ಶೀಘ್ರದಲ್ಲೇ ಐಕ್ಯೂ ನಿಯೋ 9S ಪ್ರೊ ಲಾಂಚ್!. ಪ್ರೊಸೆಸರ್ ಯಾವುದು ಗೊತ್ತಾ?
ಐಕ್ಯೂ ಕಂಪನಿಯು ವಿವೋದ ಸಬ್ ಬ್ರ್ಯಾಂಡ್ ಆಗಿದ್ದು, ಈಗಾಗಲೇ ಹಲವು ಆಕರ್ಷಕ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಐಕ್ಯೂ ನಿಯೋ 9 ಈಗಾಗಲೇ ಗ್ರಾಹಕರನ್ನು ಸೆಳೆದಿದ್ದು, ಇದರ ಮುಂದುವರಿದ ಭಾಗವಾಗಿ ಸಂಸ್ಥೆಯು ಐಕ್ಯೂ ನಿಯೋ 9S ಪ್ರೊ ಫೋನ್ ಅನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.
ಹೌದು, ಐಕ್ಯೂ ಸಂಸ್ಥೆಯು ಸದ್ಯದಲ್ಲೇ ಲಾಂಚ್ ಆಗಲು ಸಜ್ಜಾಗಿರುವ ಐಕ್ಯೂ ನಿಯೋ 9S ಪ್ರೊ ಫೋನ್ ಲೀಕ್ ಫೀಚರ್ಸ್‌ಗಳಿಂದ ಅನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಬಿಡುಗಡೆ ಆಗಲಿರುವ ಈ ಫೋನ್ ಮೀಡಿಯಾಟೆಕ್ 9300 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ ಎನ್ನುವುದು ಈಗ ಖಚಿತ ಆಗಿದೆ.

ಅಂದಹಾಗೆ ಈ ಫೋನ್ ಮೀಡ್‌ರೇಂಜ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಅಲ್ಲದೇ ಈ ಮೊಬೈಲ್ FHD+ ಡಿಸ್‌ಪ್ಲ ಗೇಮಿಂಗ್ ಸ್ಕ್ರೀನ್ ಸೌಲಭ್ಯ ಪಡೆದಿರುವ ಸಾಧ್ಯತೆ ಇದ್ದು, ಅಂದಹಾಗೆ ಈ ಫೋನ್ ಮೀಡ್‌ರೇಂಜ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಜೊತೆಗೆ 12GB RAM ವೇರಿಯಂಟ್ ಆಯ್ಕೆ ಪಡೆದಿರುವ ನಿರೀಕ್ಷೆಗಳು ಇವೆ. ಇದರೊಂದಿಗೆ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಇರಲಿದೆ ಎನ್ನಲಾಗಿದೆ. ಹಾಗಾದರೇ ಐಕ್ಯೂ ನಿಯೋ 9S ಪ್ರೊ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಕ್ಯೂ ನಿಯೋ 9S ಪ್ರೊ ನಿರೀಕ್ಷಿತ ಫೀಚರ್ಸ್ ಹೀಗಿವೆ
ಐಕ್ಯೂ ನಿಯೋ 9S ಪ್ರೊ ಮೊಬೈಲ್ 6.78 ಇಂಚಿನ 8T LTPO OLED ಡಿಸ್‌ಪ್ಲೇ ಅನ್ನು ಪಡೆದಿರಲಿದೆ. ಹಾಗೆಯೇ ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ ಲಗ್ಗೆ ಇಡಲಿದೆ. ಇನ್ನು ಡಿಸ್‌ಪ್ಲೇ 144 Hz ರಿಫ್ರೆಶ್ ರೇಟ್ ಪಡೆದಿರಲಿದ್ದು, HDR 10+, 600 ನಿಟ್ಸ್ ಸಪೋರ್ಟ್ ಇರುವ ಸಾಧ್ಯತೆ ಎನ್ನಲಾಗಿದೆ. ಇದರೊಂದಿಗೆ 1000 ನಿಟ್ಸ್ (HBM), 2000 ನಿಟ್ಸ್ (ಗರಿಷ್ಠ) ಬೆಂಬಲದ ನಿರೀಕ್ಷೆ.
ಐಕ್ಯೂ ನಿಯೋ 9S ಪ್ರೊ ಮೊಬೈಲ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇನ್ನು ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಓಎಸ್ ಆಧಾರಿತ ಒರಿಜಿನ್ ಓಎಸ್ 4 ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ 12 GB RAM + 256 GB ಆಂತರೀಕ ಸ್ಟೋರೇಜ್ ಆಯ್ಕೆ ಒಳಗೊಂಡಿರಲಿದೆ. ಇದಲ್ಲದೆ 8 GB ವರ್ಚುವಲ್ RAM ಅನ್ನು ಸಹ ವಿಸ್ತರಿಸುವುದಕ್ಕೆ ಅವಕಾಶ ನೀಡುವ ಸಾಧ್ಯತೆ ಸಹ ಇದೆ.
ಐಕ್ಯೂ ನಿಯೋ 9S ಪ್ರೊ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇರಲಿದ್ದು, ಎರಡನೇಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿರುವ ನಿರೀಕ್ಷೆಯಿದೆ. ಇನ್ನು ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ.
ಇನ್ನು ಐಕ್ಯೂ ಸಂಸ್ಥೆಯ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿರಲಿದ್ದು, ಇದಕ್ಕೆ ಅನುಗುಣವಾಗಿ 120 W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈ ಫೈ, ಹೆಡ್‌ಫೋನ್ ಜ್ಯಾಕ್ ಕಾಣಬಹುದಾಗಿದೆ. ಇದರ ಜೊತೆಗೆ ಯುಎಸ್‌ಬಿ ಟೈಪ್ ಸಿ ಪೋರ್ಟ್, ಸ್ಪೀಕರ್ ಗ್ರಿಲ್, ಪ್ರೈಮರಿ ಮೈಕ್ರೊಫೋನ್ ಆಯ್ಕೆಗಳು ಇರಲಿವೆ.


Click it and Unblock the Notifications







