ಐಕ್ಯೂ ನಿಯೋ 9 ಪ್ರೊ ಫೋನಿಗೆ ಈಗ ಭರ್ಜರಿ ಡಿಸ್ಕೌಂಟ್; ಆಫರ್ ಬೆಲೆ ಎಷ್ಟು ಗೊತ್ತಾ?
ಆನ್‌ಲೈನ್ ಶಾಪಿಂಗ್ ಗ್ರಾಹಕರ ಪ್ರಮುಖ ತಾಣ ಎನಿಸಿರುವ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಏನಾದರೊಂದು ಸ್ಪೆಷಲ್ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತದೆ. ಇದೀಗ ಅಮೆಜಾನ್ ಐಕ್ಯೂ ಕ್ವೆಸ್ಟ್ ಡೇಸ್ (iQOO QUEST DAYS) ಆಯೋಜಿಸಿದ್ದು, ಈ ಮಾರಾಟದಲ್ಲಿ ಐಕ್ಯೂ ಸಂಸ್ಥೆಯ ಆಯ್ದ ಫೋನ್‌ಗಳು ಬೊಂಬಾಟ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಐಕ್ಯೂ ನಿಯೋ 9 ಪ್ರೊ ಫೋನ್ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಲಭ್ಯ ಇದೆ.
ಹೌದು, ಅಮೆಜಾನ್ ತಾಣದಲ್ಲಿ ಇದೀಗ ಐಕ್ಯೂ ಕ್ವೆಸ್ಟ್ ಡೇಸ್ ಸೇಲ್ ಲೈವ್ ಇದ್ದು, ಈ ಮಾರಾಟವು ಇದೇ ಜುಲೈ 9 ರ ವರೆಗೂ ಚಾಲ್ತಿ ಇರಲಿದೆ. ಈ ಸೇಲ್‌ನಲ್ಲಿ ಐಕ್ಯೂ ಕಂಪನಿಯ ಐಕ್ಯೂ ನಿಯೋ 9 ಪ್ರೊ ಫೋನ್ ಶೇ. 13% ರಷ್ಟು ಡಿಸ್ಕೌಂಟ್ ಪಡೆದಿದ್ದು, 34,999ರೂ. ಗಳ ರಿಯಾಯಿತಿ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಆಯ್ದ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ, ಈ ಕೊಡುಗೆಯು ಲಭ್ಯ ಆಗಲಿದೆ.

ಅಂದಹಾಗೆ ಈ ಫೋನ್ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಅಲ್ಲದೇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಇದು 8GB + 128GB ವೇರಿಯಂಟ್ ಹಾಗೂ 8GB + 256GB ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಕ್ಯೂ ನಿಯೋ 9 ಪ್ರೊ ಫೋನ್ - ಫೀಚರ್ಸ್
ಐಕ್ಯೂ ಸಂಸ್ಥೆಯ ಈ ಮೊಬೈಲ್ 6.78 ಇಂಚಿನ LTPO AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಇದು 1260 x 2800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇನ್ನು ಡಿಸ್‌ಪ್ಲೇ 453 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದ್ದು, ಇದಲ್ಲದೆ ಡಿಸ್‌ಪ್ಲೇಯು 1400 ನಿಟ್ಸ್ ಬ್ರೈಟ್‌ನೆಸ್ ಲೆವೆಲ್ ಪಡೆದುಕೊಂಡಿದೆ. ಅಲ್ಲದೇ ಈ ಫೋನಿನ ಡಿಸ್‌ಪ್ಲೇಯು 144 Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡಲಿದೆ.
ಹಾಗೆಯೇ ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ 8 GB RAM ಮತ್ತು 256 GB ಹಾಗೂ 12 GB RAM ಮತ್ತು 256 GB ಸ್ಟೋರೇಜ್ ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ಸಹ ವಿಸ್ತರಿಸುವ ಆಯ್ಕೆ ಲಭ್ಯ.
ಐಕ್ಯೂ ಸಂಸ್ಥೆಯ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX920 ಸೆನ್ಸಾರ್ ಸಪೋರ್ಟ್ ಪಡೆದಿದೆ. ಹಾಗೆಯೇ ಇನ್ನು ಸ್ಮಾರ್ಟ್‌ಫೋನ್ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಇದರ ಕ್ಯಾಮೆರಾ ಸ್ಕ್ವೆರ್ ಸರ್ಕಲ್ ಮಾದರಿಯಲ್ಲಿ ಇದೆ.
ಇನ್ನು ಐಕ್ಯೂ ನಿಯೋ 9 ಪ್ರೊ ಮೊಬೈಲ್ 5160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 120W FlashCharge ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.


Click it and Unblock the Notifications







