Home
ಸುದ್ದಿಜಾಲ

ಐಕ್ಯೂ ನಿಯೋ 9 ಸರಣಿ ಲಾಂಚ್: ಅತ್ಯಧಿಕ ಸ್ಟೋರೇಜ್‌.. ವಾವ್‌ ಎನಿಸೋ ಸ್ಟೈಲ್‌, ಬೆಲೆ ಎಷ್ಟು?

ಈಗಾಗಲೇ ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆಯಲ್ಲಿ ಭಿನ್ನ ಫೀಚರ್ಸ್‌ ಹಾಗೂ ವಿಶೇಷ ಶೈಲಿಯ ಫೋನ್‌ಗಳನ್ನು ಕಾಣಬಹುದು. ಈ ಮೂಲಕ ಒಂದಕ್ಕೊಂದು ತೀವ್ರ ಪೈಪೋಟಿಯಲ್ಲಿ ಗ್ರಾಹಕರಿಗೆ ಹತ್ತಿರವಾಗುತ್ತಿವೆ. ಅದರಂತೆ ಈಗ ಲಾಂಚ್‌ ಆಗುವ ಮುನ್ನವೇ ಜಾಗತಿಕವಾಗಿ ಬಹಳ ಸದ್ದು ಮಾಡಿದ್ದ ಐಕ್ಯೂ ನಿಯೋ 9 ಸ್ಮಾರ್ಟ್‌ಫೋನ್ ಸರಣಿ (IQOO Neo 9 series) ಕೊನೆಗೂ ಅನಾವರಣ ಆಗಿದೆ.

ಹೌದು, ಐಕ್ಯೂ ವಿಶೇಷ ಶೈಲಿಯ ಫೋನ್‌ಗಳನ್ನು ಅನಾವರಣ ಮಾಡುವಲ್ಲಿ ಅಗ್ರಸ್ಥಾನದಲ್ಲಿದೆ. ಅದರಂತೆ ವಿಶೇಷ ಹಾಗೂ ತುಂಬಾ ಆಕರ್ಷವಾಗಿ ಕಾಣುವ ಐಕ್ಯೂ ನಿಯೋ 9 ಸರಣಿ ಫೋನ್‌ ಗಳನ್ನು ಅನಾವರಣ ಮಾಡಲಾಗಿದೆ. ಈ ಫೋನ್‌ಗಳು 144hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದುಕೊಂಡಿದ್ದು, 120W ವೇಗದ ಚಾರ್ಜಿಂಗ್ ಬೆಂಬಲ ಪಡೆದಿವೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿಚಾರ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಕ್ಯೂ ನಿಯೋ 9 ಸರಣಿ ಲಾಂಚ್: ಅತ್ಯಧಿಕ ಸ್ಟೋರೇಜ್‌.. ವಾವ್‌ ಎನಿಸೋ ಸ್ಟೈಲ್‌

ಐಕ್ಯೂ ನಿಯೋ 9 ಸರಣಿ: ವಿವೊದ ಉಪ ಬ್ರಾಂಡ್ ಐಕ್ಯೂ ಹೊಸ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಸರಣಿಯೊಂದಿಗೆ ತನ್ನ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಣೆ ಮಾಡಿಕೊಂಡಿದೆ. ಅದರಂತೆ ಐಕ್ಯೂ ನಿಯೋ 9 ಸರಣಿಯಲ್ಲಿ ಎರಡು ಫೋನ್‌ಗಳನ್ನು ಅನಾವರಣ ಮಾಡಲಾಗಿದೆ. ಅದರಲ್ಲಿ ಒಂದು ವೆನಿಲ್ಲಾ ಐಕ್ಯೂ ನಿಯೋ 9 (Vanilla IQOO Neo 9)ಮತ್ತು ಐಕ್ಯೂ ನಿಯೋ 9 ಪ್ರೊ (IQOO Neo 9 Pro).

ಐಕ್ಯೂ ನಿಯೋ 9 ಸರಣಿ ಫೀಚರ್ಸ್‌: ಐಕ್ಯೂ ನಿಯೋ 9 ಮತ್ತು ಐಕ್ಯೂ ನಿಯೋ 9 ಪ್ರೊ ಎರಡೂ ಫೋನ್‌ಗಳು ಸಹ 6.7ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು ಅದು 1.5K ರೆಸಲ್ಯೂಶನ್ ಸಾಮರ್ಥ್ಯ ಪಡೆದಿವೆ. ಇದರೊಂದಿಗೆ 144Hz ರಿಫ್ರೆಶ್ ರೇಟ್‌ ಆಯ್ಕೆ ಹಾಗೂ HDR10+ ಅನ್ನು ಈ ಡಿಸ್‌ಪ್ಲೇ ಬೆಂಬಲಿಸಲಿವೆ. ಇದರೊಂದಿಗೆ ಎರಡೂ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇಯು ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಕಾಣಿಸಿಕೊಂಡಿದ್ದು, ಅತ್ಯುತ್ತಮ ವೀಕ್ಷಣಾ ಅನುಭವ ನೀಡಲಿವೆ.

ಐಕ್ಯೂ ನಿಯೋ 9 ಸರಣಿ ಲಾಂಚ್: ಅತ್ಯಧಿಕ ಸ್ಟೋರೇಜ್‌.. ವಾವ್‌ ಎನಿಸೋ ಸ್ಟೈಲ್‌

ಐಕ್ಯೂ ನಿಯೋ 9 ಸರಣಿ ಪ್ರೊಸೆಸರ್‌ ಮಾಹಿತಿ: ಐಕ್ಯೂ ನಿಯೋ 9 ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 ಜನ್‌ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಿದರೆ ನಿಯೋ 9 ಪ್ರೊ ಡೈಮೆನ್ಸಿಟಿ 9300 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಈ ಎರಡೂ ಫೋನ್‌ಗಳು ಸಹ ಥರ್ಮಲ್ ಮ್ಯಾನೇಜ್‌ಮೆಂಟ್‌ಗಾಗಿ 6K VC ಲಿಕ್ವಿಡ್ ಕೂಲಿಂಗ್ 3D ಶಾಖ ಪ್ರಸರಣ ವ್ಯವಸ್ಥೆಯನ್ನು ಹೊಂದಿದ್ದು, ಎಂತಹುದೇ ಕಾರ್ಯಗಳನ್ನು ಸರಳವಾಗಿ ಮಾಡಬಹುದಾಗಿದೆ.

ಐಕ್ಯೂ ನಿಯೋ 9 ಸರಣಿ ಕ್ಯಾಮೆರಾ ಮಾಹಿತಿ: ಈ ಸರಣಿಯ ಫೋನ್‌ಗಳು ಫ್ಲಾಟ್ ಫ್ರೇಮ್ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿವೆ ಅದರಲ್ಲಿ ಐಕ್ಯೂ ನಿಯೋ 9 ಸರಣಿಯು 50 ಮೆಗಾಪಿಕ್ಸೆಲ್‌ OIS ಸೋನಿ IMX920 ಪ್ರಾಥಮಿಕ ಸೆನ್ಸರ್ ಪಡೆದಿದೆ. ಈ ಸೆನ್ಸರ್‌ ಅನ್ನು ನಾವು ವಿವೋ X100 ಸ್ಮಾರ್ಟ್‌ಫೋನ್‌ನಲ್ಲಿಯೂ ಕಾಣಬಹುದಾಗಿದೆ. ಇನ್ನು ವೆನಿಲ್ಲಾ ಮತ್ತು ಪ್ರೊ ವೇರಿಯಂಟ್‌ನಲ್ಲಿ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಕ್ರಮವಾಗಿ 8MP ಮತ್ತು 50MP ಇವೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿವೆ.

ಐಕ್ಯೂ ನಿಯೋ 9 ಸರಣಿ ಲಾಂಚ್: ಅತ್ಯಧಿಕ ಸ್ಟೋರೇಜ್‌.. ವಾವ್‌ ಎನಿಸೋ ಸ್ಟೈಲ್‌

ಐಕ್ಯೂ ನಿಯೋ 9 ಸರಣಿ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್‌ಗಳು 5,160mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಈ ಮೂಲಕ ದೀರ್ಘ ಬ್ಯಾಕಪ್‌ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಭರ್ಜರಿ 120W ವೇಗದ ಚಾರ್ಜಿಂಗ್ ಆಯ್ಕೆ ಪಡೆದುಕೊಂಡಿದ್ದು, ಮಿಡ್‌ ರೇಂಜ್‌ ಬೆಲೆ ವಿಭಾಗದಲ್ಲಿ ಈ ಮೂಲಕ ಈ ಫೋನ್‌ ಅಗ್ರಸ್ಥಾನ ಪಡೆಯಲಿದೆ. ಉಳಿದಂತೆ ಡ್ಯುಯಲ್ ಸ್ಪೀಕರ್‌ಗಳು, IR ಬ್ಲಾಸ್ಟರ್, ಎಕ್ಸ್‌ ಆಕ್ಸಿಸ್ ಲೀನಿಯರ್ ಮೋಟಾರ್, ವೈ-ಫೈ 7 ಸೇರಿದಂತೆ ಇನ್ನೂ ಹೆಚ್ಚಿನ ಸೌಲಭ್ಯಗಳು ಈ ಫೋನ್‌ನಲ್ಲಿ ಲಭ್ಯ.

ಐಕ್ಯೂ ನಿಯೋ 9 ಸರಣಿ ಬೆಲೆ ಹಾಗೂ ಲಭ್ಯತೆ: ಐಕ್ಯೂ ನಿಯೋ 9 ಸ್ಮಾರ್ಟ್‌ಫೋನ್‌ ವಿವಿಧ ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ ಇದೆ. ಅದರಲ್ಲಿ 12GB RAM ಮತ್ತು 256GB ಸ್ಟೋರೇಜ್‌ ಆಯ್ಕೆಯ ಫೋನ್ CNY 2,299 (ಭಾರತದಲ್ಲಿ ಅಂದಾಜು 26,700ರೂ.ಗಳು) ನಿಂದ ಪ್ರಾರಂಭವಾಗುತ್ತದೆ. ಇದರೊಂದಿಗೆ 16GB + 256GB, 16GB + 512GB, ಮತ್ತು 16GB + 1TB ಕಾನ್ಫಿಗರೇಶನ್‌ಗಳು ಕ್ರಮವಾಗಿ CNY 2,499 (ಅಂದಾಜು 29,000ರೂ.ಗಳು), CNY 2,799 (ಅಂದಾಜು 32,600 ರೂ.ಗಳು) ಮತ್ತು CNY 3,199 (ಅಂದಾಜು 37,200 ರೂ,ಗಳು). ಬೆಲೆ ನಿಗದಿ ಮಾಡಲಾಗಿದೆ.

ಐಕ್ಯೂ ನಿಯೋ 9 ಸರಣಿ ಲಾಂಚ್: ಅತ್ಯಧಿಕ ಸ್ಟೋರೇಜ್‌.. ವಾವ್‌ ಎನಿಸೋ ಸ್ಟೈಲ್‌

ಇನ್ನು ಐಕ್ಯೂ ನಿಯೋ 9 ಪ್ರೊ ಫೋನ್‌ ಸಹ ವಿವಿಧ ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ ಇದೆ. 12GB + 256GB ಮತ್ತು 12GB + 512GB ಸ್ಟೋರೇಜ್‌ ಫೋನ್‌ಗಳು ಕ್ರಮವಾಗಿ CNY 2,999 (ಸುಮಾರು 35,000 ರೂ.ಗಳು) ಮತ್ತು CNY 3,299 (ಸುಮಾರು 38,500 ರೂ.ಗಳು) ಬೆಲೆಯಲ್ಲಿ ಕಾಣಿಸಿಕೊಂಡರೆ 16GB + 512GB ಮತ್ತು 16GB + 1TB ವೇರಿಯಂಟ್‌ ಬೆಲೆ CNY 3,599 (ಸುಮಾರು 42,000ರೂ.ಗಳು) ಮತ್ತು CNY 3,999 (ಸುಮಾರು 46,500ರೂ.ಗಳು).

ಈ ಫೋನ್‌ಗಳು ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಾಂಚ್‌ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಭಾರತವೂ ಸೇರಿದಂತೆ ಇತರೆ ದೇಶಗಳಲ್ಲಿ ಈ ಫೋನ್‌ ಲಾಂಚ್‌ ಆಗಲಿವೆ ಎನ್ನಲಾಗಿದೆ. ಹಾಗೆಯೇ ಈ ಎರಡೂ ಫೋನ್‌ಗಳು ಸಹ ರೆಡ್ ಮತ್ತು ವೈಟ್ ಸೋಲ್ (ಡ್ಯುಯಲ್-ಟೋನ್ ಲೆದರ್ ಟೆಕ್ಸ್ಚರ್ಡ್ ಬ್ಯಾಕ್ ಪ್ಯಾನೆಲ್‌), ನಾಟಿಕಲ್ ಬ್ಲೂ ಮತ್ತು ಫೈಟಿಂಗ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯ ಇವೆ.

Best Mobiles in India

English summary
Vivo's sub-brand IQOO has unveiled new mid-range Vanilla IQOO Neo 9 and IQOO Neo 9 Pro smartphones. Both these phones have good battery, camera, processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+