ಐಕ್ಯೂ ಪ್ಯಾಡ್ 2, ಪ್ಯಾಡ್ 2 ಪ್ರೊ ಲಾಂಚ್! ಫೀಚರ್ಸ್ ಏನು? ಬೆಲೆ ಎಷ್ಟು?
ಐಕ್ಯೂ ಸ್ಮಾರ್ಟ್‌ಫೋನ್‌ಗಳ ( IQOO Smartphone) ವಿಭಾಗದಲ್ಲಿ ಮಾತ್ರವಲ್ಲದೆ ಇನ್ಮುಂದೆ ಟ್ಯಾಬ್ಲೆಟ್ (Tablet) ವಿಭಾಗದಲ್ಲೂ ಐಕ್ಯೂ ಭರ್ಜರಿಯಾಗಿ ಸೌಂಡ್ ಮಾಡಲಿದೆ. ಐಕ್ಯೂ ಪ್ಯಾಡ್ 2 ಸರಣಿಯು ಚೀನಾದಲ್ಲಿ ಅಧಿಕೃತವಾಗಿದ್ದು, ಇದರಲ್ಲಿ ಎರಡು ಡಿವೈಸ್‌ಗಳನ್ನು ಕಾಣಬಹುದಾಗಿದೆ. ಒಂದು ಐಕ್ಯೂ ಪ್ಯಾಡ್ 2 ಮತ್ತೊಂದು ಪ್ಯಾಡ್ 2 ಪ್ರೊ(IQOO Pad 2, IQOO Pad 2 Pro). ಇದು ಕ್ರಮವಾಗಿ ಸ್ನಾಪ್‌ಡ್ರಾಗನ್ ಮತ್ತು ಡೈಮೆನ್ಸಿಟಿ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಈ ಎರಡೂ ಡಿವೈಸ್ ಗಳ ಪ್ರಮುಖ ಫೀಚರ್ಸ್ ಹಾಗೂ ಇವುಗಳ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಐಕ್ಯೂ ಪ್ಯಾಡ್ 2: ಐಕ್ಯೂ ಪ್ಯಾಡ್ 2 12.05 ಇಂಚಿನ ಎಲ್‌ಸಿಡಿ ಪ್ಯಾನೆಲ್ ಅನ್ನು ಹೊಂದಿದ್ದು, ಇದು 2800 x 1968 ಪಿಕ್ಸೆಲ್ 2.8K ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 7.1:5 ಆಕಾರ ಅನುಪಾತ, 144Hz ವರೆಗೆ ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ 600 ಬ್ರೈಟ್‌ನೆಸ್, HDRk, ಬೆಂಬಲ P3 ಬಣ್ಣದ ಹರವು, ಮತ್ತು 10-ಬಿಟ್ ಬಣ್ಣದ ಬೆಂಬಲವನ್ನು ಕಾಣಬಹುದಾಗಿದೆ.

ಹಾಗೆಯೇ ಈ ಡಿವೈಸ್ 5 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಎಲ್ಇಡಿ ಫ್ಲ್ಯಾಶ್‌ನೊಂದಿಗೆ 8 ಮೆಗಾಪಿಕ್ಸೆಲ್ ರಿಯಲ್ ಕ್ಯಾಮೆರಾವನ್ನು ಹೊಂದಿದ್ದು, ಸ್ನಾಪ್‌ಡ್ರಾಗನ್ 8s ಜನ್ 3 ಚಿಪ್‌ಸೆಟ್, 8 GB / 12 GB LPDDR5x RAM ಮತ್ತು 44W ವೇಗದ ಚಾರ್ಜಿಂಗ್‌ನೊಂದಿಗೆ 10,000mAh ಸಾಮರ್ಥ್ಯದ ಬ್ಯಾಟರಿಯಿಂದ ರನ್ ಆಗಲಿದೆ. ಇನ್ನು ಟ್ಯಾಬ್ಲೆಟ್ 128 GB (UFS 3.1), 256 GB (UFS 4.0, ಮತ್ತು 512 GB (UFS 4.0) ನಂತಹ ಬಹು ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದೆ.
ಐಕ್ಯೂ ಪ್ಯಾಡ್ 2 ಇತರ ಫೀಚರ್ಸ್ ಬಗ್ಗೆ ಹೇಳುವುದಾದರೆ ಆರು-ಸ್ಪೀಕರ್ ಸಿಸ್ಟಮ್, 3D ವಿಸಿ ಕೂಲಿಂಗ್ ಸಿಸ್ಟಮ್ (27500mm2 ಶಾಖ ಪ್ರಸರಣ ಪ್ರದೇಶ), ವೈ ಫೈ 802.11ac, ಬ್ಲೂಟೂತ್ ಆವೃತ್ತಿ 5.4, ಮತ್ತು ಯುಎಸ್‌ಬಿ ಟೈಪ್ ಸಿ (USB 3.2 Gen 1) ಬೆಂಬಲ ಪಡೆದಿದೆ. ಉಳಿದಂತೆ ಇದು 266.3 x 192 x 6.57mm ಅಳತೆ ಮತ್ತು 589.2 ಗ್ರಾಂ ತೂಕ ಹೊಂದಿದೆ.

ಐಕ್ಯೂ ಪ್ಯಾಡ್ 2 ಪ್ರೊ ಫೀಚರ್ಸ್: ಇನ್ನು ಮತ್ತೊಂದು ಡಿವೈಸ್‌ನ ಬಗ್ಗೆ ತಿಳಿಸುವುದಾದರೆ ಇದು 289.56 x 198.32 x 6.64mm ಅಳತೆ ಮತ್ತು 679 ಗ್ರಾಂ ತೂಕ ಹೊಂದಿದ್ದು, 13-ಇಂಚಿನ ಎಲ್‌ಸಿಡಿ ಪ್ಯಾನೆಲ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 3096 x 2064 ಪಿಕ್ಸೆಲ್‌ಗಳ 3K ರೆಸಲ್ಯೂಶನ್, 3:2 ಆಕಾರ ಅನುಪಾತ, 144Hz ರಿಫ್ರೆಶ್ ರೇಟ್, 240Hz ಟಚ್ ಮಾದರಿ ರೇಟ್, 900 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಮತ್ತು 10-ಬಿಟ್ ಬಣ್ಣಗಳನ್ನು ನೀಡುತ್ತದೆ.
ಈ ಡಿವೈಸ್ ಮುಂಭಾಗದಲ್ಲಿ, ಇದು 8-ಮೆಗಾಪಿಕ್ಸೆಲ್ ಅನ್ನು ಹೊಂದಿದ್ದು, ಅದರ ಹಿಂಭಾಗದಲ್ಲಿ ಎಲ್ಇಡಿ ಫ್ಲ್ಯಾಷ್ನೊಂದಿಗೆ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ ಡೈಮೆನ್ಸಿಟಿ 9300 ಪ್ಲಸ್ ಚಿಪ್‌ಸೆಟ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB / 12 GB / 16 GB LPDDR5x RAM ಮತ್ತು 66W ವೇಗದ ಚಾರ್ಜಿಂಗ್‌ನೊಂದಿಗೆ 11,500mAh ಸಾಮರ್ಥ್ಯದ
ಇದು UFS 4.0 ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇರಲಿದ್ದು, 256 GB ಮತ್ತು 512 GB ಆಯ್ಕೆಯ ಡಿವೈಸ್ ಅನ್ನು ಕಾಣಬಹುದಾಗಿದೆ. ಇನ್ನು ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಈ ಡಿವೈಸ್ ವೈ ಫೈ 7, ಬ್ಲೂಟೂತ್ ಆವೃತ್ತಿ 5.4, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ (USB 3.2 ಜನ್ 1) ಅನ್ನು ನೀಡುತ್ತದೆ. ಜೊತೆಗೆ ಎಂಟು-ಸ್ಪೀಕರ್ ಸಿಸ್ಟಮ್ ಮತ್ತು 37000mm2 ಶಾಖ ಪ್ರಸರಣ ಪ್ರದೇಶದೊಂದಿಗೆ 3D VC ಕೂಲಿಂಗ್ ವ್ಯವಸ್ಥೆಯನ್ನು ಒಳಗೊಂಡಿವೆ.

ಐಕ್ಯೂ ಪ್ಯಾಡ್ ಬೆಲೆ ಹಾಗೂ ಲಭ್ಯತೆ: ಎರಡೂ ಮಾದರಿಗಳು ಕೀಬೋರ್ಡ್ ಮತ್ತು ಸ್ಟೈಲಸ್‌ನಂತಹ ಐಚ್ಛಿಕ ಬಿಡಿಭಾಗಗಳನ್ನು ಬೆಂಬಲಿಸುತ್ತವೆ. ಬೆಲೆಗೆ ಬಂದಾಗ, ಪ್ರೊ ವೇರಿಯಂಟ್‌ನ 8GB+256GB ವೇರಿಯಂಟ್‌ಗೆ 3,399 ಯುವಾನ್, 12GB+256GB ಗೆ 3,699 ಯುವಾನ್ ಹಾಗೂ 16GB+512GB ಗೆ 4,099 ಯುವಾನ್‌ಗೆ ನಿಗದಿ ಮಾಡಲಾಗಿದೆ. ಇದರೊಂದಿಗೆ ಪ್ಯಾಡ್ 2 ನ 12GB+512GB ವೇರಿಯಂಟ್‌ಗೆ 2,499 ಯುವಾನ್ ನಿಗದಿ ಮಾಡಲಾಗಿದೆ.


Click it and Unblock the Notifications








