ಅಂತೂ ಇಂತೂ ಲಾಂಚ್ ಆಯ್ತು ದೈತ್ಯ 'ಐಕ್ಯೂ ನಿಯೋ 9 ಪ್ರೊ' ಫೋನ್!
ಗ್ರಾಹಕರು ಬಹಳ ಕಾತುರದಿಂದ ಕಾಯುತ್ತಿದ್ದ ಐಕ್ಯೂ ನಿಯೋ 9 ಪ್ರೊ ಸ್ಮಾರ್ಟ್‌ಫೋನ್ ಇಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಮೀಡ್ ರೇಂಜ್ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರೀಮಿಯಂ ಲುಕ್ ಹಾಗೂ ಹೈ ಎಂಡ್ ಫೀಚರ್ಸ್ ಪಡೆದಿದೆ.
ಹೌದು, ಐಕ್ಯೂ ನಿಯೋ 9 ಪ್ರೊ ಫೋನ್ ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಇದರೊಂದಿಗೆ 5,160mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಪ್ರಮುಖ ಪ್ಲಸ್ ಪಾಯಿಂಟ್ ಆಗಿ ಕಾಣಿಸಿಕೊಂಡಿದೆ.

ಇನ್ನು ಈ ಫೋನ್ 120W SuperVOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಇನ್ನುಳಿದಂತೆ ಐಕ್ಯೂ ನಿಯೋ 9 ಪ್ರೊ ಫೋನಿನ ಇತರೆ ಫೀಚರ್ಸ್ ಹೇಗಿವೆ ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಕ್ಯೂ ನಿಯೋ 9 ಪ್ರೊ ಫೋನ್ - ಫೀಚರ್ಸ್
ಐಕ್ಯೂ ಸಂಸ್ಥೆಯ ಈ ಮೊಬೈಲ್ 6.78 ಇಂಚಿನ LTPO AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಇದು 1260 x 2800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇನ್ನು ಡಿಸ್‌ಪ್ಲೇ 453 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದ್ದು, ಇದಲ್ಲದೆ ಡಿಸ್‌ಪ್ಲೇಯು 1400 ನಿಟ್ಸ್ ಬ್ರೈಟ್‌ನೆಸ್ ಲೆವೆಲ್ ಪಡೆದುಕೊಂಡಿದೆ. ಅಲ್ಲದೇ ಈ ಫೋನಿನ ಡಿಸ್‌ಪ್ಲೇಯು 144 Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡಲಿದೆ.

ಹಾಗೆಯೇ ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ 8 GB RAM ಮತ್ತು 256 GB ಹಾಗೂ 12 GB RAM ಮತ್ತು 256 GB ಸ್ಟೋರೇಜ್ ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ಸಹ ವಿಸ್ತರಿಸುವ ಆಯ್ಕೆ ಲಭ್ಯ.
ಐಕ್ಯೂ ಸಂಸ್ಥೆಯ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX920 ಸೆನ್ಸಾರ್ ಸಪೋರ್ಟ್ ಪಡೆದಿದೆ. ಹಾಗೆಯೇ ಇನ್ನು ಸ್ಮಾರ್ಟ್‌ಫೋನ್ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಇದರ ಕ್ಯಾಮೆರಾ ಸ್ಕ್ವೆರ್ ಸರ್ಕಲ್ ಮಾದರಿಯಲ್ಲಿ ಇದೆ.
ಇನ್ನು ಐಕ್ಯೂ ನಿಯೋ 9 ಪ್ರೊ ಮೊಬೈಲ್ 5160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 120W FlashCharge ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.
ಈ ಫೋನಿನ 8GB ಮತ್ತು 256GB RAM ವೇರಿಯಂಟ್ 37,999 ರೂ. ಬೆಲೆಯನ್ನು ಪಡೆದಿದ್ದು, ಹಾಗೆಯೇ 12 GB RAM ಮತ್ತು 256 GB ವೇರಿಯಂಟ್ 39,999 ರೂ. ಗಳ ಬೆಲೆಯಲ್ಲಿ ಲಭ್ಯ ಇದೆ. ಇನ್ನು ಈ ಸ್ಮಾರ್ಟ್‌ಫೋನ್ ಕಾಂಕರರ್ ಬ್ಲ್ಯಾಕ್ ಮತ್ತು ಫಿಯರಿ ರೆಡ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ರಿಯಾಯಿತಿಗಳನ್ನು ಸಹ ಪಡೆಯಬಹುದು.


Click it and Unblock the Notifications








