ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ನಾಳೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ ಐಕ್ಯೂ ನಿಯೋ 9 ಪ್ರೊ!
ಮೊಬೈಲ್ ಪ್ರಿಯರು ಕಾತುರದಿಂದ ಎದುರುನೋಡುತ್ತಿರುವ ಐಕ್ಯೂ ನಿಯೋ 9 ಪ್ರೊ ಸ್ಮಾರ್ಟ್‌ಫೋನ್ ನಾಳೆ (ಫೆಬ್ರವರಿ 22 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಮುಂಗಡ ಬುಕಿಂಗ್ ಸಹ ಆಯೋಜಿಸಿತ್ತು. ಅಂದಹಾಗೆ ಈ ಫೋನಿನ ಫೀಚರ್ಸ್‌ಹಗಳು ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಗಮನ ಸೆಳೆದಿವೆ.
ಹೌದು, ಐಕ್ಯೂ ನಿಯೋ 9 ಪ್ರೊ ಫೋನ್ ದೇಶಿಯ ಮಾರುಕಟ್ಟೆಯಲ್ಲಿ ನಾಳೆ ಬಿಡುಗಡೆ ಆಗಲಿದೆ. ಈ ಫೋನ್ ಲಾಂಚ್ ಬಗ್ಗೆ ದೈತ್ಯ ಇ ಕಾಮರ್ಸ್ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ತಿಳಿಸಲಾಗಿದೆ. ವಿಭಿನ್ನ ಕ್ಯಾಮೆರಾ ರಚನೆ ಹಾಗೂ ಲೆದರ್ ಟಚ್ ಇರುವ ಬ್ಯಾಕ್ ಪ್ಯಾನೆಲ್ ರಚನೆ ಅನ್ನು ಈ ಫೋನ್ ಪಡೆದಿದ್ದು, 5160 mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿರಲಿದೆ.

ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡಲಿದ್ದು, ಇದರ ಜೊತೆಗೆ 50 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್ ಪಡೆದಿರಲಿದೆ. ಹಾಗೆಯೇ 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಒಳಗೊಂಡಿರುವ ಸಾಧ್ಯತೆ ಹೆಚ್ಚಿದೆ. ಇನ್ನುಳಿದಂತೆ ಐಕ್ಯೂ ನಿಯೋ 9 ಪ್ರೊ ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಕ್ಯೂ ನಿಯೋ 9 ಪ್ರೊ ಫೋನ್ - ನಿರೀಕ್ಷಿತ ಫೀಚರ್ಸ್
ಐಕ್ಯೂ ಸಂಸ್ಥೆಯ ಈ ಮೊಬೈಲ್ 6.78 ಇಂಚಿನ LTPO AMOLED ಡಿಸ್‌ಪ್ಲೇ ಅನ್ನು ಪಡೆದಿರಲಿದೆ. ಇದು 1260 x 2800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇರಲಿದೆ. ಇನ್ನು ಡಿಸ್‌ಪ್ಲೇ 453 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿರಲಿದ್ದು, ಇದಲ್ಲದೆ ಡಿಸ್‌ಪ್ಲೇಯು 1400 ನಿಟ್ಸ್ ಬ್ರೈಟ್‌ನೆಸ್ ಲೆವೆಲ್ ಪಡೆದುಕೊಂಡಿರುವ ಸಾಧ್ಯತೆ ಇದೆ. ಅಲ್ಲದೇ ಡಿಸ್‌ಪ್ಲೇಯು 144 Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡಲಿದೆ ಎಂದು ವರದಿ ಆಗಿದೆ.

ಹಾಗೆಯೇ ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಪವರ್ ಅನ್ನು ಪಡೆದಿರಲಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ 8 GB RAM ಮತ್ತು 256 GB ಹಾಗೂ 12 GB RAM ಮತ್ತು 256 GB ಸ್ಟೋರೇಜ್ ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ಸಹ ವಿಸ್ತರಿಸುವ ಆಯ್ಕೆ ಲಭ್ಯ.
ಐಕ್ಯೂ ಸಂಸ್ಥೆಯ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX920 ಸೆನ್ಸಾರ್‌ನೊಂದಿಗೆ ಬರಲಿದೆ. ಇನ್ನು ಸ್ಮಾರ್ಟ್‌ಫೋನ್ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಕ್ಯಾಮೆರಾ ಸ್ಕ್ವೆರ್ ಸರ್ಕಲ್ ಮಾದರಿಯಲ್ಲಿ ಇರಲಿದೆ.
ಇನ್ನು ಐಕ್ಯೂ ನಿಯೋ 9 ಪ್ರೊ ಮೊಬೈಲ್ 5160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಬಹುತೇಕ ಖಚಿತ ಆಗಿದೆ. ಇದಕ್ಕೆ ಪೂರಕವಾಗಿ 120W FlashCharge ಸಪೋರ್ಟ್ ಇರಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಪಡೆದಿರಲಿದೆ.
ಅತ್ಯುತ್ತಮ ಗೇಮಿಂಗ್ ಅನುಭವಕ್ಕಾಗಿ 144 fps ಗೇಮಿಂಗ್ ಮತ್ತು 900 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಒದಗಿಸಲಿದೆ. ಅಲ್ಲದೇ ನೆಟ್‌ಫ್ಲಿಕ್ಸ್, ಯೂಟ್ಯೂಬ್ ಮತ್ತು ಪ್ರೈಮ್ ವಿಡಿಯೋದಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಫ್ರೇಮ್‌ಗಳನ್ನು ಸೇರಿಸುವ ಮೂಲಕ ವೀಡಿಯೊ ಕಂಟೆಂಟ್ ಅನ್ನು ಸುಧಾರಿಸುವ ಗುರಿಯನ್ನು ಹೊಂದಿರುವ MEMC ತಂತ್ರಜ್ಞಾನ ವನ್ನು ಒಳಗೊಂಡಿದೆ ಎನ್ನಲಾಗಿದೆ.


Click it and Unblock the Notifications








