಯೂ ನಿಯೋ 8 ಸರಣಿಯಲ್ಲಿ ಎರಡು ಆವೃತ್ತಿಯಲ್ಲಿ ಲಾಂಚ್ ಮಾಡಲಿದೆ ಎನ್ನಲಾಗಿದ್ದು, ಇದರಲ್ಲಿ ಐಕ್ಯೂ ನಿಯೋ 8 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಿದರೆ, ಐಕ್ಯೂ ನಿಯೋ 8 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್ 8+ಜನ್1 ಮೂಲಕ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಹಾಗೆಯ 16GB RAM ಮತ್ತು 256GBಯ ಇಂಟರ್ ಸ್ಟೋರೇಜ್‌ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಐಕ್ಯೂ ನಿಯೋ 8 ಕ್ಯಾಮೆರಾ ರಚನೆ: ಲೀಕ್ ವರದಿಯ ಪ್ರಕಾರ ಐಕ್ಯೂ ನಿಯೋ 8 ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಹೆಳಲಾಗಿದ್ದು, ಜೊತೆಗೆ ಪ್ರೊ ವೇರಿಯಂಟ್ 1/1.5 ಇಂಚಿನ ಕ್ಯಾಮೆರಾ ಸೆನ್ಸರ್ ಹೊಂದಿರಲಿದೆ ಎಂದು ತಿಳಿದುಬಂದಿದೆ. ಆದರೆ, ಅದರಂತೆ ಸೆನ್ಸರ್ ಬಗ್ಗೆ ಯಾವುದೆ ಮಾಹಿತಿ ತಿಳಿದುಬಂದಿಲ್ಲ.

ಐಕ್ಯೂ ನಿಯೋ 8 ಬ್ಯಾಟರಿ ಸಾಮರ್ಥ್ಯ: ಬ್ಯಾಟರಿ ವಿಚಾರದಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಖಂಡಿತಾ ಸದ್ದು ಮಾಡುತ್ತದೆ ಎನ್ನಲಾಗಿದೆ. ಯಾಕೆಂದರೆ ಈ ಫೋನ್ 120W ವೇಗದ ಚಾರ್ಜಿಂಗ್‌ಗೆ ಬೆಂಬಲ ಪಡೆಯಲಿದೆ ಎಂದು ಕಂಪೆನಿಯ ಮೂಲಗಳಿಂದ ತಿಳಿದುಬಂದಿದೆ. ಅದರಂತೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿರಲಿದೆ ಎಂದು ನಂಬಲಾಗಿದೆ.
ಐಕ್ಯೂ ನಿಯೋ 8 ಬೆಲೆ ವಿವರ: ಈ ಮುಂಬರುವ ಈ ಅತ್ಯುತ್ತಮ ಫೀಚರ್ಸ್ ಹಾಗೂ ಕಾರ್ಯಕ್ಷಮತೆ ಇರುವ ಸ್ಮಾರ್ಟ್‌ಫೋನ್ ಭಾರತದಲ್ಲಿ 39,999 ರೂ. ಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆಯಾದರೂ ಲಾಂಚ್ ಆಗುವ ವೇಳೆಗೆ ಈ ಬೆಲೆ ವಿಚಾರದಲ್ಲಿ ಹೆಚ್ಚು ಕಡಿಮೆ ಸಹ ಆಗಬಹುದು ಎನ್ನಲಾಗಿದೆ.

ಐಕ್ಯೂ ನಿಯೋ 8 ಯಾವಾಗ ಲಾಂಚ್? : ಐಕ್ಯೂ ನಿಯೋ 7 ಅನ್ನು ಅಕ್ಟೋಬರ್ 2022 ರಲ್ಲಿ ಚೀನಾದಲ್ಲಿ ಲಾಂಚ್ ಮಾಡಲಾಗಿದ್ದು, ಇದಾದ ನಾಲ್ಕು ತಿಂಗಳ ನಂತರ ಭಾರತದಲ್ಲಿ ಈ ಫೋನ್ ಅನ್ನು ಅನಾವರಣ ಮಾಡಲಾಗಿತ್ತು. ಅದರಂತೆ ಮೊದಲು ಐಕ್ಯೂ ನಿಯೋ 8 ಫೋನ್ ಅನ್ನು ಮೇ ನಲ್ಲಿ ಚೀನಾದಲ್ಲಿ ಲಾಂಚ್ ಮಾಡಲಾಗುತ್ತಿದ್ದು, ಭಾರತಕ್ಕೆ ಬರಲು ದೀರ್ಘ ಸಮಯ ತೆಗೆದುಕೊಳ್ಳಬಹುದು ಎಂದು ಊಹಿಸಲಾಗಿದೆ.


Click it and Unblock the Notifications








