Home
ಸುದ್ದಿಜಾಲ

ಸದ್ಯದಲ್ಲೇ ಎಂಟ್ರಿ ಕೊಡಲಿದೆ ಐಕ್ಯೂ ಸಂಸ್ಥೆಯ ಮತ್ತೊಂದು ಸ್ಟೈಲಿಶ್‌ ಫೋನ್‌!

ವಿವೋ ಸಂಸ್ಥೆಯ ಸಬ್‌ ಬ್ರ್ಯಾಂಡ್‌ ಐಕ್ಯೂ ಕಂಪನಿಯು ಈಗಾಗಲೇ ಹಲವು ಆಕರ್ಷಕ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಐಕ್ಯೂ ನಿಯೋ 9 ಈಗಾಗಲೇ ಗ್ರಾಹಕರನ್ನು ಸೆಳೆದಿದ್ದು, ಇದರ ಮುಂದುವರಿದ ಭಾಗವಾಗಿ ಸಂಸ್ಥೆಯು ಐಕ್ಯೂ ನಿಯೋ 9S ಪ್ರೊ ಫೋನ್‌ ಅನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.

ಹೌದು, ಐಕ್ಯೂ ಸಂಸ್ಥೆಯು ಸದ್ಯದಲ್ಲೇ ಐಕ್ಯೂ ನಿಯೋ 9S ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲಿದೆ ಎಂದು ವರದಿಯಾಗಿದೆ. ಎಂಟ್ರಿ ಕೊಡಲಿರುವ ಈ ಫೋನ್‌ ಸ್ನಾಪ್‌ಡ್ರಾಗನ್ 8 ಜೆನ್‌ 2 ಪ್ರೊಸೆಸರ್‌ ಪಡೆದಿರಲಿದ್ದು, ಜೊತೆಗೆ 120 W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ.

ಸದ್ಯದಲ್ಲೇ ಎಂಟ್ರಿ ಕೊಡಲಿದೆ ಐಕ್ಯೂ ಸಂಸ್ಥೆಯ ಮತ್ತೊಂದು ಸ್ಟೈಲಿಶ್‌ ಫೋನ್‌!

ಹಾಗೆಯೇ ಈ ಫೋನ್‌ 1.5K ಗೇಮಿಂಗ್ ಸ್ಕ್ರೀನ್‌ ಸೌಲಭ್ಯ ಹೊಂದಿರಲಿದ್ದು, ಅಲ್ಲದೇ 12GB RAM ವೇರಿಯಂಟ್‌ ಆಯ್ಕೆ ಪಡೆದಿರುವ ನಿರೀಕ್ಷೆಗಳು ಇವೆ. ಇದರೊಂದಿಗೆ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಇರಲಿದೆ ಎನ್ನಲಾಗಿದೆ. ಅಂದಾಹಗೆ ಈ ಫೋನ್ ಮೀಡ್‌ರೇಂಜ್‌ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಹಾಗಾದರೇ ಐಕ್ಯೂ ನಿಯೋ 9S ಪ್ರೊ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ ನಿಯೋ 9S ಪ್ರೊ ನಿರೀಕ್ಷಿತ ಫೀಚರ್ಸ್‌

ಐಕ್ಯೂ ನಿಯೋ 9S ಪ್ರೊ ಸ್ಮಾರ್ಟ್‌ಫೋನ್‌ 6.78 ಇಂಚಿನ 8T LTPO OLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ನೊಂದಿಗೆ ಲಗ್ಗೆ ಇಡಲಿದೆ. ಇನ್ನು ಡಿಸ್‌ಪ್ಲೇ 144 Hz ರಿಫ್ರೆಶ್‌ ರೇಟ್‌ ಪಡೆದಿರಲಿದ್ದು, HDR 10+, 600 ನಿಟ್ಸ್‌ ಸಪೋರ್ಟ್‌ ಇರಲಿದೆ ಎನ್ನಲಾಗಿದೆ. ಇದರೊಂದಿಗೆ 1000 ನಿಟ್ಸ್‌ (HBM), 2000 ನಿಟ್ಸ್‌ (ಗರಿಷ್ಠ) ಸಪೋರ್ಟ್ ಇರಲಿದೆ.

ಐಕ್ಯೂ ನಿಯೋ 9S ಪ್ರೊ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 ಜೆನ್‌ 2 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇನ್ನು ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 14 ಓಎಸ್‌ ಆಧಾರಿತ ಒರಿಜಿನ್ ಓಎಸ್ 4 ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ 12 GB RAM + 256 GB ಆಂತರೀಕ ಸ್ಟೋರೇಜ್‌ ಆಯ್ಕೆ ಒಳಗೊಂಡಿರಲಿದೆ. ಇದಲ್ಲದೆ 8 GB ವರ್ಚುವಲ್ RAM ಅನ್ನು ಸಹ ವಿಸ್ತರಿಸುವುದಕ್ಕೆ ಅವಕಾಶ ನೀಡುವ ಸಾಧ್ಯತೆ ಸಹ ಇದೆ.

ಐಕ್ಯೂ ನಿಯೋ 9S ಪ್ರೊ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನಲ್ಲಿ ಇರಲಿದ್ದು, ದ್ವಿತೀಐ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯ ಹೊಂದಿರುವ ನಿರೀಕ್ಷೆಯಿದೆ. ಇದಲ್ಲದೆ ಈ ಮೊಬೈಲ್‌ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿರಲಿದೆ.

ಐಕ್ಯೂ ನಿಯೋ 9S ಪ್ರೊ ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿರಲಿದೆ. ಇದಕ್ಕೆ ಪೂರಕವಾಗಿ 120 W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಇರಲಿದೆ ಎಂದು ವರದಿಯಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈ ಫೈ, ಹೆಡ್‌ಫೋನ್‌ ಜ್ಯಾಕ್‌ ಆಯ್ಕೆಗಳು ಇರಲಿವೆ. ಜೊತೆಗೆ ಯುಎಸ್‌ಬಿ ಟೈಪ್ ಸಿ ಪೋರ್ಟ್, ಸ್ಪೀಕರ್ ಗ್ರಿಲ್, ಪ್ರೈಮರಿ ಮೈಕ್ರೊಫೋನ್ ಮತ್ತು ಸಿಮ್ ಕಾರ್ಡ್ ಟ್ರೇ ಅನ್ನು ಕೆಳಭಾಗದಲ್ಲಿ ಕಾಣಬಹುದು.

Best Mobiles in India

English summary
iQOO Neo 9s Pro could be launched in China soon. check expected specifications, price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+