IQOO: ಐಕ್ಯೂ ನಿಯೋ 9S ಪ್ರೊ ಶೀಘ್ರದಲ್ಲೇ ಎಂಟ್ರಿ! ಪ್ರಮುಖ ಫೀಚರ್ಸ್ ಲೀಕ್
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಐಕ್ಯೂ ಫೋನ್‌ಗಳಿಗೆ (IQOO Phone) ಭರ್ಜರಿ ಬೇಡಿಕೆ. ಇದೆ ಈ ಫೋನ್‌ಗಳು ತಮ್ಮದೇ ಆದ ವಿಶೇಷ ಕ್ಯಾಮೆರಾ ಫೀಚರ್ಸ್ ಹಾಗೂ ಇತರೆ ಫೀಚರ್ಸ್ ಆಯ್ಕೆ ಪಡೆಯುವ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಅದರಂತೆ ಈಗ ಮಗದೊಂದು ವಿಶೇಷ ಫೋನ್ ಜಾಗತಿಕವಾಗಿ ಲಾಂಚ್ ಆಗಲಿದೆ.
ಹೌದು, ಕಳೆದ ವರ್ಷದ ಅಂತ್ಯದಲ್ಲಿ ಐಕ್ಯೂ ನಿಯೋ 9 ಸ್ಮಾರ್ಟ್‌ಫೋನ್ ಸರಣಿಯನ್ನು ಅನ್ನು ಅನಾವರಣ ಮಾಡಿ ಐಕ್ಯೂ ಭಾರೀ ಸದ್ದು ಮಾಡಿತ್ತು. ಅಲ್ಲದೆ ಈ ಫೋನ್‌ಗೆ ದೊಡ್ಡ ಮಟ್ಟದ ಬೇಡಿಕೆ ಸಹ ಉಂಟಾಗಿದ್ದು, ಈ ನಡುವೆ ಐಕ್ಯೂ ನಿಯೋ 9S ಪ್ರೊ (IQOO Neo 9S Pro) ಅನ್ನು ಅನಾವರಣ ಮಾಡಲು ಮುಂದಾಗಿದೆ. ಈ ಫೋನ್ ಬಗ್ಗೆ ಕೆಲವು ಮಾಹಿತಿ ಲೀಕ್ ಆಗಿವೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಲೀಕ್ ಫೀಚರ್ಸ್ ಏನು? ಅನ್ನೋದನ್ನು ತಿಳಿದುಕೊಳ್ಳಿ.

ಐಕ್ಯೂ ನಿಯೋ 9S ಪ್ರೊ: ಈ ಫೋನ್ ಬಗ್ಗೆ 91ಮೊಬೈಲ್ಸ್ ವರದಿ ಮಾಡಿದೆ. ಗೂಗಲ್ ಪ್ಲೇ ಕನ್ಸೋಲ್ ಅನ್ನು ಆಧರಿಸಿ ಜಾಗತಿಕ ಮಾರುಕಟ್ಟೆಗಳಿಗೆ ಮತ್ತೊಂದು ಪವರ್-ಪ್ಯಾಕ್ಡ್ ಫೋನ್ ಅನ್ನು ಸಿದ್ಧಪಡಿಸುತ್ತಿರಬಹುದು ಎಂದು ಉಲ್ಲೇಖ ಮಾಡಿದೆ. ಐಕ್ಯೂ ಫೆಬ್ರವರಿಯಲ್ಲಿ ಭಾರತದಲ್ಲಿ ಐಕ್ಯೂ ನಿಯೋ 9 ಪ್ರೊ (IQOO Neo 9 Pro) ಅನ್ನು ಘೋಷಣೆ ಮಾಡಿದ್ದು, ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್‌ಸೆಟ್‌ನೊಂದಿಗೆ ಕಾಣಿಸಿಕೊಂಡಿತ್ತು.
ಮೊದಲೇ ಉಲ್ಲೇಖ ಮಾಡಿದಂತೆ ಗೂಗಲ್ ಪ್ಲೇ ಕನ್ಸೋಲ್‌ನಲ್ಲಿ ಹೊಸ ಐಕ್ಯೂ ನಿಯೋ ಸರಣಿಯ ಡಿವೈಸ್ ಅನ್ನು ಪಟ್ಟಿ ಮಾಡಲಾಗಿದೆ. ಇದನ್ನು ಐಕ್ಯೂ ನಿಯೋ 9S ಪ್ರೊ ಎಂದು ಕರೆಯಲಾಗುತ್ತದೆ. ಅಲ್ಲದೆ ಈ ಫೋನ್ V2339A ಮಾದರಿ ಸಂಖ್ಯೆ ಅನ್ನು ಹೊಂದಿದೆ. ಈ ಪಟ್ಟಿಯ ಪ್ರಕಾರ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9300 ಚಿಪ್‌ಸೆಟ್ ಮತ್ತು ಕನಿಷ್ಠ 12GB RAM ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.
ಹಾಗೆಯೇ ಈ ಸ್ಮಾರ್ಟ್‌ಫೋನ್ 2800x1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿರಲಿದೆ ಎಂದು ಉಲ್ಲೇಖ ಮಾಡಲಾಗಿದೆ. ಜೊತೆಗೆ ಆಂಡ್ರಾಯ್ಡ್ 14 ನಿಂದ ರನ್ ಆಗಲಿದೆ ಎಂದು ಹೇಳಲಾಗಿದೆ. ಅದಾಗ್ಯೂ ಕೆಲವು ನಿರೀಕ್ಷಿತ ಫೀಚರ್ಸ್ ಕಡೆ ಗಮನಹರಿಸುವುದಾದರೆ ಈ ಫೋನ್ 6.78 ಇಂಚಿನ 1.5K ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, 144Hz ರಿಫ್ರೆಶ್ ರೇಟ್ ಬೆಂಬಲ ಪಡೆದಿರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಇದರ ಜೊತೆಗೆ 50 ಮೆಗಾಪಿಕ್ಸೆಲ್ IMX920 ಮುಖ್ಯ ಕ್ಯಾಮೆರಾ ಹಾಗೂ 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆಂಗಲ್ ಕ್ಯಾಮೆರಾ, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, 5,160mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಅದರಲ್ಲೂ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾಣಿಸಿಕೊಳ್ಳಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಇನ್ನು ಈ ಫೋನ್‌ನ ಹಿಂದಿನ ಆವೃತ್ತಿಗಳನ್ನು ಗಮನಿಸುವುದಾದರೆ ಅಂದರೆ ಚೀನಾದಲ್ಲಿನ ಐಕ್ಯೂ ನಿಯೋ 9 ಪ್ರೊ ಬಗ್ಗೆ ತಿಳಿಯುವುದಾದರೆ, ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಚಿಪ್‌ಸೆಟ್ ಮತ್ತು ನವೀಕರಿಸಿದ 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿತ್ತು, ಇದೇ ಫೋನ್ ಅನ್ನು ಭಾರತದಲ್ಲಿ ಅಥವಾ ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಐಕ್ಯೂ ನಿಯೋ 9S ಪ್ರೊ ಎಂದು ಸೇಲ್ ಮಾಡಲಾಗುತ್ತದೆ ಎನ್ನುವ ಮಾತುಗಳು ಸಹ ಹೇಳಿಬರುತ್ತಿವೆ.

ಐಕ್ಯೂ 12 ಡೆಸರ್ಟ್ ರೆಡ್ ಆನಿವರ್ಸರಿ ಎಡಿಷನ್ ಲಾಂಚ್: ಈ ನಡುವೆ ಭಾರತದಲ್ಲಿ ಐಕ್ಯೂ 12 (IQOO 12) ಡೆಸರ್ಟ್ ರೆಡ್ ಆನಿವರ್ಸರಿ ಎಡಿಷನ್ ಅನ್ನು ಅನಾವರಣ ಮಾಡಲಾಗಿದೆ. ಈ ಫ"ಓನ್ ಅನ್ನು ಲೆಜೆಂಡ್ ಮತ್ತು ಆಲ್ಫಾ ಬಣ್ಣಗಳಲ್ಲಿ ಕಳೆದ ವರ್ಷ ಬಿಡುಗಡೆ ಮಾಡಿತ್ತು. ಈಗ ಫೋನ್‌ನ ಕೆಂಪು ಆವೃತ್ತಿಯನ್ನು ಭಾರತದಲ್ಲಿ ಘೋಷಣೆ ಮಾಡಿದೆ. ಇದನ್ನು ಡೆಸರ್ಟ್ ರೆಡ್ ಆನಿವರ್ಸರಿ ಎಡಿಷನ್ ಎಂದು ಕರೆದಿದೆ. ಅಲ್ಲದೆ ಕಂಪನಿಯು ಭಾರತದಲ್ಲಿ ತನ್ನ 4 ನೇ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿದೆ.


Click it and Unblock the Notifications








